Wild Animals Enters Villages: ಕಾಡು ಪ್ರಾಣಿಗಳಿಂದ ರೋಸಿ ಹೋದ ಗ್ರಾಮಸ್ಥರು.! ಈ ಭಾಗದ ಜನ ನೆಮ್ಮದಿಯಿಂದ ನಿದ್ದೆ ಮಾಡೋದು ಯಾವಾಗ.?

ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಉಂಬ್ಳೆಬೈಲು ಭಾಗ ಅರಣ್ಯ ಪ್ರದೇಶದ ಅಂಚಿನಲ್ಲಿ ಬರುತ್ತದೆ. ಭದ್ರಾ ಅಭಯಾರಣ್ಯ, ತುಂಗಾ ಮತ್ತು‌ ಭದ್ರಾ ಅಣೆಕಟ್ಟುಗಳ ಹಿನ್ನೀರಿನ ಸುತ್ತಲ ಪ್ರದೇಶದಲ್ಲಿ ಸಾಕಷ್ಟು ಹಳ್ಳಿಗಳು ಇದ್ದು, ಕಾಡು ಪ್ರಾಣಿಗಳ ಹಾವಳಿಯಿಂದ ಜನರ ನೆಮ್ಮದಿ‌ ಹಾಳಾಗಿದೆ.

ಉಂಬ್ಳೆಬೈಲು ಭಾಗದ ಜನರಿಗೆ ಪ್ರತಿನಿತ್ಯ ಕಾಡುಪ್ರಾಣಿಗಳಿಂದ ಸಂಕಷ್ಟು ಎದುರಿಸುವಂತಾಗಿದೆ.

ಹಲವು ವರ್ಷಗಳಿಂದ ಕಾಡು ಪ್ರಾಣಿಗಳು ಗ್ರಾಮಗಳಿ, ಹೊಮಗದ್ದೆಗಳಿ ನುಗ್ಗಿ ಈ ಭಾಗದ ಜನರಿಗೆ ತೊಂದರೆ ನೀಡುತ್ತಿವೆ.

ಕೆಲ ವರ್ಷಗಳ ಹಿಂದೆ ಹುಲಿಗಳ ಉಪಟಳ ಈ ಭಾಗದಲ್ಲಿ ಹೆಚ್ಚಿತ್ತು, ದನ ಕರುಗಳನ್ನು ಕಾಪಾಡಿಕೊಳ್ಳೋದೋ ಈ‌ ಭಾಗದ ರೈತರಿಗೆ ಹರ ಸಾಹಸವಾಗಿತ್ತು. ಆನಂತರ ಆನೆಗಳ ದಾಳಿ‌ ವಿಪರೀತವಾಗಿ ರೈತರ‌ ತಮ್ಮ ಪೈರಗಳ ರಕ್ಷಣೆಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅರಣ್ಯ ಇಲಾಖೆಯವರು ಆನೆಗಳನ್ನು ಮರಳಿ ಕಾಡಿಗೆ ಕಳುಹಿಸುವ ಕಾರ್ಯಚರಣೆ ಯಶಸ್ವಿಯಾಗಿ ತ್ತು. ಉಂಬ್ಳೆಬೈಲು ‌ಜನರು‌ ಆನೆಗಳ ಕಾಟದಿಂದ ಮುಕ್ತಿ ಸಿಕ್ಕು ಎಂದು ನೆಮ್ಮದಿಂದ ನಿದ್ದೆ ಮಾಡುವಷ್ಟರಲ್ಲಿ ಮತ್ತೇ ಈಗ ಅವರಿಗೆ ಆತಂಕ ಎದುರಾಗಿದೆ.
ಈ ಚಿರತೆಯ ಕಾಟ ಶುರುವಾಗಿದೆ. ಚಿರತೆಯ ದಾಳಿಗೆ ಇಲ್ಲಿನ ಜನ ಭಯಗೊಂಡಿದ್ದಾರೆ.

ಉಂಬ್ಳೆಬೈಲಿನ ಸಾಲಿಗೆರೆ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ ಹಸು ಮತ್ತು ಕರುವಿನ ಮೇಲೆ ಚಿರತೆ ದಾಳಿ ನಡೆಸಿ ಹಸುವನ್ನ ತಿಂದು ಹಾಕಿದೆ. ಚಿರತೆಯ ದಾಳಿ ಈ ಭಾಗದ ಜನರನ್ನ ಭೀತಿ ಹುಟ್ಟಿಸಿದೆ.

ಸಾಲಿಗೆರೆ ಗ್ರಾಮದ ಕೃಷ್ಣಮೂರ್ತಿ ಅವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ ಹಸು ಮತ್ತು ಕರುಗಳ ಮೇಲೆ ಚಿರತೆ ರಾತ್ರಿ ವೇಳೆ ದಾಳಿ ನಡೆಸಿದೆ. ಮನೆಯವರು ಬೆಳಗ್ಗೆ ಎದ್ದು ಕೊಟ್ಟಿಗೆಗೆ ಹೋದ ಸಮಯದಲ್ಲಿ
ಸತ್ತು ಬಿದ್ದ ಆಕಳುಗಳನ್ನು ನೋಡಿ ಭಯಗೊಂಡಿದ್ದಾರೆ.

ಕೊಟ್ಟಿಗೆಯ ಸುತ್ತಮುತ್ತ ಚಿರತೆಯ ಹೆಜ್ಜೆ ಗುರುತು ಕಂಡುಬಂದಿದೆ. ಅರಣ್ಯ ಇಲಾಖೆಯವರು ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!