ಬೆಳಗಿನ ನಡಿಗೆ-ಆರೋಗ್ಯದ ಕಡೆಗೆ, ರಾಜ್ಯ ಗುಪ್ತವಾರ್ತೆ ದಾವಣಗೆರೆ ಘಟಕದಿಂದ 10 ಕಿಮೀ ನಡಿಗೆ
ದಾವಣಗೆರೆ: ನಗರದ ಕುಂದವಾಡ ಕೆರೆಯ ಏರಿ ಮೇಲೆ ರಾಜ್ಯ ಗುಪ್ತಚರ ಇಲಾಖೆ ಹಾಗೂ ನಾಗರಿಕ ಹಕ್ಕು ನಿರ್ದೇಶನಾಲಯದ ಅಧಿಕಾರಿ ಮತ್ತು ಸಿಬ್ಬಂದಿಗಳು ಹತ್ತು ಕಿಲೋ ಮೀಟರ್ ಗಳ ಆರೋಗ್ಯ ನಡಿಗೆಯ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್ಪಿ ಗೋಪಾಲ್ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,
ರಾಜ್ಯ ಗುಪ್ತಚರ ಇಲಾಖೆ ಡಿವೈಎಸ್ಪಿ ಪ್ರಹ್ಲಾದ್ ಎಸ್. ಕೆ., ಸಬ್ ಇನ್ಸ್ಪೆಕ್ಟರ್ ಹೆಚ್.ಜಗದೀಶ್, ಸಿಬ್ಬಂದಿಗಳು ಹಾಗೂ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಇನ್ಸ್ಪೆಕ್ಟರ್ ಕೃಷ್ಣ ನಾಯ್ಕ್, ಸಬ್ ಇನ್ಸ್ಪೆಕ್ಟರ್ ಉಮೇಶ್ ಬಾಬು, ಸಿಬ್ಬಂದಿಗಳು ಭಾಗವಹಿಸಿದ್ದರು.