ಡಾಕ್ಟರೇಟ್ ಪದವಿ ಪುರಸ್ಕೃತ ಅಥಣಿ ವೀರಣ್ಣನವರಿಗೆ ವೀರಶೈವ ಮಹಾಸಭಾದಿಂದ ಅಭಿನಂದನೆ 

ಡಾಕ್ಟರೇಟ್ ಪದವಿ ಪುರಸ್ಕೃತ ಅಥಣಿ ವೀರಣ್ಣನವರಿಗೆ ವೀರಶೈವ ಮಹಾಸಭಾದಿಂದ ಅಭಿನಂದನೆ

ದಾವಣಗೆರೆ : ದಾವಣಗೆರೆಯ ವಿಶ್ವವಿದ್ಯಾಲಯದಿಂದ ಇತ್ತೀಚಿಗೆ ಡಾಕ್ಟರೇಟ್ ಪದವಿ ಪಡೆದ ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ಉಪಾಧ್ಯಕ್ಷರು, ಉದ್ಯಮಿಗಳು, ಹಿರಿಯ ಲೆಕ್ಕಪರಿಶೋಧಕರಾದ ಅಥಣಿ ವೀರಣ್ಣನವರನ್ನು ಇಂದು ಸಂಜೆ ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದಿಂದ ಸನ್ಮಾನಿಸಲಾಯಿತು.

ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಶಾಮನೂರು ಶಿವಶಂಕರಪ್ಪನವರು ಅಥಣಿ ವೀರಣ್ಣನವರನ್ನು ಅಭಿನಂದಿಸಿ ವೀರಣ್ಣನವರ ಪರಿಶ್ರಮವನ್ನು ಗುರುತಿಸಿ ದಾವಣಗೆರೆ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿರುವುದನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಅಣಬೇರು ರಾಜಣ್ಣ, ದಾವಣಗೆರೆ ಜಿಲ್ಲಾ ಅಧ್ಯಕ್ಷ ದೇವರಮನಿ ಶಿವಕುಮಾರ್, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಸಿ.ಕೊಂಡಯ್ಯ, ದಾವಣಗೆರೆ ಜಿಲ್ಲೆಯ ವೀರಶೈವ- ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!