ಓಮ್ನಿ ಕಾರಿನಲ್ಲಿ ಗಾಂಜಾ ಸಾಗಣೆಕೆಗೆ ಯತ್ನ – ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿ.

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ರಮ ಗಾಂಜಾ ಸಾಗಣಿಕೆ ಎಗ್ಗಿಯಲ್ಲದೇ ನಡೆಯುತ್ತಿದೆ. ಇದೇ ಪೂರಕವೆಂಬಂತೆ ಶಿವಮೊಗ್ಗ ಜಿಲ್ಲಾ ಪೊಲೀಸರು ಕಳೆದೊಂದು ವಾರದಲ್ಲಿ ವಶ ಪಡಿಸಿಕೊಂಡಿರುವ ಗಾಂಜಾ ಪ್ರಮಾಣವೇ ಸಾಕ್ಷಿ ಯಾಗಿದೆ.
ಈಗ ಮತ್ತೇ ಭದ್ರಾವತಿ ಪೊಲೀಸರು ಅಕ್ರಮ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಕಡೆಯಿಂದ ಭದ್ರಾವತಿ ಕಡೆಗೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಗೊಂದಿ ಚಾನೆಲ್ ಹತ್ತಿರ ಪಿಎಸ್ಐ ಪೇಪರ್ ಟೌನ್ ಮತ್ತು ಸಿಬ್ಬಂದಿಯ ತಂಡವು ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಅಕ್ರಮ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂದಿಸಿದ್ದಾರೆ.
KA 37 M 1417
ಸಿಲ್ವರ್ ಕಲರ್ ನ ಓಮಿನಿ ಕಾರನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ಮಾದಕ ವಸ್ತು ಗಾಂಜಾ ಇರುವುದು ಕಂಡು ಬಂದಿದೆ. ಆರೋಪಿಯನ್ನು ವಶಕ್ಕೆ ಪಡೆದು, ಅಂದಾಜು 75/ಸಾವಿರ ರೂಪಾಯಿ ಮೌಲ್ಯದ ಒಟ್ಟು 5 ಕೆಜಿ ತೂಕದ ಒಣ ಗಾಂಜಾ, 02 ಮೊಬೈಲ್ ಫೋನ್ ಮತ್ತು ಕೃತ್ಯಕ್ಕೆ ಬಳಸಿದ ಓಮಿನಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿತನ ವಿರುದ್ದ ಕಲಂ 8(c),20(B)(ii)C,25 NDPS ಕಾಯ್ದೆ ರಿತ್ಯಾ ಪ್ರಕರಣ ದಾಖಲಿಸಿಕೊಂಡಿದ್ದಾರೆ.