Teachers Recruitment : ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಕರ ನೇಮಕಾತಿಗೆ , ಇಲ್ಲಿದೆ  ಗುಡ್ ನ್ಯೂಸ್

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಕರ ನೇಮಕಾತಿಗೆ , ಇಲ್ಲಿದೆ  ಗುಡ್ ನ್ಯೂಸ್

ಬೆಂಗಳೂರು : ವಿಧಾನಸಭೆಯ ಅಧಿವೇಶನದಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನಾ ವೇಳೆಯಲ್ಲಿ ಅರಸೀಕೆರೆಯ ಶಾಸಕರಾದ ಶಿವಲಿಂಗೆಗೌಡ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ನವರಿಗೆ ಕೇಳಲಾದ ಪ್ರಶ್ನೆ ಮತ್ತು ಉತ್ತರ ಇಲ್ಲಿದೆ.

ಪ್ರಶ್ನೆ : ಶಿಕ್ಷಕರ ಕೊರತೆಯಿಂದ ಮಕ್ಕಳು ಶೈಕ್ಷಣಿಕ ಕಲಿಕೆಯಲ್ಲಿ ಹಿಂದುಳಿಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ? ಬಂದಿದ್ದರೆ, ಶಿಕ್ಷಕರ ನೇಮಕಾತಿಗೆ ಯಾವ ಕ್ರಮ ವಹಿಸಲಾಗಿದೆ?

ಸಚಿವರ ಉತ್ತರ : ವಿದ್ಯಾರ್ಥಿಹಳ ಶೈಕ್ಷಣಿಕ ಹಿತದೃಷ್ಟಿಯಿಂದ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ತಾತ್ಕಾಲಿಕವಾಗಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 27000 ಹಾಗೂ ಪ್ರೌಢ ಶಾಲೆಗಳಿಗೆ 6000 ದಂತೆ ಒಟ್ಟು 33000 ಅತಿಥಿ ಶಿಕ್ಷಕರುಗಳನ್ನು ನೇಮಿಸಿಕೊಳ್ಳಲಾಗಿದೆ.

ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ 15000 ಪದವೀಧರ ಪ್ರಾಥಮಿಕ ಶಿಕ್ಷಕರ ( 6 ರಿಂದ 8ನೇ ತರಗತಿ ) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.

ಸರ್ಕಾರ ಪ್ರೌಢಶಾಲೆಗಳ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯು ಪರಿಶೀಲನೆಯಲ್ಲಿದೆ.  ಎಂದು ಉತ್ತರಿಸಿದರು.

 

Leave a Reply

Your email address will not be published. Required fields are marked *

error: Content is protected !!