ದಾವಣಗೆರೆಯಲ್ಲಿ ಶೋಭಾಯಾತ್ರೆಗೆ ಚಾಲನೆ ನೀಡಿದ ಸಂಸದ ಜಿಎಂ ಸಿದ್ದೇಶ್ವರ

ದಾವಣಗೆರೆ: ನಗರದ ಬೇತೂರು ರಸ್ತೆಯ ವೆಂಕಟೇಶ್ವರ ವೃತ್ತದಿಂದ ಮಧ್ಯಾಹ್ನ 12 ಗಂಟೆಗೆ ದುರ್ಗಾದೇವಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವುದರ ಮುಖಾಂತರ ಶೋಭಾಯಾತ್ರೆಗೆ ಸಂಸದ‌ ಜಿಎಂ ಸಿದ್ದೇಶ್ವರ, ಜಡೆಸಿದ್ದೇಶ್ವರ ಮಠದ ಶಿವಾನಂದ ಸ್ವಾಮಿಗಳು ಶಾಸಕ ಎಸ್.ಎ ರವೀಂದ್ರನಾಥ್, ಚಾಲನೆ ನೀಡಿದರು.

ಭಾವೈಕ್ಯತೆಯ ಸಂದೇಶದಂತೆ ಮುಸ್ಲಿಂ ಮುಖಂಡರು ಶೋಭಾಯಾತ್ರೆಯ ಮುಖಂಡರಿಗೆ ಸನ್ಮಾನಿಸಿ ಗೌರವಿಸಿ ಅವರ ಜೊತೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು

ಶೋಭಾಯಾತ್ರೆಯಲ್ಲಿ ಸಿಂಗಾರಗೊಂಡ ಸಾರೋಟಿನಲ್ಲಿ ದುರ್ಗಾ ದೇವಿಯನ್ನು ಮೆರವಣಿಗೆ ಮುಖಾಂತರ ಪೂಜೆ ಮಾಡಲಾಯಿತು.ವಿವಿಧ ಧರ್ಮಗಳ ದೇವರುಗಳ ಸ್ತಬ್ಧ ಚಿತ್ರಗಳು ಏಕತೆಯ ಸಂದೇಶ ಸಾರುತಿದ್ದವು.

ಡೊಳ್ಳು ಕುಣಿತ,ತೊಗಲುಗೊಂಬೆ, ನಾಸಿಕ್ ಡೋಲ್, ಮುಂತಾದ ಕಲಾ ತಂಡ ಗಳಿಂದ ಕಳೆಗಟ್ಟಿತ್ತು. ಶೋಭಾಯಾತ್ರೆಯಲ್ಲಿ ಸುಮಾರು ನಾಲ್ಕು ಸಾವಿರ ಜನರು ಭಾಗವಹಿಸಿದ್ದರು.

ಶೋಭಾ ಯಾತ್ರೆಯಲ್ಲಿ ದಾವಣಗೆರೆ-ಹರಿಹರ ನಗರ ಪ್ರಾಧಿಕಾರದ ಅಧ್ಯಕ್ಷರು ದೇವರಮನೆ ಶಿವಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್, ಹನಗವಾಡಿ, ರಾಜನಹಳ್ಳಿ ಶಿವಕುಮಾರ ಯಶವಂತರಾವ್ ಜಾದವ್, ಸಂಕೋಳ್ ಚಂದ್ರಶೇಖರ್ ರಾಜಶೇಖರ್, ಪಾಲಿಕೆ ಸದಸ್ಯ ವೀರೇಶ್, ಪ್ರಸನ್ನಕುಮಾರ್, ಮುಂತಾದವರಿದ್ದರು

Leave a Reply

Your email address will not be published. Required fields are marked *

error: Content is protected !!