ಉಚಿತ ಎಂಬ್ರಾಯ್ಡರಿ ತರಗತಿಗಳ ಸಮಾರೋಪ
ದಾವಣಗೆರೆ: ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಿಂದ ಮಾನ್ಯತೆ ಪಡೆದಿರುವ ಶ್ರೀ ಕಿತ್ತೂರುರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಮಹಿಳಾ ಸಂಘ ಹಾಗೂ ಸುಮೇಧಾ ಫ್ಯಾಷನ್ ಇನ್ಸ್ಟಿಟ್ಯೂಟ್ ಉಡುಪಿ ಇವರ ಸಹಯೋಗದಲ್ಲಿ ನಡೆದ ಉಚಿತ ಎಂಬ್ರಾಯ್ಡರಿ ತರಗತಿಗಳ ಸಮಾರೋಪ ಸಮಾರಂಭವು ಈಚೆಗೆ ಚೇತನಾ ಹೊಟೇಲ್ ಸಭಾಂಗಣದಲ್ಲಿ ಜರುಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಕೌಶಲ್ಯ ತರಬೇತಿ ಕೇಂದ್ರದ ಮುಖ್ಯಸ್ಥೆ ಜೆ. ಶಿಲ್ಪಾ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಬಿಜೆಪಿ ಮುಖಂಡ ಹೆಚ್.ಎಸ್. ನಾಗರಾಜ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಬಸವನಗೌಡ, ಸಾಧನ ಅಶ್ರೀತ್,, ಜಯದೇವ ಹೆಚ್. ಹಾಸಭಾವಿ, ಜಿ.ಕೆ. ಲಿಂಗರಾಜು ಉಪಸ್ಥಿತರಿದ್ದರು.