ಲೋಕಲ್ ಸುದ್ದಿ

ಆಹಾರ ದೇಹದ ಶಕ್ತಿ, ತಂಬಾಕು ದೇಹದ ವಿನಾಶಕಾರಿ : ರಾಜೇಶ್ವರಿ ಎನ್ ಹೆಗಡೆ

ಆಹಾರ ದೇಹದ ಶಕ್ತಿ, ತಂಬಾಕು ದೇಹದ ವಿನಾಶಕಾರಿ : ರಾಜೇಶ್ವರಿ ಎನ್ ಹೆಗಡೆ

ದಾವಣಗೆರೆ : ತಂಬಾಕು ಒಂದು ಮಾದಕ ಹಾಗೂ ಉತ್ತೇಜನ ನೀಡುವಂತಹ ವಸ್ತು, ತಂಬಾಕನ್ನ ಬಳಸಿ ದೀರ್ಘಕಾಲದ ಖಾಯಿಲೆಗಳಾದ ಕ್ಯಾನ್ಸರ್, ಹೃದಯ ಸಂಬಂಧಿ ಖಾಯಿಲೆಗಳು, ಶ್ವಾಸಕೋಶದ ತೊಂದರೆಗಳು ಹಾಗೂ ಇನ್ನಿತರ ಖಾಯಿಲೆಗಳಿಂದ ಬಳಲುತ್ತಾರೆ ಎಂದು  ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಧೀಶರಾದ ಶ್ರೀಮತಿ ರಾಜೇಶ್ವರಿ ಎನ್ ಹೆಗಡೆ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕು. ಕ. ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಛೇರಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ವಕೀಲರ ಸಂಘ, ಚಿಗಟೇರಿ ಜಿಲ್ಲಾ ಆಸ್ಪತ್ರೆ, ವಿಶ್ವರಾಧ್ಯ ಕ್ಯಾನ್ಸರ್ ಆಸ್ಪತ್ರೆ, ಹಾಗೂ ಕರುಣಾ ಜೀವ ಕಲ್ಯಾಣ ಟ್ರಸ್ಟ್’ ಇವರ ಸಂಯುಕ್ತಾಶ್ರಯದಲ್ಲಿ ಮೇ 31 ರಂದು ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಪ್ರತಿ ವರ್ಷ ನಾವು ಮೇ-31 ರಂದು ವಿಶ್ವ ತಂಬಾಕು ರಹಿತ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಈ ದಿನವನ್ನು ವಿಶ್ವದಾದ್ಯ್ಯಂತ ಆಚರಿಸಲಾಗುತ್ತಿದೆ ಎಂದರು.

ಈ ವರ್ಷದ ಧ್ಯೇಯವಾಕ್ಯ “ನಮಗೆ ಆಹಾರ ಬೇಕು, ತಂಬಾಕು ಬೇಡ” ಎಂಬುದಾಗಿದ್ದು ಈ ನಿಟ್ಟಿನಲ್ಲಿ “ಆಹಾರ ದೇಹದ ಸಹಕಾರಿ, ತಂಬಾಕು ದೇಹದ ವಿನಾಶಕಾರಿ” ಎಂದರು.

ತಂಬಾಕು ಬಳಕೆಯನ್ನ ನಿಲ್ಲಿಸಿ ಆಹಾರ ವಸ್ತುಗಳ ಬಳಕೆ ಹೆಚ್ಚಿಸಿದರೆ ಆರೋಗ್ಯವಂತ ಸಮಾಜವನ್ನ ನಿರ್ಮಾಣಮಾಡಬಹುದು.  ಹಾಗೂ ಇಂದಿನ ಯುವಕರೇ ನಾಳೆಯ ಪ್ರಜೆಗಳು ಎಂದು ಹೇಳತ್ತೇವೆ, ಆದರೆ ಯುವಕರೇ ವ್ಯಸನಿಗಳಾದರೆ ನಮ್ಮ ಸಮಾಜವನ್ನ ಯಾರು ಕಟ್ಟುವವರು ಯಾರು ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಧೀಶರಾದ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ್ಯದರ್ಶಿ ಮಹಾವೀರ ಎಂ, ಕರೆಣ್ಣವರ, ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿ ಡಾ|| ನಾಗರಾಜ್, ನಿವಾಸಿ ವೈದ್ಯಾಧಿಕಾರಿಗಳು ಅರುಣ್‍ಕುಮಾರ್, ದಂತ ವೈದ್ಯರು ಡಾ.ತಿಪ್ಪೇಸ್ವಾಮಿ, , ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಸುರೇಶ್ ಬಾರ್ಕಿ, ಸಿ.ಜಿ ಆಸ್ಪತ್ರೆಯ ಪ್ಯಾರಾಮೆಡಿಕಲ್ ಕಾಲೇಜಿನ ಉಪಾನ್ಯಾಸಕರು, ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

Click to comment

Leave a Reply

Your email address will not be published. Required fields are marked *

Most Popular

To Top