ದಾವಣಗೆರೆ: ಕೇವಲ ಒಂದು ಕೋಮಿನ ತುಷ್ಟೀಕರಣಕ್ಕಾಗಿ ದೇಶದ್ರೋಹಿ PFI ಸಂಘದ 157 ಕಾರ್ಯಕರ್ತರನ್ನ ಬಿಡುಗಡೆಗೊಳಿಸಿದ್ದು ಇದೇ ಕಾಂಗ್ರೆಸ್ ನ ಸಿಧ್ದರಾಮಯ್ಯನವರ ಸರ್ಕಾರ, ಮತ್ತೊಂದು ಕಡೆ ಹಿಂದೂ ವಿರೋಧಿ ಮಾನಸಿಕತೆಯಿಂದ ಇಂದು ಅವನತಿಯತ್ತ ಸಾಗಿದೆ: ಪವನ್ ರೇವಣಕರ್.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಜರಂಗದಳವನ್ನು ನಿಷೇಧ ಮಾಡುವ ಬಗ್ಗೆ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ.
ಹಿಂದೂಗಳ ವಿರುದ್ದ ಇವರ ಮನಸ್ಸಿನಲ್ಲಿ ಎಷ್ಟು ವಿಷ ಇದೆ ಎಂಬುದರ ಕುರಿತು, ಈ ರೀತಿಯಾದ ಸಾವಿರ ನಿದರ್ಶಗಳಿವೆ.
ಭಜರಂಗದಳದ ಬಗ್ಗೆ ಇವರಿಗೇನು ಗೊತ್ತು.?
ಸದಾ ಹಿಂದೂ ಧರ್ಮದ ಜಾಗೃತಿಯ ಕುರಿತು ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಾ ಬಂದಿರುವ ಸಂಘಟನೆ ಭಜರಂಗದಳ. ಸದಾ ರಾಷ್ಟ್ರದ ಆಂತರಿಕ ರಕ್ಷಣೆಯನ್ನೇ ತನ್ನ ಪ್ರಮುಖ ಧ್ಯೇಯವಾಗಿಸಿಕೊಂಡ, ಸಮಾಜದಲ್ಲಿರುವ ದೇಶದ್ರೋಹಿ ಶಕ್ತಿಗಳ ವಿರುಧ್ಧ ತಮ್ಮ ಪ್ರಾಣದ ಹಂಗನ್ನೂ ತೊರೆದು ಹೋರಾಡುತ್ತಾ, ಅನೇಕ ಬಾರಿ ಮತಾಂಧ ಶಕ್ತಿಗಳ ದಾಳಿಗೆ ಅನೇಕ ಕಾರ್ಯಕರ್ತರು ಬಲಿಯಾಗಿರುವ ಅಸಂಖ್ಯ ಉಧಾಹರಣೆಗಳಿವೆ.
ಕಾಂಗ್ರೆಸ್ ಪಕ್ಷ ಸದಾ ಹಿಂದೂ ವಿರೋಧಿ.
ಹಿಂದೂಗಳ ನರಮೇಧ ನಡೆಸಿದ ಕಾಶ್ಮೀರಿ ಪ್ರತ್ಯೇಕತಾವಾದಿ ಭಯೋತ್ಪಾದಕನನ್ನ ಅಂದಿನ UPA ಅವಧಿಯಲ್ಲಿ ಪ್ರಧಾನಿ ಕಛೇರಿಯಲ್ಲಿ ಸನ್ಮಾನಿಸಿದ್ದು ಇದೇ ಕಾಂಗ್ರೆಸ್ ಪಕ್ಷ.
ಕಾಂಗ್ರೆಸ್ ನವರ ಬಾಯಲ್ಲಿ ಎಂದಿಗೂ, ಭಯೋತ್ಪಾದನಾ ಸಂಘಟನೆ PFI ಬ್ಯಾನ್ ಮಾಡ್ತಿವಿ ಅಂತ ಬರಲಿಲ್ಲಾ.
ಅದು, ದೇಶದ ಸುರಕ್ಷತೆಯ ದೃಷ್ಟಿಯಿಂದ ಓಟ್ ಬ್ಯಾಂಕ್ ಲೆಕ್ಕಿಸದೆ, PFI ಭಯೋತ್ಪಾದನಾ ಸಂಘಟನೆಯನ್ನು ಬ್ಯಾನ್ ಮಾಡಿದ್ದು BJP ಸರ್ಕಾರ.
ಬಾಟ್ಲಾ ಹೌಸ್ ಎನ್ಕೌಂಟ್ ನಲ್ಲಿ ಭಯೋತ್ಪಾದಕರು ಸತ್ತಾಗ ಸೋನಿಯಾ ಗಾಂಧಿ ಕಣ್ಣಲ್ಲಿ ನೀರು ಬಂದಿತ್ತು ಎಂದು ಅಂದಿನ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಶಿದ್ ಬಹಿರಂಗವಾಗಿ ಹೇಳಿದ್ದರು.?
ಮುಂಬಯ್ ದಾಳಿಯಲ್ಲಿ ಪಾಕಿಸ್ಥಾನ ಕೃತ್ಯ ಇರುವುದು ಸಾಬೀತಾದರೂ, ಸೆರೆಸಿಕ್ಕ ಭಯೋತ್ಪಾದಕ ಕಸಬ್ ನನ್ನು, ಹಿಂದೂ ಭಯೋತ್ಪಾದಕ ಎಂದು ಬಿಂಬಿಸಲು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ 26/11 ಆರ್.ಎಸ್.ಎಸ್ ಪಾತ್ರವಿರುವ ಕುರಿತು ಪುಸ್ತಕ ಬಿಡುಗಡೆ ಮಾಡಿದ್ದು ಹಿಂದೂಗಳು ಮರೆತಂತಿದೆ.
ಸೈನಿಕರ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದವರು, ಕಾಂಗ್ರೆಸ್ ಕಣ್ಣಿಗೆ ಅಮಾಯಕ ಯುವಕರಂತೆ ಕಾಣುತ್ತಿದ್ದರು.?
ಈಗ ನೋಡಿದರೆ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳ ವನ್ನು ನಿಷೇಧ ಮಾಡೋ ಗ್ಯಾರಂಟಿ ಕೊಟ್ಟಿದ್ದಾರೆ.
ಕಾಂಗ್ರೆಸ್ ಅಂದ್ರೆ ಹಿಂದೂ ವಿರೋಧಿ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
