ಶಾಲೆಯ ಸಂಸತ್‌ಗಾಗಿ ಮಕ್ಕಳ ಚುನಾವಣೆ: ಗ್ರಾಮಾಂತರ ಪ್ರದೇಶದಲ್ಲೂ ಡಿಜಿಟಲ್ ಇಂಡಿಯಾದ ಡಿಂಡಿಮ

ದಾವಣಗೆರೆ: ಬಹುತೇಕ ಶಾಲೆಗಳಲ್ಲಿ ಶಾಲೆಯ ಸಂಸತ್‌ಗಾಗಿ ಚುನಾವಣೆ ನಡೆಯುತ್ತಿದೆ. ಈ ಶಾಲಾ ಮಟ್ಟದ ಚುನಾವಣೆಯನ್ನೂ ಈಗ ಬಹುತೇಕ ಶಾಲೆಗಳಲ್ಲಿ ಆ ಶಾಲೆಯ ಸಂಸತ್‌ಗಾಗಿ ಚುನಾವಣೆ ನಡೆಯುತ್ತಿದೆ.

ಈ ಶಾಲಾ ಮಟ್ಟದ ಚುನಾವಣೆಯನ್ನೂ ಆಧುನಿಕ ತಂತ್ರಜ್ಞಾನವನ್ನು ಬಳಸಿ, ಕಾಗದ ರಹಿತವಾಗಿ (ಬ್ಯಾಲೆಟ್ ಪೇಪರ್ ಇಲ್ಲದೆ) ಮಾಡುವ ಮೂಲಕ ದಾವಣಗೆರೆ ತಾಲ್ಲೂಕಿನ ಮೆಳ್ಳೇಕಟ್ಟೆ ಗ್ರಾಮದ ಶ್ರೀ ತರಳಬಾಳು ಆಂಗ್ಲ ಮಾಧ್ಯಮ ಶಾಲೆ  ಗ್ರಾಮಾಂತರ ಪ್ರದೇಶದಲ್ಲೂ ಡಿಜಿಟಲ್ ಇಂಡಿಯಾದ ಡಿಂಡಿಮ ಬಾರಿಸಿದೆ.

ವಿಧಾನಸಭೆ, ಲೋಕಸಭೆಗಳಿಗೆ ಚುನಾವಣೆ ನಡೆಯುವಂತೆ ಆಧುನಿಕ ಆಪ್‌ಗಳನ್ನು ಬಳಸಿ, ಮೊಬೈಲ್‌ನ್ನೇ ಮತಪೆಟ್ಟಿಗೆಯನ್ನಾಗಿ ಮಾಡಿ ಕಾಗದ ರಹಿತವಾಗಿ ಚುನಾವಣೆ ನಡೆದದ್ದು ವಿಶೇಷ. ಆ ಮೂಲಕ ಮಕ್ಕಳಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆಯೊಂದಿಗೆ ತಂತ್ರಜ್ಞಾನದ ಪರಿಚಯ ಮಾಡಿಸಿದ್ದು ಈ ಶಾಲೆಯ ಹೆಗ್ಗಳಿಕೆ.

ಶಾಲೆಯ ಸಂಸತ್‌ಗಾಗಿ ಮಕ್ಕಳ ಚುನಾವಣೆ: ಗ್ರಾಮಾಂತರ ಪ್ರದೇಶದಲ್ಲೂ ಡಿಜಿಟಲ್ ಇಂಡಿಯಾದ ಡಿಂಡಿಮ

೬ ರಿಂದ ೧೦ರ ವರೆಗಿನ ಪ್ರತಿ ತರಗತಿಯನ್ನು ಒಂದು ಕ್ಷೇತ್ರವನ್ನಾಗಿ ಪರಿಗಣಿಸಲಾಗಿತ್ತು. ಪ್ರತಿ ತರಗತಿಯಿಂದ ಮೂವರಿಗೆ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು. ಹಾಗೆ ಸ್ಪರ್ಧಿಸಿದ ಆಕಾಂಕ್ಷಿ ಮಕ್ಕಳು, ತಾವು ಗೆದ್ದು ಬಂದಲ್ಲಿ ಏನು ಮಾಡುತ್ತೇವೆ ಎಂಬ ಯೋಜನೆಯನ್ನು/ ಪ್ರಣಾಳಿಕೆಯನ್ನು ತಿಳಿಸಲು ಅವಕಾಶ ನೀಡಲಾಗಿತ್ತು.

ಮಕ್ಕಳಿಗೆ ಚುನಾವಣೆಯ ಮಹತ್ವ ಮತ್ತು ವಿಧಾನವನ್ನು ತಿಳಿಸಲು ಈ ಶಾಲಾ ಹಂತದ ಚುನಾವಣೆಯನ್ನು ಕೂಡಾ ವ್ಯವಸ್ಥಿತವಾಗಿ ನಡೆಸಲಾಗಿತ್ತು. ಮುಖ್ಯೋಪಾಧ್ಯಾಯಿನಿ ರಶ್ಮಿ ಬಿ.ಎಂ ಚುನಾವಣಾ ಆಯೋಗದ ಆಯುಕ್ತರಂತೆ ಒಂದು ವಾರದ ಮೊದಲೇ ಚುನಾವಣೆಯ ಕುರಿತು ಅಧಿಸೂಚನೆಯನ್ನು ಹೊರಡಿಸಿದ್ದರು. ಅವರೇ ನೇಮಿಸಿದ ಸಹ ಶಿಕ್ಷಕಿ ನೇತ್ರಾವತಿ ಡಿ.ಎಮ್ ಚುನಾವಣಾಧಿಕಾರಿಗಳಾಗಿ ಎಲ್ಲಾ ಪ್ರಕ್ರಿಯೆಗಳನ್ನು ಸಮರ್ಥವಾಗಿ ನಿರ್ವಹಿಸಿದರು. ಸಹ ಶಿಕ್ಷಕ ಠಾಕ್ರಾ ನಾಯಕ್ ಇವರಿಗೆ ಸಹಕರಿಸಿದ್ದರು.

ಒಟ್ಟು ಎರಡು ಮೊಬೈಲ್‌ಗಳಲ್ಲಿ ಈ ನೂತನ ಆಪ್‌ನ್ನು ಅಳವಡಿಸಿ ಎರಡು ಮತಗಟ್ಟೆಗಳನ್ನಾಗಿ ಮಾಡಲಾಗಿತ್ತು. ೬ ರಿಂದ ೧೦ ನೇ ತರಗತಿಯ ಎಲ್ಲಾ ಮಕ್ಕಳು, ತಮ್ಮ ಆಧಾರ್    ಕಾರ್ಡನ್ನು ಮತದಾರರ ಗುರುತಿನ ಚೀಟಿಯನ್ನಾಗಿ ಬಳಸಿದ್ದರು. ನಿಯೋಜಿಸಿದ ಶಿಕ್ಷಕರು, ಪ್ರತಿ ಮಗುವಿನ ಬೆರಳಿಗೆ ಮತದಾನದ ಶಾಯಿಯನ್ನು ಹಾಕುವ ವ್ಯವಸ್ಥೆ ಮಾಡಲಾಗಿತ್ತು.

ಮಕ್ಕಳು ಶಿಸ್ತಿನಿಂದ ಮತ್ತು ಅಷ್ಟೇ ಉತ್ಸಾಹದಿಂದ ಮತದಾನ ಮಾಡಿದರು. ಮಕ್ಕಳಲ್ಲಿ ನಾಯಕತ್ವವನ್ನು ಬೆಳೆಸುವುದರೊಂದಿಗೆ, ಪ್ರಜಾಪ್ರಭುತ್ವದ-ಮತದಾನದ ಮಹತ್ವವನ್ನು ತಿಳಿಸಲು ತಂತ್ರಜ್ಞಾನವನ್ನು ಬಳಸಿದ ಈ ಶಾಲೆಯ ಪ್ರಯತ್ನ ಶ್ಲಾಘನೀಯವಾದುದು. ಈ ಸಮಯದಲ್ಲಿ ಶಾಲೆಯ ಸ್ಥಳೀಯ ಸಲಹಾ ಸಮಿತಿಯ ಸದಸ್ಯರು ಭಾಗವಹಿಸಿದ್ದರು.

ತಂತ್ರಜ್ಞಾನವನ್ನು ಬಳಸಿ, ಕಾಗದ ರಹಿತವಾಗಿ (ಬ್ಯಾಲೆಟ್ ಪೇಪರ್ ಇಲ್ಲದೆ) ಮಾಡುವ ಮೂಲಕ ದಾವಣಗೆರೆ ತಾಲ್ಲೂಕಿನ ಮೆಳ್ಳೇಕಟ್ಟೆ ಗ್ರಾಮದ ಶ್ರೀ ತರಳಬಾಳ ಆಂಗ್ಲ ಮಾಧ್ಯಮ ಶಾಲೆ ಗ್ರಾಮಾಂತರ ಪ್ರದೇಶದಲ್ಲೂ ಡಿಜಿಟಲ್ ಇಂಡಿಯಾದ ಡಿಂಡಿಮ ಬಾರಿಸಿದೆ.

ವಿಧಾನಸಭೆ, ಲೋಕಸಭೆಗಳಿಗೆ ಚುನಾವಣೆ ನಡೆಯುವಂತೆ ಆಧುನಿಕ ಆಪ್‌ಗಳನ್ನು ಬಳಸಿ, ಮೊಬೈಲ್‌ನ್ನೇ ಮತಪೆಟ್ಟಿಗೆಯನ್ನಾಗಿ ಮಾಡಿ ಕಾಗದ ರಹಿತವಾಗಿ ಚುನಾವಣೆ ನಡೆದದ್ದು ವಿಶೇಷ. ಆ ಮೂಲಕ ಮಕ್ಕಳಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆಯೊಂದಿಗೆ ತಂತ್ರಜ್ಞಾನದ ಪರಿಚಯ ಮಾಡಿಸಿದ್ದು ಈ ಶಾಲೆಯ ಹೆಗ್ಗಳಿಕೆ.

೬ ರಿಂದ ೧೦ರ ವರೆಗಿನ ಪ್ರತಿ ತರಗತಿಯನ್ನು ಒಂದು ಕ್ಷೇತ್ರವನ್ನಾಗಿ ಪರಿಗಣಿಸಲಾಗಿತ್ತು. ಪ್ರತಿ ತರಗತಿಯಿಂದ ಮೂವರಿಗೆ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು. ಹಾಗೆ ಸ್ಪರ್ಧಿಸಿದ ಆಕಾಂಕ್ಷಿ ಮಕ್ಕಳು, ತಾವು ಗೆದ್ದು ಬಂದಲ್ಲಿ ಏನು ಮಾಡುತ್ತೇವೆ ಎಂಬ ಯೋಜನೆಯನ್ನು/ ಪ್ರಣಾಳಿಕೆಯನ್ನು ತಿಳಿಸಲು ಅವಕಾಶ ನೀಡಲಾಗಿತ್ತು.

ಮಕ್ಕಳಿಗೆ ಚುನಾವಣೆಯ ಮಹತ್ವ ಮತ್ತು ವಿಧಾನವನ್ನು ತಿಳಿಸಲು ಈ ಶಾಲಾ ಹಂತದ ಚುನಾವಣೆಯನ್ನು ಕೂಡಾ ವ್ಯವಸ್ಥಿತವಾಗಿ ನಡೆಸಲಾಗಿತ್ತು. ಮುಖ್ಯೋಪಾಧ್ಯಾಯಿನಿ ರಶ್ಮಿ ಬಿ.ಎಂ ಚುನಾವಣಾ ಆಯೋಗದ ಆಯುಕ್ತರಂತೆ ಒಂದು ವಾರದ ಮೊದಲೇ ಚುನಾವಣೆಯ ಕುರಿತು ಅಧಿಸೂಚನೆಯನ್ನು ಹೊರಡಿಸಿದ್ದರು. ಅವರೇ ನೇಮಿಸಿದ ಸಹ ಶಿಕ್ಷಕಿ ನೇತ್ರಾವತಿ ಡಿ.ಎಮ್ ಚುನಾವಣಾಧಿಕಾರಿಗಳಾಗಿ ಎಲ್ಲಾ ಪ್ರಕ್ರಿಯೆಗಳನ್ನು ಸಮರ್ಥವಾಗಿ ನಿರ್ವಹಿಸಿದರು. ಸಹ ಶಿಕ್ಷಕ ಠಾಕ್ರಾ ನಾಯಕ್ ಇವರಿಗೆ ಸಹಕರಿಸಿದ್ದರು.

ಒಟ್ಟು ಎರಡು ಮೊಬೈಲ್‌ಗಳಲ್ಲಿ ಈ ನೂತನ ಆಪ್‌ನ್ನು ಅಳವಡಿಸಿ ಎರಡು ಮತಗಟ್ಟೆಗಳನ್ನಾಗಿ ಮಾಡಲಾಗಿತ್ತು. ೬ ರಿಂದ ೧೦ ನೇ ತರಗತಿಯ ಎಲ್ಲಾ ಮಕ್ಕಳು, ತಮ್ಮ ಆಧಾರ್ ಕಾರ್ಡ್ನ್ನು ಮತದಾರರ ಗುರುತಿನ ಚೀಟಿಯನ್ನಾಗಿ ಬಳಸಿದ್ದರು. ನಿಯೋಜಿಸಿದ ಶಿಕ್ಷಕರು, ಪ್ರತಿ ಮಗುವಿನ ಬೆರಳಿಗೆ ಮತದಾನದ ಶಾಯಿಯನ್ನು ಹಾಕುವ ವ್ಯವಸ್ಥೆ ಮಾಡಲಾಗಿತ್ತು.

ಮಕ್ಕಳು ಶಿಸ್ತಿನಿಂದ ಮತ್ತು ಅಷ್ಟೇ ಉತ್ಸಾಹದಿಂದ ಮತದಾನ ಮಾಡಿದರು. ಮಕ್ಕಳಲ್ಲಿ ನಾಯಕತ್ವವನ್ನು ಬೆಳೆಸುವುದರೊಂದಿಗೆ, ಪ್ರಜಾಪ್ರಭುತ್ವದ-ಮತದಾನದ ಮಹತ್ವವನ್ನು ತಿಳಿಸಲು ತಂತ್ರಜ್ಞಾನವನ್ನು ಬಳಸಿದ ಈ ಶಾಲೆಯ ಪ್ರಯತ್ನ ಶ್ಲಾಘನೀಯವಾದುದು. ಈ ಸಮಯದಲ್ಲಿ ಶಾಲೆಯ ಸ್ಥಳೀಯ ಸಲಹಾ ಸಮಿತಿಯ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!