ಅರಣ್ಯ ಸಿಬ್ಬಂದಿಗೆ ಫ್ರೀ ಚೆಕ್ ಅಪ್ ಮಾಡಿಸಿದ ಡಿಎಫ್ಓ: ಜಗನ್ನಾಥ್ ರಿಗೆ ಬಹುಪರಾಕ್ ಎಂದ ಸಿಬ್ಬಂದಿ

ಅರಣ್ಯ ಸಿಬ್ಬಂದಿಗೆ ಫ್ರೀ ಚೆಕ್ ಅಪ್ ಮಾಡಿಸಿದ ಡಿಎಫ್ಓ: ಜಗನ್ನಾಥ್ ರಿಗೆ ಬಹುಪರಾಕ್ ಎಂದ ಸಿಬ್ಬಂದಿ

ದಾವಣಗೆರೆ : ವನಪಾಲಕರು ಅಂದ್ರೆ ಸಾಕು ಸದಾ ಒತ್ತಡದ ಜೀವನ ಹೀಗಿರುವಾಗ..ಅವರ ಆರೋಗ್ಯವನ್ನು ಕಾಪಾಡುವರು ಮನೆ ಮಡದಿ ಮಾತ್ರ..ಆದರೆ ಇಲ್ಲೊಬ್ಬ ಅಧಿಕಾರಿ ತನ್ನ ಸಿಬ್ಬಂದಿಗಳ ಆರೋಗ್ಯ ಬಗ್ಗೆ ಕಾಳಜಿ ವಹಿಸಿ ಫ್ರೀ ಚೆಕ್ ಅಪ್ ಮಾಡಿಸಿ ಇತರರಿಗೆ ಮಾದರಿಯಾಗಿದ್ದಾರೆ.. ಇದು…ಗಂಧದಗುಡಿ ಸಿನಿಮಾವಲ್ಲಘಿ..ಆದರೆ ಈ ಕಥೆಯೊಳಗೆ ಇರೋರು ಮಾತ್ರ ವರನಟ ಡಾ.ರಾಜಕುಮಾರ್ ಇದ್ದ ಹಾಗೆ..ಹಾಗಾದ್ರೆ ಇವರು ಯಾರು ಅಂತೀರಾ..ಅವರು ಇವ್ರೆ ನೋಡಿ ದಾವಣಗೆರೆ ಡಿಎಫ್ಒ ಜಗನ್ನಾಥ್.

ಮಳೆ, ಗಾಳಿ, ಬಿಸಿಲು ಎನ್ನದೇ ಅರಣ್ಯ ಸಂರಕ್ಷಣೆಯಲ್ಲಿ ತೊಡಗಿರುವ ಇಲಾಖಾ ಸಿಬ್ಬಂದಿಗಳ ಹಿತ ರಕ್ಷಣೆಯ ನಿಟ್ಟಿನಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರಲಾಗುತ್ತಿದ್ದುಘಿ, ಈ ಬಾರಿ ಎರಡು ಜಿಲ್ಲಾ ಅರಣ್ಯ ಸಿಬ್ಬಂದಿಗಳನ್ನು ದಾವಣಗೆರೆ ವಿಭಾಗದ ಉಪ ಅರಣ್ಯ ಉಪಸಂರಕ್ಷಣಾಧಿಕಾರಿ ಕಚೇರಿಗೆ ಕರೆಸಿ ಹೆಲ್ತ್ ಚೆಕ್ ಮಾಡಿಸಿದರು.

ಅರಣ್ಯ ಸಿಬ್ಬಂದಿಗೆ ಫ್ರೀ ಚೆಕ್ ಅಪ್ ಮಾಡಿಸಿದ ಡಿಎಫ್ಓ: ಜಗನ್ನಾಥ್ ರಿಗೆ ಬಹುಪರಾಕ್ ಎಂದ ಸಿಬ್ಬಂದಿ

ಜಿಲ್ಲಾ ಪಂಚಾಯತ್ ಸಮೀಪ ಇರುವ ಪ್ರಾದೇಶಿಕ ಅರಣ್ಯ ಇಲಾಖೆ ಕಚೇರಿಯಲ್ಲಿ ಚಿತ್ರದುರ್ಗ- ದಾವಣಗೆರೆ ವಲಯ ಮಟ್ಟದ ಅರಣ್ಯ ಇಲಾಖೆ ಸಿಬ್ದಂದಿಗಳು ಮತ್ತು ಅವರ ಕುಟುಂಬ ವರ್ಗ ಆರೋಗ್ಯ ತಪಾಸಣೆ ಕೈಗೊಂಡು, ಡಿಎ್ಒಗೆ ಅಭಿನಂದನೆ ಸಲ್ಲಿಸಿದರು. ಇಲಾಖಾ ಸಿಬ್ಬಂದಿಗಳ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಈ ರೀತಿಯ ಶಿಬಿರಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರಲಾಗುತ್ತಿದೆ. ಚಿತ್ರದುರ್ಗ ಮತ್ತು ದಾವಣಗೆರೆ ವೃತ್ತದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅವರ ಕುಟುಂಬ ವರ್ಗದವರಿಗೆ ಹಮ್ಮಿಕೊಂಡಿರುವ ಆರೋಗ್ಯ ತಪಾಸಣಾ ಶಿಬಿರ ನಿರಿಕ್ಷೆಗೂ ಮೀರಿ ಯಶಸ್ಸು ಕಂಡಿದೆ. ತಜ್ಞ ವೈದ್ಯರಿಂದ ಇಲಾಖಾ ಸಿಬ್ಬಂದಿಗಳ ಆರೋಗ್ಯ ತಪಾಸಣೆ ನಡೆಸಿ ಆರೋಗ್ಯ ಸಮಸ್ಯೆ ಕಂಡು ಬಂದಿರುವವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಶಿಾರಸು ಮಾಡಲಾಗುವುದು ಎಂದು ಡಿಎಫ್ಒ ಜಗನ್ನಾಥ್ ಹೇಳಿದರು.

ಅರಣ್ಯ ಸಿಬ್ಬಂದಿಗೆ ಫ್ರೀ ಚೆಕ್ ಅಪ್ ಮಾಡಿಸಿದ ಡಿಎಫ್ಓ: ಜಗನ್ನಾಥ್ ರಿಗೆ ಬಹುಪರಾಕ್ ಎಂದ ಸಿಬ್ಬಂದಿ

ಅರಣ್ಯ ರಕ್ಷಣಾ ಸಿಬ್ಬಂದಿ ಮತ್ತು ಅವರ ಕುಟುಂಬ ವರ್ಗದ ಆರೋಗ್ಯ ಉತ್ತಮವಾಗಿರಬೇಕೆಂಬ ದೃಷ್ಟಿಯಿಂದ ಕಾರ್ಯಭಾರದ ನಡುವೆಯೂ ತಪಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಜಿಲ್ಲಾಡಳಿತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರವಿದೆ ಎಂದರು.

ಹಿರಿಯ ಆಯುಷ್ ವೈದ್ಯಾಧಿಕಾರಿ ಡಾ.ಜೆ..ಬಿ.ನಾರದ ಮುನಿ ದಿನಚರ್ಯೆ, ಋತುಚರ್ಯೆ ಮತ್ತು ಆಹಾರ ಪದ್ದತಿ ಕುರಿತು ಮಾಹಿತಿ ನೀಡಿ, ಭಾರತೀಯ ಆಯುರ್ವೇದ ವೈದ್ಯ ಪದ್ಧತಿಯನ್ನು ನಿರ್ಲಕ್ಷಿಸಿದ ಪರಿಣಾಮ ಇಂದು ಮನುಷ್ಯನ ದೇಹ ರೋಗಗಳ ಗೂಡಾಗಿದೆ.ಭಾರತೀಯ ಸನಾತನ ಪರಂಪರೆಯಲ್ಲಿ ಆಯುರ್ವೇದಕ್ಕೆ ಸಾಕಷ್ಟು ಮಹತ್ವವಿದೆ. ಅದನ್ನು ಬದಿಗೊತ್ತಿ. ಇತರೆ ವೈದ್ಯ ಪದ್ದತಿಗಳಿಗೆ ಮಾರುಹೋದ ಪರಿಣಾಮ ಮನುಷ್ಯ ಸಾಕಷ್ಟು ಹೊಸ ಹೊಸ ರೋಗಗಳಿಗೆ ಬಲಿಯಾಗುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಆಯುರ್ವೇದ ಪದ್ಧತಿಗೆ ಮರಳುವ ಮೂಲಕ ಆರೋಗ್ಯ ಸುಧಾರಣೆಗೆ ಹೆಚ್ಚು ಒತ್ತು ನೀಡಬೇಕಿದೆ ಎಂದು ತಿಳಿಸಿದರು.

ಅರಣ್ಯಾಧಿಕಾರಿ ದೇವರಾಜ್ ಮಾತನಾಡಿ, ಈ ಕಾರ್ಯಕ್ರಮದಿಂದ ಇಲಾಖೆಯ ಮುಂಚೂಣಿ ಸಿಬ್ಬಂದಿಗಳಾದ ಅರಣ್ಯ ರಕ್ಷಕರು, ವೀಕ್ಷಕರು, ಉಪ ವಲಯ ಅರಣ್ಯಾಧಿಕಾರಿಗಳು, ಲಿಪಿಕ ಸಿಬ್ಬಂಧಿಗಳ ಮಾನಸಿಕ, ದೈಹಿಕ ಕ್ಷಮತೆ ಹೆಚ್ಚಿಸಲು ಅನುಕೂಲವಾಗಿದೆ. ಇದಕ್ಕಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಸೇವೆ ಶ್ಲಾಘನೀಯ ಎಂದರು.

ಅರಣ್ಯ ಸಿಬ್ಬಂದಿಗೆ ಫ್ರೀ ಚೆಕ್ ಅಪ್ ಮಾಡಿಸಿದ ಡಿಎಫ್ಓ: ಜಗನ್ನಾಥ್ ರಿಗೆ ಬಹುಪರಾಕ್ ಎಂದ ಸಿಬ್ಬಂದಿ

ಮೊದಲು ನಾನು ನನ್ನ ಆರೋಗ್ಯ ಸ್ವಾಸ್ಥ್ಯದ ಕಡೆಗೆ ಹೆಚ್ಚು ಗಮನಹರಿಸಬೇಕು, ನಂತರ ಕುಟುಂಬ ತದನಂತರ ಸಮಾಜದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಇದು ಆಯುರ್ವೇದ ಪದ್ಧತಿಯ ಮೂಲಮಂತ್ರವಾಗಿದೆ. ಮೊದಲು ನಮ್ಮ ಆರೋಗ್ಯ ಚನ್ನಾಗಿದ್ದರೆ ಇಡೀ ಕುಟುಂಬ ಮತ್ತು ಸಮಾಜದ ಆರೋಗ್ಯದ ಬಗ್ಗೆ ಕಾಳಜಿವಹಿಸಬಹುದು ಎಂದು ಹೇಳಿದರು.

ಆರೋಗ್ಯ ತಪಾಸಣೆಗೆ ಒಳಗಾದ 220 ಜನ ಇಲಾಖೆ ಸಿಬ್ಬಂದಿಗಳ ಪೈಕಿ 40 ಕ್ಕೂ ಅಧಿಕ ಜನರು ಸಕ್ಕರೆ ಖಾಯಿಲೆ, 20 ಜನ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವುದು ಕಂಡು ಬಂತು. ಈ ಆರೋಗ್ಯ ಸಮಸ್ಯೆಗಳು ಕಂಡು ಬರಲು ದೈನಂದಿನ ಜೀವನ ಶೈಲಿ ಮತ್ತು ಆರೋಗ್ಯ ಪದ್ದತಿಯೇ ಪ್ರಮುಖ ಕಾರಣ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಈ ಎರಡು ಅಂಶಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಇಲಾಖೆ ಸಿಬ್ಬಂದಿಗಳು ರಕ್ತದಾನ ಮಾಡಿದರು.ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗರಾಜ್, ಜಿಲ್ಲಾ ಶಸ್ತ ಚಿಕಿತ್ಸಕ ಡಾ.ಸುಭಾಶ್ಚಂದ್ರ, ವೈದ್ಯಾಧಿಕಾರಿ ಡಾ.ರಾಘವೇಂದ್ರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ನಾಯ್ಕ, ಡಾ.ತಿಪ್ಪೇಸ್ವಾಮಿ, ಡಾ.ಸಂಜನಾ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಡಿ.ಎನ್.ಶಿವಾನಂದ ಡಾ.ಶಿಲ್ಪಾ ಇತರರು ಉಪಸ್ಥಿತರಿದ್ದರು. ಒಟ್ಟಿನಲ್ಲಿ ಡಿಎಫ್ಒ ಜಗನ್ನಾಥ್‌ರ ಈ ಕಾರ್ಯದಿಂದ ಸಿಬ್ಬಂದಿಗಳು ಸಂತಸಗೊಂಡ್ರು.

Leave a Reply

Your email address will not be published. Required fields are marked *

error: Content is protected !!