ಕುಂದೂರು ಗ್ರಾಮದ ಟೀ ಸ್ಟಾಲ್ ನಲ್ಲಿ ಗ್ರಾಮೀಣ ಟೀ ಕುಡಿದ ಸಚಿವ.! ಸಾಥ್ ನೀಡಿದ ಶಾಸಕ ಡಿಸಿ

ಹೊನ್ನಾಳಿ : ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಕುಂದೂರು ಗ್ರಾಮದಲ್ಲಿ ಕಂದಾಯ ಸಚಿವ ಹಾಗೂ ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಗ್ರಾಮ ವಾಸ್ತವ್ಯ ಮಾಡಿ.
ಕಳೆದ ರಾತ್ರಿ ಕುಂದೂರು ಗ್ರಾಮದ ದೇವಾಲಯದಲ್ಲಿ ಕಂದಾಯ ಸಚಿವ ಆರ್ ಅಶೋಕ್ , ಎಂಪಿ ರೇಣುಕಾಚಾರ್ಯ ಜಿಲ್ಲಾಧಿಕಾರಿ ಮಹಂತೇಶ್ ಬಿಳಿಗಿ ಭಜನೆ ಗಾಯನ ಮಾಡಿದರು
ಇಂದು ಮುಂಜಾನೆಯಿಂದಲೇ ಕುಂದೂರು ಗ್ರಾಮದ ಬಸ್ ನಿಲ್ದಾಣ ಹಾಗೂ ಸುತ್ತಮುತ್ತ ಜಗಲಿ ಕಟ್ಟೆಯ ಬಳಿ ಜನಸ್ತೋಮದ ಮಧ್ಯೆ ಕುಳಿತು ಚಹ ಸ್ವೀಕರಿಸಿ ಅವರ ಯೋಗಕ್ಷೇಮ ವಿಚಾರಿಸಿದರು.
ರಾಜ್ಯ ಸರ್ಕಾರದ ಕಾರ್ಯವೈಕರಿ ಹೇಗಿದೆ ಹಾಗೂ ವೃದ್ಧಾಪ್ಯ ವೇತನ ಸರಿಯಾಗಿ ಬರುತ್ತಿದೆಯಾ ಎಂದು ಗ್ರಾಮಸ್ಥರ ವಿಚಾರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಅಧಿಕಾರ ವೃಂದ ಇದ್ದರು