” ಕಾಂಗ್ರೆಸ್ ನ ಭಾಗ್ಯ ಬಜೆಟ್ ಮಹಿಳೆಯರಿಗೆ ಯಾವುದೇ ಸಮಂಜಸವಾದ ಬಜೆಟ್ ಅಲ್ಲ”, ಪುಷ್ಪಾ ವಾಲಿ

ದಾವಣಗೆರೆ : 14ನೇ ಭಾಗ್ಯ ಬಜೆಟ್ ಮಂಡನೆಯಲ್ಲಿ ಮಹಿಳೆಯರಿಗೆ ಯಾವುದೇ ಸಮಂಜಸವಾದ ಮಂಡನೆ ಆಗಿರುವುದಿಲ್ಲ ಎಂದು ದಾವಣಗೆರೆ ಬಿಜೆಪಿ ಮಹಿಳಾ ಮೊರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪಾ ವಾಲಿ ತಿಳಿಸಿದ್ದಾರೆ.
ಬಡ ಜನರ ಪರವಾಗಿರುವುದಿಲ್ಲ , ಮಹಿಳೆಯರಿಗೆ ಆರ್ಥಿಕ ಭದ್ರತೆಗೆ ರಾಜ್ಯ ಸರ್ಕಾರ ಪ್ರತಿ ಮಹಿಳೆಯರಿಗೆ 2000 ಗೃಹಲಕ್ಷಿ ಯೋಜನೆಯಲ್ಲಿ ಕೊಟ್ಟರೆ ಯಾವುದೇ ರೀತಿ ಅನುಕೂಲವಾಗುವುದಿಲ್ಲ ಇಂದಿನ ಬೆಲೆ ಏರಿಕೆ ಆಗಿರುವ ದಿನಸಿ, ಗ್ಯಾಸ್ ಬೆಲೆ ದರ ಕಡಿಮೆ ಮಾಡಿದರೆ ಮಹಿಳೆಯರಿಗೆ ತುಂಬಾ ಅನುಕೂಲವಾಗುತಿತ್ತು ,ಯುವಕರಿಗೆ ಉದ್ಯೋಗ ಭತ್ಯೆ ಕೊಡುವ ಬದಲು ಉದ್ಯೋಗ ಕೊಡಿಸುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಬಹುದಿತ್ತು .