ಬಾಲ್ಯದ ನೆನಪು ಮಾಡುವ ಈ ರುಚಿ ರುಚಿಯಾದ ಹಣ್ಣು.!

ಬಾಲ್ಯದ ನೆನಪು ಮಾಡುವ ಈ ರುಚಿ ರುಚಿಯಾದ ಹಣ್ಣು.!

ದಾವಣಗೆರೆ: ನಾವು ಚಿಕ್ಕವರಿದ್ದಾಗ ಹೆಗಲಿಗೊಂದು ಬ್ಯಾಗ್ ಹಾಕಿಕೊಂಡು ಶಾಲೆಗೆ ಹೋಗುವ ವೇಳೆ, ರಜೆಬಿಟ್ಟಾಗ ಊರಿಗೆ ಹೋದ ವೇಳೆ ಸ್ನೇಹಿತರೊಂದಿಗೆ ಹೊರಟು ಗಿಡಕ್ಕೆ ಗುರಿ ಇಟ್ಟು ಕಲ್ಲು ಹೊಡೆದು ಬೀಳಿಸಿ, ಕೆಳಗೆ ಬಿದ್ದ ಹಣ್ಣುಗಳನ್ನು ಹೆಕ್ಕಿ ಬಾಯಿಯಲ್ಲಿ ತುಂಬಿಕೊಳ್ಳುತ್ತಿದ್ದಾಗ ವಾಹ್..ಅದರ ಮಜಾನಾ ಬೇರೆ. ಈ ಹಣ್ಣು ನೋಡಿದಾಗವೆಲ್ಲ ಪ್ರತಿಯೊಬ್ಬರಿಗೂ ಬಾಲ್ಯದ ನೆನಪು ಬರುತ್ತದೆ.

ದಾವಣಗೆರೆಯ ಹಳ್ಳಿ, ರಸ್ತೆ ಬದಿ ಈ ಮರಗಳಿದ್ದು, ಈಗ ಅವುಗಳು ವಾಣಿಜ್ಯಕರೀಣವಾಗಿದೆ. ಕೆಜಿ ಗೆ 300 ರೂ. ದರ ಫಿಕ್ಸ್ ಮಾಡಲಾಗಿದ್ದು, ಈ ಹಣ್ಣು ನೋಡಿದವ್ರೂ ತಗೋಳದೇ ಮುಂದೆ ಹೋಗೋದಿಲ್ಲ. ಅದರಲ್ಲೂ ಈ ಹಣ್ಣು ತಿಂದಾಗ ಬಾಲ್ಯ ಸ್ನೇಹಿತರು ನೆನಪಾಗುತ್ತಾರೆ..ಆ ಕ್ಷಣಗಳು ಕೂಡ ಒಂದು ನಿಮಿಷ ಕಣ್ಣಮುಂದೆ ಬಂದು ಹೋಗುತ್ತದೆ.

ಈಹಣ್ಣನ್ನು ಇಲಾಚಿ ಕಾಯಿ, ಸಿಹಿಹುಣಸೆ, ದೊರ್ಯಾ ಹುಣಸೆ ಹೀಗೆ ಹತ್ತಾರು ಹೆಸರುಗಳಿಂದ ಕರೆಯುತ್ತಾರೆ. ಬಹಳ ರುಚಿಕರವಾದ ಈ ಹಣ್ಣು ಶುಗರ್, ಬಿಪಿಗೂ ಒಳ್ಳೆಯದು. ಸಾಮಾನ್ಯವಾಗಿ ಈ ಹಣ್ಣು ಕೆಂಪಾದಾಗ ಮಾತ್ರ ರುಚಿ ಸಿಗುತ್ತದೆ. ಹಾಗೆ ತಿಂದ್ರೆ ಒಗುರು ಇರುತ್ತದೆ. ತಿಳಿಹಸಿರು ಬಣ್ಣದಿಂದ ಬೆಳ್ಳಗೆ ಹಾಲಿನ ಬಣ್ಣ, ಇಲ್ಲವೇ ಕೆಂಪು ಬಣ್ಣಕ್ಕೆ ತಿರುಗಿದಾಗ ತಿನ್ನಬೇಕು.

ಸಾಮಾನ್ಯವಾಗಿ ಪೊದೆಗಳಲ್ಲಿ ಬೆಳೆಯುವ ಈ ಗಿಡಗಳು, ಮರವಾದಾಗ ಕೈಗೆ ಸಿಗೋದಿಲ್ಲ, ಮೈ ತುಂಬಾ ಮುಳ್ಳುಗಳಿರುವುದರಿಂದ ಇವುಗಳನ್ನು ಕೀಳಲು ಜೋಟಿಯೇ ಬೇಕು. ಇಲ್ಲದೇ ಹೋದರೆ ಕಲ್ಲಿನ ಏಟೇ ಬೇಕು. ಉದ್ದನೆಯ ಬಿದಿರ ಕೊಲೊಂದಕ್ಕೆ ಕೊಂಕೊಂದನ್ನು ಸಿಕ್ಕಿಸಿ ಹಾವಿನಂತೆ ನುಸುಳಿಕೊಂಡು ಕೆಳಗೆ ಬಿದ್ದಾಗ ಅದನ್ನು ತೆಗೆದುಕೊಳ್ಳಲು ಸ್ನೇಹಿತರ ನಡುವೆ ಜೋರಾದ ಜಗಳವು ಸಾಕಷ್ಟು ಬಾರಿ ಆಗಿದೆ.

ಬೇಸಿಗೆ ಕಾಲದ ಎರಡು ತಿಂಗಳು ಮಾತ್ರ ಈ ಹಣ್ಣುಗಳು ಸಿಗುತ್ತದೆ. ಕೆಲವೆಡೆ ಈಗ ತೋಟಗಳಾಗಿ ಪರಿವರ್ತನೆಯಾಗಿದೆ. ಅಲ್ಲದೇ ವಾಣಿಜ್ಯ ಬೆಳೆಯಾಗಿಯೂ ಸಿಹಿ ಹುಣಸೆ ಹಣ್ಣು ಪರಿವರ್ತನೆಯಾಗಿದೆ. ಈ ಹಣ್ಣು ಪಕ್ಷಿಗಳ ಪ್ರಿಯವೂ ಹೌದು..ಹಣ್ಣನ್ನು ತಿಂದು ಬೀಜ ಉದುರಿಸುವ ಪಕ್ಷಿಗಳಿಂದ ಸಿಹಿ ಹುಣಸೆ ಮರದ ಸಂಖ್ಯೆ ಹೆಚ್ಚುತ್ತಿದೆ. ಮರದಲ್ಲಿ ಹೂವು ಬಿಟ್ಟಿರುವುದು ತಿಳಿದೊಡನೆ ಮಕ್ಕಳು ಬೇಸಿಗೆ ಯಾವಾಗಪ್ಪ ಬರುತ್ತದೆ ಎಂದು ಕಾಯುತ್ತಾರೆ. ರಜೆ ದಿನದಲ್ಲೋಂತು ಹಣ್ಣು ಕೀಳಲು ಗುಂಪಾಗಿ ಹೋಗುವುದು ಕಾಮನ್.

ಬಾಲ್ಯದ ನೆನಪು ಮಾಡುವ ಈ ರುಚಿ ರುಚಿಯಾದ ಹಣ್ಣು.!

ದೊಡ್ಡದಾದ ಜೇಬಿನಲ್ಲಿ ಸೂಜಿಯ ಮುಳ್ಳುಗಳಿಂದ ಮೈಯೆಲ್ಲಾ ಪರಿಸಿಕೊಂಡು, ಜೇಬಿನ ತುಂಬ ಸಿಹಿ ಹುಣಸೆ ಕಾಯಿಗಳನ್ನು ತುಂಬಿಸಿಕೊಂಡು ಮನೆಗೆ ಹೋಗುತ್ತಿರುವ ಮಕ್ಕಳನ್ನು ನೋಡಿದಾಗ ಹಳೆ ನೆನಪಾಗುತ್ತದೆ. ದಾರಿಯಲ್ಲಿ ಜೇಬು ಅಗಲವಾಗಿ ಉಬ್ಬಿ ನಾಲ್ಕಾರು ಜನಕ್ಕೆ ಕಂಡರೆ ಸಾಕು ಅಂದಿನ ಬೇಟೆಗೆ ಭರ್ಜರಿ ಮನ್ನಣೆ.

ಇನ್ನು ಇಲಾಚಿ ಕಾಯಿಗಳ ರುಚಿ ಬಲ್ಲವರು ಪ್ರತಿಬಾರಿಯು ಗಿಡಕ್ಕೆ ಭೇಟಿಕೊಡದೆ ಬರೋದಿಲ್ಲ. ಇಲಾಚಿಯನ್ನು ಅದರ ಸಿಪ್ಪೆಯಿಂದ ಬೇರ್ಪಡಿಸಿ, ನಂತರ ಬೀಜಗಳಿಂದ ಒಂದೊಂದನ್ನೆ ಮುಕ್ತಿಗೊಳಿಸಿ, ಬಾಯಿಗೆ ಹಾಕೊಕೊಂಡರೇ ಅದರ ಸ್ವಾಧವೆ ಬೇರೆ. ಜಾಸ್ತಿ ತಿನ್ನ ಬೇಡ್ರೊ..ಕಾ ಆಗುತ್ತೇಘಿ, ಬಿಸಿಲಿಗೂ ಇಲಾಚಿಗೂ ಆಗುವುದಿಲ್ಲ. ಇಲಾಚಿ ಹೆಚ್ಚು ತಿಂದರೆ ಗಂಟಲು ಕಟ್ಟುತ್ತೇ ಮಿತಿಮೀರಿದರೆ ಎಲ್ಲವೂ ಅಪಾಯವೆ ನೋಡಿ ಎಂದು ಪೋಷಕರು ಮಕ್ಕಳಿಗೆ ಹೇಳಿದರೂ ಪ್ರಯೋಜನ ಮಾತ್ರ ಶೂನ್ಯ.

ಸದ್ಯ ಇಲಾಚಿಕಾಯಿಗಳು ದಾವಣಗೆರೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಇವುಗಳನ್ನು ನೋಡಿದವರೂ ಸ್ವಲ್ಪವಾದರೂ ತೆಗೆದುಕೊಂಡು ಹೋಗುತ್ತಿದ್ದಾರೆ. ಸದ್ಯ ಸಿಹಿ ಹುಣಸೆ ಮಾರುವವರು ಕಡಿಮೆಯಾಗುತ್ತಿದ್ದಾರೆ. ಸಿಟಿಯಲ್ಲಿ ಈ ಹಣ್ಣಿನ ಬಗ್ಗೆ ಅದೆಷ್ಟೋ ಮಕ್ಕಳಿಗೆ ಗೊತ್ತಿಲ್ಲಘಿ. ಮೊಬೈಲ್‌ನ ಪೋಟೊದಲ್ಲಿ ಈ ಹಣ್ಣು ನೋಡಿದಾಗ ಮಾತ್ರ ಈ ಹಣ್ಣು ತಿನ್ನದೇ ಇರೋದಕ್ಕೆ ಆಗೋದಿಲ್ಲ.

ಈ ಹಣ್ಣಿನ ಮೂಲ ಮೆಕ್ಸಿಕೊ, ಅಮೇರಿಕಾ, ಮಧ್ಯದ ಏಷಿಯಾ, ಕ್ಯಾರಿಬಿಯನ್ , ಪ್ಲೋರಿಡಾ ಹಾಗೂ ಫೀಲಿಪೈನ್ಸ್ ಆಗಿದೆ. ಭಾರತದಲ್ಲಿ ತಮಿಳುನಾಡು, ಕೇರಳ, ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳಗಳಲ್ಲಿ ಕಾಣಬಹುದು. ಕನ್ನಡದಲ್ಲಿ ಡೋರ ಹುಣಸೆ ಅಥವಾ ಸೀಮೆ ಹುಣಸೆ, ತಮಿಳಿನಲ್ಲಿ ಕೊಡುಕ್ಕಪುಲ್ಲಿ, ತೆಲುಗಿನಲ್ಲಿ ಸೀಮಾ ಚಿಂಟಕಾಯಾ ಹಾಗೂ ಹಿಂದಿಯಲ್ಲಿ ಸಿಂಗಿ ಎಂದೆಲ್ಲಾ ಕರೆಯುತ್ತಾರೆ. ಇಲಾಚಿಯು ಹಲವು ಖಾಯಿಲೆ, ರೋಗಗಳಿಗೆ ಮದ್ದಾಗಿಯೂ ಉಪಯೋಗಿಸುತ್ತಾರೆ. ಇಲಾಚಿಗಳಲ್ಲಿ ಹಲವು ಬಗೆಯ (ಛ್ಚಿಜಿಛಿ) ವಿಧಗಳಿವೆ.

ಒಂದೊಂದರದು ಒಂದೊಂದು ರುಚಿ. ಕೆಲವು ಇಲಾಚಿಗಳು ತಿಳಿ ಹಸಿರಿನಿಂದ ಹಾಲಿನ ಕೆನೆಯಂತಹ ಬಣ್ಣಕ್ಕೆ ತಿರುಗಿ ಹಣ್ಣಾಗಿ ಬಿಡುತ್ತವೆ. ಇನ್ನು ಕೆಲವುಗಳು ಕೆಂಪನೆ ಬಣ್ಣಕ್ಕೆ ತಿರುಗಿ ಇಲಾಚಿಗೆ ಎಲ್ಲಿಲ್ಲದ ರುಚಿ ಹಣ್ಣಿಗೆ ನೀಡುತ್ತದೆ. ಸದ್ಯ ಈಗ ನಗರಾಭಿವೃದ್ಧಿಯಾಗುತ್ತಿರುವುದರಿಂದ ಈ ಸಸ್ಯ ಸಂಪತ್ತನ್ನು ಯಾವುದೇ ಕುರುಹುಗಳಿಲ್ಲದೆ ನಾಶವಾಗುತ್ತಿದೆ.ಬಾಲ್ಯದಲ್ಲಿ ಸವಿದ ಈ ರುಚಿಯನ್ನು ಈಗಿನ ಮಕ್ಕಳು ಸವಿಯುತ್ತಿಲ್ಲ. ಸಿಹಿ ಹುಣಸೆ ಸಂಪೂರ್ಣವಾಗಿ ಮರೆಯಾಗಿದೆ ಎಂದು ಹೇಳದಿದ್ದರೂ, ಹೇರಳವಾಗಿದ್ದ ಅವುಗಳನ್ನು ಈಗ ಕೇವಲ ಕೆಲವೆ ಕಡೆಗಳಲ್ಲಿ ಕಾಣುತ್ತಿದೆ. ಒಟ್ಟಾರೆ ಮುಂದಿನ ಪೀಳಿಗೆಗೆ ಇಲಾಚಿಯ ರುಚಿ ಸಿಗಲಿ ಎಂಬುದೇ ನಮ್ಮ ಆಶಯ.

Leave a Reply

Your email address will not be published. Required fields are marked *

error: Content is protected !!