ರಾಜ್ಯ / ಕರ್ನಾಟಕ

CM: ದೇವರನ್ನು ನಂಬಿ, ಮೂಢನಂಬಿಕೆಗಳನ್ನು ತ್ಯಜಿಸಿ: ಸಿಎಂ ಸಿದ್ದರಾಮಯ್ಯ ಕರೆ

Share
Share

CM: ಮಾನವ ಸಮಾಜ ನಿರ್ಮಾಣದಲ್ಲಿ ಎಲ್ಲರೂ ಪಾಲುದಾರರಾಗಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಣೇಬೆನ್ನೂರು: ಮಾನವ ಸಮಾಜ ನಿರ್ಮಾಣದಲ್ಲಿ ಎಲ್ಲರೂ ಪಾಲುದಾರರಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಅವರು ಇಂದು ರಾಣಿಬೆನ್ನೂರಿನ ನಿಟ್ಟೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಶ್ರೀ ಬೀರೇಶ್ವರ ಸ್ವಾಮಿ ದೇವಸ್ಥಾನದ 50 ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ಶ್ರೀ ಭಕ್ತ ಕನಕದಾಸರ ಮಹಾದ್ವಾರದ ಉದ್ಘಾಟನೆ ಹಾಗೂ ಧರ್ಮ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಿಟ್ಟೂರಿನ ದೇವಸ್ಥಾನಕ್ಕೆ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ. ಬೀರಲಿಂಗೇಶ್ವರ ದೇವಸ್ಥಾನ ನಿಟ್ಟೂರಿಗೆ ಮಾತ್ರ ಸೀಮಿತವಾಗಿಲ್ಲ. ದೇವನೊಬ್ಬ ನಾಮ ಹಲವು ಎಂದು ಅರ್ಥೈಸಿಕೊಳ್ಳಬೇಕೆಂದರು.

*ನಾಡು ಸರ್ವಜನಾಂಗದ ಶಾಂತಿಯ ತೋಟವಾಗಬೇಕು*

ನಮ್ಮ ನಾಡು, ನಮ್ಮ ದೇಶ ಸರ್ವಜನಾಂಗದ ಶಾಂತಿಯ ತೋಟವಾಗಬೇಕೆಂದು ಬುದ್ಧ, ಬಸವ, ಮಹಾತ್ಮಾ ಗಾಂಧಿ, ಅಂಬೇಡ್ಕರ್ , ಕುವೆಂಪು ಬಯಸಿದ್ದರು. ಅದನ್ನೇ ನಮ್ಮ ಸರ್ಕಾರ ಪಾಲಿಸುತ್ತಿದೆ ಎಂದರು.

*ನಿಟ್ಟೂರಿನ ಸಾಮರಸ್ಯಕ್ಕೆ ದ್ಯೋತಕ*

ಕೇವಲ 13 ಕುರುಬರ ಕುಟುಂಬಗಳಿರುವ ಊರಿನಲ್ಲಿ ಬೀರಲಿಂಗೇಶ್ವರ ದೇವಾಲಯ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವುದು ನಿಟ್ಟೂರಿನ ಸಾಮರಸ್ಯಕ್ಕೆ ದ್ಯೋತಕವಾಗಿದೆ ಎಂದರು.

*ದೇವರನ್ನು ನಂಬಿ, ಮೂಢನಂಬಿಕೆಗಳನ್ನು ತ್ಯಜಿಸಿ*

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಎಂಬ ವಿಚಾರಗಳು ಸಂವಿಧಾನದ ಆಧಾರ ಸ್ತಂಭಗಳು. ದೇವರ ಪೂಜೆ ಮಾಡಬೇಕು ಆದರೆ ಮೂಢ ನಂಬಿಕೆಗಳನ್ನು ಇಟ್ಟುಕೊಳ್ಳಬಾರದು. ಬಸವಣ್ಣ ಕರ್ಮಸಿದ್ಧಾಂತವನ್ನು ತಿರಸ್ಕರಿಸಿದ್ದರು ಎನ್ನಿವುದನ್ನು ಸ್ಮರಿಸಬೇಕು ಎಂದರು.

ಅಂಬೇಡ್ಕರ್ ಅವರು ದೇಶದ ಸ್ವಾತಂತ್ರ್ಯ ಸಮಾಜಿಕ, ಆರ್ಥಿಕ ಸ್ವಾತಂತ್ರ್ಯದ ತಳಹದಿಯ ಮೇಲೆ ನಿಂತಿದೆ, ಇಲ್ಲದಿದ್ದರೆ ರಾಜಕೀಯ ಸ್ವಾತಂತ್ರ್ಯ ಯಶಸ್ವಿಯಾಗುವುದಿಲ್ಲ ಎಂದಿದ್ದರು. ಸಮಾನತೆಯ ಆಶಯದಿಂದಲೇ ಭಾಗ್ಯಗಳನ್ನು, ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವುದು ಎಂದರು.

*ಪರಸ್ಪರರನ್ನು ಪ್ರೀತಿಸಿ*

ಇಸ್ಲಾಂ, ಹಿಂದೂ, ಕ್ರಿಶ್ಚಿಯನ್ ಧರ್ಮಗಳು ಜನರನ್ನು ಪ್ರೀತಿಸಬೇಕೆಂದು ಬೋಧಿಸುತ್ತವೆ. ಇದಾದಾಗ ಮಾತ್ರ ಮಾನವ ಸಮಾಜ ನಿರ್ಮಾಣ ಸಾಧ್ಯ.‌
ಸೈದ್ಧಾಂತಿಕವಾಗಿ ನಮ್ಮ ವಿರೋಧಿಗಳಾದರೂ ಜನರನ್ನು ಪ್ರೀತಿಸಬೇಕು ಎಂದರು.

*ಕನಕದಾಸ, ಬಸವಣ್ಣನ ತತ್ವ ಅಳವಡಿಸಿಕೊಳ್ಳಬೇಕು*

ಕುಲದ ನೆಲೆಯನ್ನು ಬಲ್ಲಿರಾ ಎಂದ ಕನಕದಾಸರ ಹಾಗೂ ಇವ ನಮ್ಮವ ಎಂಬ ಬಸವಣ್ಣನ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉನ್ನತ ವಿದ್ಯೆ ಕಲಿತವರೇ ಜಾತಿ ವ್ಯವಸ್ಥೆಯನ್ನು ಪೋಷಿಸುವುದು ನಮ್ಮ ಸಮಾಜದ ದುರಂತ ಎಂದರು.

ದಯೆ, ಕರುಣೆ, ಧರ್ಮದ ಮೂಲವಾಗಬೇಕು ಎಂಬ ಬಸವಣ್ಣನವರ ಮಾತುಗಳನ್ನು ಪಾಲಿಸಬೇಕು ಎಂದರು.

*ನಾನು ಬಸವಣ್ಣನ ಅನುಯಾಯಿ*

ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ನಮ್ಮ ಸರ್ಕಾರ ಘೋಷಣೆ ಮಾಡಿದೆ. ನಮ್ಮ ಸರ್ಕಾರ ಸರ್ವ ಜನಾಂಗದ ಶಾಂತಿಯ ತೋಟವಾಗಿಸಬೇಕೆನ್ನುವ ಉದ್ದೇಶ ಹೊಂದಿದ್ದು, ನಾನೂ ಕೂಡ ಬಸವಣ್ಣನ ಅನುಯಾಯಿ ಎಂದರು.

*ಅನುದಾನದ ಭರವಸೆ*

ಈ ಬಾರಿ ಮಳೆ ಕೊರತೆಯಾಗಲಿದೆ ಎಂಬ ಮುನ್ಸೂಚನೆಯಿದ್ದು, ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿಸಲಾಗಿದೆ. ರಾಣೆಬೆನ್ನೂರಿನ ವರ್ತುಲ ರಸ್ತೆ ಹಾಗೂ ಸಮುದಾಯ ಭವನಕ್ಕೆ ಅನುದಾನ ನೀಡುವ ಭರವಸೆ ನೀಡಿದರು.

ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ, ಶಾಸಕರಾದ ಬಸವರಾಜ ಶಿವಣ್ಣನವರ್, ಪ್ರಕಾಶ್ ಕೋಳಿವಾಡ, ಯಾಸಿರ್ ಖಾನ್ ಪಠಾಣ್, ಯು. ಬಿ.ಬಣಕಾರ್ , ಹುಬ್ಬಳ್ಳಿ ವಿದ್ಯುತ್ ಪ್ರಸರಣ ನಿಗಮದ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ ಮೊದಲಾದವರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Don't Miss

ದಾವಣಗೆರೆರಾಜಕೀಯರಾಜ್ಯ / ಕರ್ನಾಟಕ

BSY: ಚಿತ್ರದುರ್ಗದಲ್ಲಿ ನಾಳೆ ‘ಬಿಎಸ್ ವೈ ಅಭಿಮಾನೋತ್ಸವ’ದ ಅಬ್ಬರ: ಅಮಿತ್ ಶಾ ಭಾಗಿ, ದಾವಣಗೆರೆಯಿಂದ ಹೊರಟ ಯಡಿಯೂರಪ್ಪ ಕುಟುಂಬ!

ದಾವಣಗೆರೆ/ಚಿತ್ರದುರ್ಗ: (BSY) ಕರ್ನಾಟಕ ರಾಜಕಾರಣದ ಧ್ರುವತಾರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಾರ್ವಜನಿಕ ಜೀವನದ 50 ವರ್ಷಗಳ ಸುವರ್ಣ ಸಂಭ್ರಮದ "ಅಭಿಮಾನೋತ್ಸವ"ಕ್ಕೆ ಕೋಟೆ ನಾಡು ಚಿತ್ರದುರ್ಗ ಸಜ್ಜಾಗಿದೆ. ಮೇ 9ರ...

ಅಪರಾಧದಾವಣಗೆರೆ

Lokayukta: ದಾವಣಗೆರೆ ಪಾಲಿಕೆ ವಲಯ-1ರ ಮೇಲೆ ಲೋಕಾಯುಕ್ತ ದಾಳಿ: ಫೋನ್-ಪೇ ಮೂಲಕ ಲಂಚದ ಆರೋಪ, ದಾಖಲೆಗಳ ಪರಿಶೀಲನೆ

ದಾವಣಗೆರೆ: (Lokayukta) ಮಹಾನಗರ ಪಾಲಿಕೆ ವಲಯ-1ರ ಕಚೇರಿಯಲ್ಲಿ ನಡೆಯುತ್ತಿದ್ದ ಎನ್ನಲಾದ ಸಾಲು ಸಾಲು ಅಕ್ರಮಗಳ ಕುರಿತು ಬಂದ ದೂರುಗಳ ಹಿನ್ನೆಲೆಯಲ್ಲಿ, ಇಂದು ಮುಂಜಾನೆಯಿಂದಲೇ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ತಪಾಸಣೆ...

Related Articles
ದಾವಣಗೆರೆರಾಜ್ಯ / ಕರ್ನಾಟಕ

Lokayukta SP: ದಾವಣಗೆರೆ ನೂತನ ಲೋಕಾಯುಕ್ತ ಎಸ್‌ಪಿಯಾಗಿ ಆ್ಯಂಟನಿ ಜಾನ್ ಅಧಿಕಾರ ಸ್ವೀಕಾರ: ದೂರು ಸಲ್ಲಿಕೆಗೆ ಕರೆ

ದಾವಣಗೆರೆ: (Lokayukta SP) ದಾವಣಗೆರೆ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾಗಿ (ಎಸ್‌ಪಿ) ಆ್ಯಂಟನಿ ಜಾನ್ ಜೆ.ಕೆ...

ದಾವಣಗೆರೆಅಪರಾಧರಾಜ್ಯ / ಕರ್ನಾಟಕ

Sand: ಹರಿಹರ ತುಂಗಭದ್ರಾ ನದಿ ಪಾತ್ರದಲ್ಲಿ ಭಾರಿ ಅಕ್ರಮ ಮರಳು ದಂಧೆ ಶಂಕೆ! ನಿಷೇಧಿತ ಯಂತ್ರಗಳು, ತೆಪ್ಪ ಬಳಸಿ ಮರಳು ಲೂಟಿ!

ಹರಿಹರ (Sand):ದಾವಣಗೆರೆ ಜಿಲ್ಲೆಯ ಹರಿಹರ ನಗರ ವ್ಯಾಪ್ತಿಯ ತುಂಗಭದ್ರಾ ನದಿಯಲ್ಲಿ ಕಾನೂನು ಬಾಹಿರವಾಗಿ ಮರಳು ಗಣಿಗಾರಿಕೆ...

ಜಿಲ್ಲೆಗಳುದೇಶರಾಜ್ಯ / ಕರ್ನಾಟಕ

Vande Mataram: ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಎರಡು ಚರಣ “ವಂದೇ ಮಾತರಂ” ಗೀತೆ ಗಾಯನ: ರಾಜ್ಯ ಸರ್ಕಾರದಿಂದ ಹೊಸ ಆದೇಶ ಜಾರಿ

ಬೆಂಗಳೂರು:(Vande Mararam)ರಾಜ್ಯ ಸರ್ಕಾರದ ವಿವಿಧ ಅಧಿಕೃತ ಕಾರ್ಯಕ್ರಮಗಳು ಹಾಗೂ ಸಮಾರಂಭಗಳಲ್ಲಿ "ವಂದೇ ಮಾತರಂ" ರಾಷ್ಟ್ರೀಯ ಗೀತೆಯನ್ನು...

ಅಪರಾಧದಾವಣಗೆರೆರಾಜ್ಯ / ಕರ್ನಾಟಕ

Medical: ಚಿತ್ರದುರ್ಗ ವೈದ್ಯಕೀಯ ಕಾಲೇಜಿನಲ್ಲಿ ಕೋಟಿಗೂ ಹೆಚ್ಚು ಹಣ ಲೂಟಿ: ಲೋಕಾಯುಕ್ತಕ್ಕೆ ದೂರು

ಚಿತ್ರದುರ್ಗ: (Medical College) ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಸಿಎಂಸಿಆರ್‌ಐ) ನಿರ್ದೇಶಕರಾದ...