ಕೊಟ್ಟೂರು: ಮಹಿಳಾ ಶಕ್ತಿಯನ್ನು ಇನ್ನಷ್ಟು ಬಲಪಡಿಸಲು ಈ ದೇಶದ ಪ್ರಧಾನ ಮಂತ್ರಿಗಳು ಅಂಚೆ ಇಲಾಖೆಯ ಮೂಲಕ ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಜಾರಿಗೆ ತಂದಿದ್ದು ಇದರ ಸದುಪಯೋಗವನ್ನು ಪ್ರಪ್ರಥಮವಾಗಿ ಬಳ್ಳಾರಿ ವಿಭಾಗದ ಕೂಡ್ಲಿಗಿ ಉಪ ವಿಭಾಗದ ಕೊಟ್ಟೂರಿನ ಹರಾಳ ಗ್ರಾಮವು ಸಂಪೂರ್ಣ ಮಹಿಳಾ ಸಮ್ಮಾನ್ ಗ್ರಾಮ ಆಗಿರುವುದು ನಮ್ಮ ಬಳ್ಳಾರಿ ವಿಭಾಗಕ್ಕೆ ಒಂದು ಹೆಮ್ಮೆಯ ವಿಷಯ ಎಂದು ಬಳ್ಳಾರಿಯ ವಿಭಾಗದ ಅಂಚೆ ಅಧೀಕ್ಷಕರಾದ ವಿ ಎಲ್ ಚಿತ್ಕೋಟೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
