ಜಿಲ್ಲಾ ಕಾಂಗ್ರೆಸ್ ವತಿಯಿಂದ ವರ್ಷದ ವ್ಯಕ್ತಿ ಪ್ರಶಸ್ತಿ ಪುರಸ್ಕೃತೆ ಜಸ್ಟಿನ್ ಡಿಸೋಜಾಗೆ ಸನ್ಮಾನ
ದಾವಣಗೆರೆ: ಜಿಲ್ಲಾ ಕಾಂಗ್ರೆಸ್ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿ
ವರ್ಷದ ವ್ಯಕ್ತಿ ಪ್ರಶಸ್ತಿ ಪಡೆದಿರುವ ಜಸ್ಟಿನ್ ಡಿಸೋಜಾ ರವರಿಗೆ ಇಂದು ಸಿದ್ದಗಂಗಾ ವಿದ್ಯಾ ಸಂಸ್ಥೆಯ ಆವರಣದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ ಶಿಕ್ಷಣ ಕ್ಷೇತ್ರದಲ್ಲಿ ಸಿದ್ದಗಂಗಾ ಸಂಸ್ಥೆಯ ಕೊಡುಗೆ ಅಪಾರವಾಗಿದ್ದು ಬಡವರು, ಶ್ರೀಮಂತರು ಎಲ್ಲರೂ ಈ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುವಂತಹ ಶುಲ್ಕವಿದ್ದು, ಶಿಕ್ಷಣವು ಸಹ ಅತ್ಯುತ್ತಮ ದರ್ಜೆಯಲ್ಲಿ ದೊರೆಯುತ್ತಿದೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಸ್ಟಿನ್ ಡಿಸೋಜರವರು ಜಿಲ್ಲಾ ಕಾಂಗ್ರೆಸ್ ನಿಂದ ಸನ್ಮಾನ ಮಾಡಿದ ಎಲ್ಲ ಮುಖಂಡರಿಗೂ ಧನ್ಯವಾದ ತಿಳಿಸಿ, ನಮ್ಮ ಸಂಸ್ಥೆಯ ಏಳಿಗೆಗೆ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪನವರ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ರವರ ಕೊಡುಗೆ ಅಪಾರವಾಗಿದ್ದು ತಾವು ಹಾಗೂ ನಮ್ಮ ಸಂಸ್ಥೆ ಕೊನೆಯವರೆಗೂ ಅವರ ಸಹಾಯವನ್ನು ಮರೆಯುವುದಿಲ್ಲ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶಿವಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್, ವಿಪಕ್ಷ ನಾಯಕ ನಾಗರಾಜ್ ಸಂದರ್ಭೋಚಿತವಾಗಿ ಮಾತನಾಡಿದರು.
ಪಾಲಿಕೆ ಸದಸ್ಯರಾದ ಜೆ.ಎನ್ ಶ್ರೀನಿವಾಸ್, ಶ್ವೇತಾ ಜೆ.ಎನ್. ಶ್ರೀನಿವಾಸ್, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಕೆ.ಎಲ್.ಹರೀಶ್ ಬಸಾಪುರ, ದಾಕ್ಷಾಯಣಮ್ಮ, ರಾಜೇಶ್ವರಿ, ಅಬ್ದುಲ್ ಜಬ್ಬರ್, ಯುವರಾಜ್, ಸಿದ್ದೇಶ್, ಪ್ರವೀಣ್, ಶಮಿ ದೇವರಹಟ್ಟಿ, ಅಲೆಕ್ಸಾಂಡರ್ ಜಾನ್ ಇನ್ನು ಮುಂತಾದವರು ಉಪಸ್ಥಿತರಿದ್ದರು.