ದಾವಣಗೆರೆ ಜಿಲ್ಲಾ‌ ಕಾಂಗ್ರೆಸ್ ಸಾಮಾಜಿಕ ಜಾಲತಾಣದಿಂದ ಆನ್ ಲೈನ್ ಸಭೆ

ದಾವಣಗೆರೆ: ಕೆ.ಪಿ.ಸಿ.ಸಿ.ಸಾಮಾಜಿಕ ಜಾಲತಾಣದ ರಾಜ್ಯಧ್ಯಕ್ಷರಾದ ಬಿ.ಆರ್.ನಾಯ್ಡು ಹಾಗೂ ಬೆಂಗಳೂರು ವಿಭಾಗದ ಅಧ್ಯಕ್ಷರಾದ ವಾಸುದೇವ ಮೂರ್ತಿ ಅವರ ನೇತೃತ್ವದಲ್ಲಿ ಇಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ‌ಜಾಲತಾಣದ ಸಭೆಯನ್ನು ಆನ್ಲೈನ್ ಜೂಮ್ ಮುಖಾಂತರ ನಡೆಸಲಾಯಿತು.

ಸಭೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತೈಲ ಬೆಲೆಗಳ ಹೆಚ್ಚಳದಿಂದಾಗಿ ಜನ ಸಾಮನ್ಯರಿಗೆ ಹಾಗಿರುವ ತೊಂದರೆಗಳು , ದಿನ ಬಳಕೆಯ ‌ಗೃಹ ಉಪಯೋಗಿ ದಿನಸಿ ಬೆಲೆಗಳ ಹೆಚ್ಚಳದಿಂದ ಹಾಗಿರುವ ತೊಂದರೆಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿ.ಆರ್.ನಾಯ್ಡು ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ‌ಅಧಿಕಾರಕ್ಕೆ ಬಂದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಜನರಿಗೆ ಕಾಂಗ್ರೆಸ್ ನಾಯಕರುಗಳ ಮೇಲೆ ಅಪ ಪ್ರಚಾರ , ಸುಳ್ಳುಗಳನ್ನು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ , ಇವರು ಕೆಲ ವ್ಯಕ್ತಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಸುಳ್ಳುಗಳ ಭಾಷಣ ಮಾಡಿಸಿ ಜನರಿಗೆ ಕಾಂಗ್ರೆಸ್ ಪಕ್ಷದ ಮೇಲೆ‌‌ ಅಪನಂಬಿಕೆ ಬರುವಂತೆ ಮಾಡಿದರು ಹಾಗಾಗಿ ನಾವು ನಮ್ಮ ಜನರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸತ್ಯವನ್ನು ತಿಳಿಸುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ನಂತರ ಮಾತನಾಡಿದ ವಾಸುದೇವ ಮುರ್ತಿ ಅವರು 70 ವರ್ಷಗಳಲ್ಲಿ ಕಾಂಗ್ರೆಸ್ ಮಾಡಿದ ಅಭಿವೃದ್ಧಿಯನ್ನು ಈ ಬಿಜೆಪಿಯವರು ಏಳೇ ವರ್ಷದಲ್ಲಿ ಹಾಳುಮಾಡಿದ್ದಾರೆ , ಜನರಿಗೆ ನಾವು ಸತ್ಯವನ್ನು ತಿಳಿಸುವ ಪ್ರಯತ್ನ ಮಾಡಬೇಕಿದೆ ಕಾಂಗ್ರೆಸ್ ಪಕ್ಷದಲ್ಲಿ ಮಾಡಿದಂತ ಸಾಧನೆಗಳನ್ನು ಗ್ರಾಮಂತರ ಮಟ್ಟದ ಜನರಿಗೆ ತಲುಪಿಸಬೇಕಿದೆ ಎಂದು ಹೇಳಿದರು , ಬಿಜೆಪಿ ಸಾಮಾಜಿಕ ಜಾಲತಾಣದವರು ಯುವಕರಿಗೆ ಹಣವನ್ನು ಕೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ಜನರಿಗೆ ತಪ್ಪು ‌ಸಂದೇಶ ರವಾನಿಸುತ್ತರೆ ಇಂತಹ ವಿಷಯಗಳ ವಿರುದ್ದ ನಾವು ಹೋರಡಬೇಕೆಂದು ಎಂದು ತಿಳಿಸಿದರು.

ಸಭೆಯಲ್ಲಿ ದೀಪಕ್ ಸಿಂಗ್ , ಸೌಗಂಧಿಕ , ದೇವಪುತ್ರ , ಜಿಲ್ಲಾಧ್ಯಕ್ಷರಾದ ಗೋವಿಂದ್ ಹಾಲೇಕಲ್ಲ್ , ತಾ.ಪಂ.‌‌ಸದಸ್ಯರಾದ ಆಶಾ ಮುರುಳಿ‌, ದಾವಣಗೆರೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರುಗಳು , ಬ್ಲಾಕ್ ಅಧ್ಯಕ್ಷರುಗಳು ಹಾಗೂ ಕಾಂಗ್ರೆಸ್ ಪಕ್ಷದ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೈಜೋಡಿಸುವ ಆಸಕ್ತಿ ಇರುವಂತವರು ಉಪಸ್ಥಿತರಿದ್ದರು.

ಗೋವಿಂದ್ ಹಾಲೇಕಲ್.
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರು

Leave a Reply

Your email address will not be published. Required fields are marked *

error: Content is protected !!