ದಸರಾ ಹಾಗೂ ಈದ್ ಮಿಲಾದ್ ಮೆರವಣಿಗೆಗೆ ಅವಕಾಶ ನೀಡಿಲ್ಲ.! ಮೆರವಣಿಗೆ ವಿಚಾರಕ್ಕೆ ಓರ್ವ ವ್ಯಕ್ತಿಯ ಬಂಧನ, ಯಾಕೆ ಗೊತ್ತಾ.?

ದಾವಣಗೆರೆ : ಕರೋನಾ ವಿರುದ್ಧ ಸಾರಿರುವ ಯುದ್ಧ ಇನ್ನು ಮುಗಿದಿಲ್ಲ ಪ್ರಕರಣಗಳು ಜಿಲ್ಲೆಯಲ್ಲಿ ಅಲ್ಲೊಂದು ಇಲ್ಲೊಂದು ಬರುತ್ತಿದ್ದು.

ದಸರಾ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸರ್ಕಾರವು ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದೆ.
ಈ ಎರಡು ಹಬ್ಬಗಳಿಗೂ ಸಾರ್ವಜನಿಕ ಮೆರವಣಿಗೆ ಅವಕಾಶ ಇರುವುದಿಲ್ಲ.

ಹಿಂದೆ ನಾವು ಎಲ್ಲಾ ಧರ್ಮದ ಮುಖಂಡರನ್ನು ಕರೆಸಿ ಸೌಹಾರ್ದತೆ ಸಭೆ ನಡೆಸಿ ಎರಡು ಹಬ್ಬಗಳಲ್ಲಿ ಯಾವುದೇ ರೀತಿಯ ಸಾರ್ವಜನಿಕ ಮೆರೆವಣಿಗೆ ಅವಕಾಶವೇ ಇರುವುದಿಲ್ಲ ಎಂದು ತಿಳಿಸಿದ್ದೇವೆ.
ಆದರೂ ಒಂದು ಸಮಾಜದ ವ್ಯಕ್ತಿಯು ಸಾಮಾಜಿಕ ಜಾಲತಾಣದಲ್ಲಿ ಧ್ವನಿಮುದ್ರಿತ ಸಂದೇಶವನ್ನು ಕಳುಹಿಸಿದ್ದು ಆ ಕೋಮಿನ ಜನತೆಗೆ ನಾವು ಮೆರವಣಿಗೆ ನಡೆಸುತ್ತೇವೆ ಬನ್ನಿ ಎಂದು ಕರೆ ಕೊಟ್ಟಿದಾನೆ.
ಪೊಲೀಸ್ ಅಧೀಕ್ಷಕರು ಆ ವ್ಯಕ್ತಿಯ ಮೇಲೆ ಈಗಾಗಲೇ ಕೇಸ್ ದಾಖಲಿಸಿದ್ದಾರೆ.
ಒಂದು ವೇಳೆ ಸಾರ್ವಜನಿಕ ಮೆರವಣಿಗೆ ಮಾಡಿದ್ದೆ ಆದರೆ ಅವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಲಾಗುವುದು.

Leave a Reply

Your email address will not be published. Required fields are marked *

error: Content is protected !!