Dcrb Police Prize: ರೈತರ ನೋವಿಗೆ ಸ್ಪಂದಿಸಿದ್ದ ಡಿ ಸಿ ಆರ್ ಬಿ ತಂಡಕ್ಕೆ 1 ಲಕ್ಷ ನಗದು, ಪ್ರಶಂಸನಾ ಪತ್ರ ನೀಡಿದ ಐಜಿಪಿ ರವಿ
ದಾವಣಗೆರೆ: ರೈತರಿಂದ ಮತ್ತು ವರ್ತಕರಿಂದ ಮೆಕ್ಕೆಜೋಳ ಖರೀದಿಸಿ ಹಣ ಕೊಡದೇ ಮೋಸ ಮಾಡುತ್ತಿದ್ದ ಆರೋಪಿತರಿಂದ ಒಟ್ಟು 2,68 ಕೋಟಿ ರೂ., ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಜಿಲ್ಲಾ ಪೊಲೀಸ್ ಕಚೇರಿಯ ಡಿಸಿಆರ್ ಬಿ ಘಟಕದ ಡಿವೈಎಸ್ಪಿ ಬಿ.ಎಸ್. ಬಸವರಾಜ್ ನೇತೃತ್ವದ ತಂಡಕ್ಕೆ ಶುಕ್ರವಾರ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಐಜಿಪಿ ಎಸ್. ರವಿ ಅವರು ಪೊಲೀಸ್ ತಂಡಕ್ಕೆ 1 ಲಕ್ಷ ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರನೀಡಿ ಗೌರವಿಸಿದರು.
ನಗದು ಬಹುಮಾನ ಪಡೆದ ತಂಡದಲ್ಲಿ ಡಿವೈಎಸ್ಪಿ ಬಸವರಾಜ್ ಬಿ.ಎಸ್.,ಎಎಸ್ಐ ಅಂಜನಪ್ಪ, ಸಿಬ್ಬಂದಿಗಳಾದ ಕೆ.ಸಿ.ಮಜೀದ್, ಕೆ.ಟಿ.ಆಂಜನೇಯ, ಡಿ. ರಾಘವೇಂದ್ರ, ಯು.ಮಾರುತಿ, ಪಿ.ಸುರೇಶ್, ನಟರಾಜ್, ಈ.ಬಿ.ಅಶೋಕ್, ಆರ್.ರಮೇಶನಾಯ್ಕ, ಸಿ.ಎಸ್.ಬಾಲರಾಜ್, ಸಿ.ಮಲ್ಲಿಕಾರ್ಜುನ, ಜಿ.ಎಸ್.ಬಸವರಾಜ್ ಅವರಿದ್ದರು.
ಈ ಸಂಧರ್ಭದಲ್ಲಿ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೀವ್ ಎಂ ಹಾಗೂ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.