ಸಿ ಎಂ,ಸಚಿವರೊಂದಿಗೆ ಅರುಣ್ ಸಿಂಗ್ ಸಭೆ, ಬಿ ಎಸ್ ಯಡಿಯೂರಪ್ಪಗೆ ಉಸ್ತುವಾರಿ ನಾಯಕರಿಂದ ಶಹಬ್ಬಾಸ್ ಗಿರಿ

ಬೆಂಗಳೂರು: ಕೋವಿಡ್ ನ‌ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಿಎಂ ಬದಲಾವಣೆ ಇಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿ ಸಂಘಟನೆ ಮತ್ತು ಕೋವಿಡ್ ಸಂಬಂಧ ಚರ್ಚೆ ನಡೆಸಿ ಮಾತನಾಡಿರುವ ಅವರು, ಕರೋನಾದ ಈ ಸಂದರ್ಭದಲ್ಲಿ ಎರಡು ಪ್ಯಾಕೇಜ್‌ಗಳ ಮೂಲಕ ಸಂಕಷ್ಟದಲ್ಲಿರುವವರಿಗೆ ಸರ್ಕಾರ ನೆರವಾಗಿದೆ. 1,250 ಕೋಟಿ ರೂ., ಮತ್ತು 500 ಕೋಟಿ ರೂ., ಎರಡು ಪ್ಯಾಕೇಜ್ ಪ್ರಕಟಿಸಲಾಗಿದೆ. ಅಲ್ಲದೆ, ಕೋವಿಡ್‌ನಿಂದ ಮೃತಪಟ್ಟ ಬಡವರಿಗೆ ತಲಾ ಒಂದು ಲಕ್ಷ ನೀಡಲು 300 ಕೋಟಿ ನೀಡುವುದಾಗಿ ರಾಜ್ಯ ಸರಕಾರ ಪ್ರಕಟಿಸಿದ್ದಿ, ಇವೆಲ್ಲವೂ ಉತ್ತಮ ಕ್ರಮಗಳಾಗಿವೆ ಎಂದು ಅವರು ಕೆ.ಕೆ. ಅತಿಥಿಗೃಹದ ಬಳಿ ಪತ್ರಕರ್ತರಿಗೆ ತಿಳಿಸಿದರು.

ಮುಖ್ಯಮಂತ್ರಿ, ಸಚಿವರು, ಸರಕಾರ ಉತ್ತಮ ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ, ಇಂತಹ ಸಂದರ್ಭದಲ್ಲಿ ಜನರಿಗೆ ಸ್ಪಂದಿಸುವ ಬದಲು ಜೆಡಿಎಸ್ ಕ್ವಾರಂಟೈನ್‌ನಲ್ಲಿ ಇದೆ. ಕಾಂಗ್ರೆಸ್‌ನವರು ಕಚ್ಚಾಟದಲ್ಲಿ ನಿರತರಾಗಿದ್ದಾರೆ ಎಂದು ಚಾಟಿ ಬೀಸಿದರು. ಕೋವಿಡ್ ಸಂಕಷ್ಟದಲ್ಲಿರುವವರಿಗೆ ನೆರವಾಗುವ ನಿಟ್ಟಿನಲ್ಲಿ ಪಕ್ಷವು ‘ಸೇವಾ ಹೀ ಸಂಘಟನ್’ ಮೂಲಕ ಅತ್ಯುತ್ತಮವಾಗಿ ಕಾರ್ಯ ನಿರತವಹಿಸಿದೆ ಎಂದು ಕೊಂಡಾಡಿದರು.

Leave a Reply

Your email address will not be published. Required fields are marked *

error: Content is protected !!