ಗ್ರಾಮ ವಾಸ್ತವ್ಯದ ಗ್ರಾಮದಲ್ಲಿ ರಾಕ್ ಸ್ಟಾರ್ ಚಂದನ್ ಶೆಟ್ಟಿ || ಜನರಿಗೆ ಭಾರಿ ಮನೋರಂಜನೆ.!

ದಾವಣಗೆರೆ: ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಜನರಿಗೆ ಮನೋರಂಜನೆ ನೀಡುವ ಉದ್ದೇಶದಿಂದ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಿದ್ದು, ರಾಕ್ ಸ್ಟಾರ್ ಚಂದನ್ ಶೆಟ್ಟಿ, ಸರಿಗಮಪ ವಿನ್ನರ್ ಚನ್ನಪ್ಪ ಭಾಗಿಯಾಗಿದ್ದಾರೆ..
ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ನೇತೃತ್ಚದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ಆಯೋಜನೆಗೊಂಡಿದ್ದು, ರಸಮಂಜರಿ ಕಾರ್ಯಕ್ರಮದಲ್ಲಿ ಸಂಗೀತದ ವಾಸ್ತವ್ಯ ಹೂಡಿರುವ ಸಚಿವರು, ಅಧಿಕಾರಿಗಳನ್ನು ಹಾಗೂ ಗ್ರಾಮದ ಜನತೆಯನ್ನು ಆ ಮೂಲಕ ರಂಜಿಸಲಾಗುತ್ತಿದೆ.
ಚಂದನ್ ಶೆಟ್ಟಿ, ಚನ್ನಪ್ಪ ಸೇರಿದಂತೆ ವಿವಿಧ ಕಲಾವಿದರು ಭಾಗಿಯಾಗಿದ್ದು, ವಿವಿಧ ಕನ್ನಡ ಚಿತ್ರಗೀತೆಗಳನ್ನು ಹಾಡಿ ಕಲಾವಿದರು ರಂಜಿಸಿದರು. ಹಾಡಿಗೆ ಸಖತ್ ಸ್ಟೇಪ್ ಹಾಕಿ ಕುಂದೂರಿನ ಜನತೆ ಕುಣಿದು ಕುಪ್ಪಳಿಸಿದರು.