ದಾವಣಗೆರೆ: ತೊಗರಿ ನಾಡು ಕಲ್ಬುರ್ಗಿಗೆ ಬೆಣ್ಣೆ ನಗರಿ ದಾವಣಗೆರೆಯಿಂದ ಮಗುವಿನಂತೆ ನಿದ್ದೆ ಮಾಡಿಕೊಂಡು ಇನ್ಮುಂದೆ ಹೋಗಬಹುದಾಗಿದ್ದು, ಹತ್ತಿ ಇಳಿಯುವ ಅವಶ್ಯಕತೆ ಇಲ್ಲ.
ಇದೇ ಮೊದಲ ಬಾರಿಗೆ ದಾವಣಗೆರೆಯಿಂದ ಕಲಬುರ್ಗಿಗೆ ಸೆಮಿ ಸ್ಲೀಪರ್ ಬಸ್ ಬಿಟ್ಟಿದ್ದುಘಿ, ಇಲ್ಲಿಂದ ಜನರು ನೇರವಾಗಿ ಗುಲ್ಬರ್ಗಕ್ಕೆ ಯಾವುದೇ ರಿಸ್ಕ್ ಇಲ್ಲದೇ ಸಂಚಾರ ಮಾಡಬಹುದಾಗಿದೆ.
ಈ ಹಿಂದೆ ಹರಿಹರಕ್ಕೆ ಹೋಗಿ ಕಲ್ಬುರ್ಗಿಗೆ ಬಸ್ ಸಂಚಾರ ಮಾಡಬೇಕಿತ್ತು. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಇನ್ನು ಕುಟುಂಬ ಸಮೇತ ಬಸ್‌ನಲ್ಲಿ ಸಂಚಾರ ಮಾಡಬಹುದಾಗಿದ್ದು, ಹತ್ತಿ ಇಳಿಯುವ ಗೋಜಿಲ್ಲ. ಈ ಕಾರಣಕ್ಕಾಗಿ ಬಸ್‌ಗೆ ವಿಶೇಷ ಪೂಜೆ ಸಲ್ಲಿಸಿ ಸಂಚಾರಕ್ಕೆ ಚಾಲನೆ ನೀಡಲಾಯಿತು. ಅಲ್ಲದೇ ಬಸ್‌ಗೆ ಅಲಂಕಾರ ಮೂಡಿ ಹಿಡುಗಾಯಿ ಒಡೆದು ರೈಟ್..ರೈಟ್ ಎಂದು ಡಿಸಿ ಶ್ರೀನಿವಾಸ, ಕೆಎಸ್‌ಆರ್‌ಟಿಸಿ ಮ್ಯಾನೇಜರ್ ರಾಮಚಂದ್ರಪ್ಪ ಗುಟುರು ಹಾಕಿದರು.
ದಾವಣಗೆರೆಯಲ್ಲಿ ಗುಲ್ಬರ್ಗದಿಂದ ಬಂದು ಕೆಲಸ ಮಾಡೋರು ಸಾಕಷ್ಟು ಜನವಿದ್ದು, ಈ ಪ್ರಯಾಣಕರ ದೃಷ್ಟಿಯಿಂದ ಕೆಎಸ್‌ಆರ್‌ಟಿಸಿ ಬಸ್ ಬಿಡಲಾಗಿದೆ. ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ ದಾವಣಗೆರೆಯಿಂದ ಕಲ್ಬುರ್ಗಿಗೆ ಈ ಸೆಮಿ ಸ್ಲೀಪರ್ ಕೆ.ಎಸ್.ಆರ್.ಟಿ.ಸಿ ಬಸ್ ಪ್ರಯಾಣ ಆರಂಭಿಸಿದೆ ಎಂದು ದಾವಣಗೆರೆ ಡಿಪೋ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.
ದಾವಣಗೆರೆ ವಿಭಾಗದಿಂದ ಹೊಸ ಮಾರ್ಗ ಇದಾಗಿದ್ದು,ದಾವಣಗೆರೆಯಿಂದ ರಾತ್ರಿ 8.30 ಕ್ಕೆ ಹೊರಡಲಿರುವ ಈ ಬಸ್ ಬೆಳಗಿನ ಜಾವ 5.30 ಸುಮಾರಿಗೆ ಕಲ್ಬುರ್ಗಿ ತಲುಪಲಿದೆ. ಕಲ್ಬುರ್ಗಿಯಿಂದ ರಾತ್ರಿ 10 ಗಂಟೆಗೆ ಹೊರಡಲಿರುವ ಬಸ್ ಮುಂಜಾನೆ 7 ಗಂಟೆ ಸುಮಾರಿಗೆ ದಾವಣಗೆರೆ ತಲುಪಲಿದೆ ಎಂದು ತಿಳಿಸಿದ್ದಾರೆ.ಇದುವರೆಗೂ ದಾವಣಗೆರೆಯಿಂದ ಕಲ್ಬುರ್ಗಿಗೆ ಹೆಚ್ಚು ಬಸ್ ಗಳ ಸಂಚಾರ ಇರಲಿಲ್ಲ. ಇತ್ತೀಚೆಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಹೊಸ ಮಾರ್ಗ ರೂಪಿಸಲಾಗಿದೆ. ಪ್ರಯಾಣ ದರ 900 ರೂ ನಿಗಧಿಪಡಿಸಲಾಗಿದೆ ಎಂದು ಹೇಳಿದರು.
