ಮೈಸೂರು‌ ಅಷ್ಟೇ ಅಲ್ಲ, ಇಲ್ಲಿಯೂ ಸಹ ನಡೆಯುತ್ತೇ ಜಂಬೂ‌ ಸವಾರಿ, ಅಂಬಾರಿ ಹೊರುತ್ತೇ ಆನೆ

ಶಿವಮೊಗ್ಗ: ನಾಡ ಹಬ್ಬ ದಸರಾ ಉತ್ಸವ ರಾಜ್ಯಾದ್ಯಂತ ವಿಜೃಂಭಣೆಯಿಂದ ನಡೆಯುತ್ತಿದೆ.

ಮೈಸೂರು ದಸರಾ ಉತ್ಸವ ವಿಶ್ವ ವಿಖ್ಯಾತಿ ಪಡೆದಿದೆ. ದೇಶ ವಿದೇಶದಿಂದ ಮೈಸೂರು ದಸರಾ ನೋಡಲು ಲಕ್ಷಾಂತರ ಜನರು ಮೈಸೂರಿಗೆ ಆಗಮಿಸುತ್ತಾರೆ. ಮೈಸೂರು ದಸರಾ ಉತ್ಸವದಲ್ಲಿ ಜಂಬೂ ಸವಾರಿ ಅತ್ಯಾಕರ್ಷಕ ವಾದದ್ದು.

ಚಾಮುಂಡೇಶ್ವರಿ ಮೂರ್ತಿಯನ್ನು ಹೊತ್ತು ಸಾಗುವ ಆನೆಗಳ ಮೆರವಣಿಗೆ ನೋಡಲು ಕಣ್ಣುಗಳೆರಡು ಸಾಲದು. ಇಂತಹ ಒಂದು ದೃಶ್ಯ ಕಣ್ಣುಂಬಿಕೊಳ್ಳಲು ಮೈಸೂರಿಗೆ‌ ಈ ವೇಳೆ ಲಕ್ಷಾಂತರ ಜನ ಪ್ರವಾಸಿಗರು ಆಗಮಿಸುತ್ತಾರೆ. ಅಷ್ಟೊಂದು ಫೇಮಸ್ ನಮ್ಮ ಮೈಸೂರು ದಸರಾ ಆನೆಗಳ ಮೆರವಣಿಗೆ.

ಮೈಸೂರು ಬಿಟ್ಟರೆ ರಾಜ್ಯದಲ್ಲಿ ಮತ್ತೋಂದು‌ ಕಡೆ ಜಂಬೂ ಸವಾರಿ‌ ನಡೆಯುತ್ತೇ. ಹೌದು ಅದು ಮಲೆನಾಡಿನ‌ ಹೆಬ್ಬಾಗಿಲು ಶಿವಮೊಗ್ಗದಲ್ಲಿ.

ಶಿವಮೊಗ್ಗ ದಲ್ಲಿ‌ ಸಹ ಬೆಳ್ಳಿಯ‌‌ ಚಾಮುಂಡೇಶ್ವರಿ ‌ದೇವಿಯ‌ ವಿಗ್ರಹ ಮೆರವಣಿಗೆ ಮಾಡಲಾಗುತ್ತೇ.
ಆನೆಯ ಮೇಲೆ‌‌‌ ಚಾಮುಂಡೇಶ್ವರಿ ‌ದೇವಿಯ‌ ಮೂರ್ತಿ‌ ಪ್ರತಿಷ್ಠಾನೆ ಮಾಡಿ‌ ಮೆರವಣಿಗೆ ಮಾಡಲಾಗುತ್ತದೆ.

ಜಂಬೂ ಸವಾರಿಗಾಗಿ ರಾಜ್ಯದ ಎರಡನೇ‌ ಅತಿದೊಡ್ಡ ಆನೆ ಬಿಡಾರ ಎಂದು‌ ಕರೆಸಿಕೊಂಡಿರುವ ಸಕ್ರೇಬೈಲ್ ಬಿಡಾರದಿಂದ ಆನೆಗಳು ಆಗಮಿಸುತ್ತೇವೆ.

ಪ್ರತಿ ವರ್ಷ ಮೂರು ಆನೆಗಳು ಮೆರವಣಿಗೆಯಲ್ಲಿ ಪಾಲ್ಗೋಳ್ಳುತ್ತವೆ.
ಈ ವರ್ಷ ಎರಡು ಆನೆಗಳನ್ನು ‌ಅರಣ್ಯ ಇಲಾಖೆ ಕಳುಹಿಸಿಕೊಟ್ಟಿದೆ.
ದಸರಾ ಉತ್ಸವ ಹಿನ್ನೆಲೆಯಲ್ಲಿ ಅಂಬಾರಿ ಹೊರಲು ಸಕ್ರೆಬೈಲ್​​​ ಆನೆ ಬಿಡಾರದಿಂದ ಎರಡು ಆನೆಗಳು ನಗರಕ್ಕೆ ಆಗಮಿಸಿವೆ.

ಶಿವಮೊಗ್ಗ ದಸರಾದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿರುವ ಅಂಬಾರಿ ಉತ್ಸವಕ್ಕಾಗಿ ಸಾಗರ್​ ಮತ್ತು ಭಾನುಮತಿ ಆನೆಗಳನ್ನು ಬರ ಮಾಡಿಕೊಳ್ಳಲಾಗಿದೆ.

ಸಕ್ರೆಬೈಲ್​​​​ನಲ್ಲಿ ಆನೆಗಳು ಲಾರಿ ಏರಲು ಹಿಂದೇಟು ಹಾಕಿದ್ದು, ಬಳಿಕ ನಡೆದುಕೊಂಡೇ ಶಿವಮೊಗ್ಗ ತಲುಪಿವೆ. ನಗರ ತಲುಪಿದ ಆನೆಗಳಿಗೆ ಮಹಾನಗರ ಪಾಲಿಕೆ ವತಿಯಿಂದ ಪೂಜೆ ಸಲ್ಲಿಸಿ, ಸ್ವಾಗತ ಕೋರಲಾಯಿತು.ಮಾವುತರು ಮತ್ತು ಕಾವಡಿಗಳು‌ ಅಂಬಾರಿ‌ ಉತ್ಸವಕ್ಕೆ‌ ಸಕಲ‌‌‌ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

*ಜಂಬೂ‌ ಸವಾರಿ ‌ಸಾಗಿ ಬರುವ ಮಾರ್ಗ*

ಈ ಮೆರವಣಿಗೆಯು ಕೋಟೆ ರಸ್ತೆ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಿಂದ  ಹೊರಟು ಎಸ್.ಪಿ ರಸ್ತೆ, ಗಾಂದಿ ಬಜಾರ್, ನೆಹರು ರಸ್ತೆ, ದುರ್ಗಿಗುಡಿ, ಜೈಲು ರಸ್ತೆ, ಲಕ್ಷ್ಮೀ ಚಿತ್ರ ಮಂದಿರ ಮುಖಾಂತರ ಸಾಗಿ , ಹಳೇ ಜೈಲು‌ ಆವರಣದಲ್ಲಿ ಬನ್ನಿ ಮುಡಿಯುವ ಮಂಟಪ ತಲುಪಲಿದೆ.ಸಾಗರ್ ಆನೆ ಅಂಬಾರಿ ಹೊತ್ತು ‌ಸಾಗಲಿದೆ.

Leave a Reply

Your email address will not be published. Required fields are marked *

error: Content is protected !!