ಹುಬ್ಬಳ್ಳಿಯಲ್ಲಿ ಮೋದಿ ಆಗಮನಕ್ಕೆ ಕ್ಷಣಗಣನೆ..!

ಹುಬ್ಬಳ್ಳಿ : ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನವರಿ 12 ರಂದು ಹುಬ್ಬಳ್ಳಿಗೆ ಆಗಮಿಸುತ್ತಿರುವ ಸಲುವಾಗಿ ಹುಬ್ಬಳ್ಳಿ ಮದುವನಗಿತ್ತಿಯಂತೆ ಶೃಂಗಾರಗೊಂಡಿದೆ. ರಸ್ತೆಗಳೆಲ್ಲ ಸಂಪೂರ್ಣ ಸ್ವಚ್ಛಗೊಂಡು ಕೇಸರಿಮಯವಾಗಿದೆ. ಇಂದು ಮಧ್ಯಾಹ್ನ 3.40 ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಸ್ವಾಗತಿಸಲಿದ್ದಾರೆ ಎನ್ನಲಾಗಿದೆ. ಬಳಿಕ 3.45 ರಿಂದ 4 ಗಂಟೆವರೆಗೂ ಮೋದಿ ರೋಡ್ ಶೋ ನಡೆಸಲಿದ್ದಾರೆ. ಏರ್‌ಪೋರ್ಟ್‌ನಿಂದ ಗೋಕುಲ್ ರಸ್ತೆ, ಅಕ್ಷಯ ಪಾರ್ಕ್, ಹೊಸೂರ್ ಸರ್ಕಲ್, ಐಬಿ ಸರ್ಕಲ್, ದೇಶಪಾಂಡೆ ನಗರ, ಕೋರ್ಟ್ ಸರ್ಕಲ್ ಮೂಲಕ ಹುಬ್ಬಳ್ಳಿ ರೈಲ್ವೆ ಮೈದಾನಕ್ಕೆ ಮೋದಿ ಎಂಟ್ರಿ ಕೊಡಲಿದ್ದಾರೆ. ಸಂಜೆ 4 ಗಂಟೆ ವೇಳೆಗೆ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಮೋದಿ ಚಾಲನೆ ನೀಡಲಿದ್ದಾರೆ. ನಂತರ ಯುವಸಮೂಹವನ್ನು ಉದ್ದೇಶಿಸಿ ಮಾತನಾಡಿ, ಸಂಜೆ 5.35 ಕ್ಕೆ ಹುಬ್ಬಳ್ಳಿ ಏರ್‌ಪೋರ್ಟ್‌ನಿಂದ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ ಎಂಬುವುದಾಗಿ ತಿಳಿದು ಬಂದಿದೆ.