ದಾವಣಗೆರೆ :ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಶಾಮನೂರು ಶಿವಶಂಕರಪ್ಪ ಅವರ ಗೆಲುವಿಗಾಗಿ ಮೊಮ್ಮಗ ಸಮರ್ಥ್ ಶಾಮನೂರು ಓಂಟೆ ಮೇಲೆ ಕುಳಿತುಕೊಂಡು ಮತ ಯಾಚಿಸುತ್ತಿದ್ದಾರೆ.
82ರ ಹರೆಯದ ಶಾಮನೂರು ಶಿವಶಂಕರಪ್ಪ ಅತಿ ಹುರುಪಿನಿಂದಲೇ ದಕ್ಷಿಣ ಕ್ಷೇತ್ರಕ್ಕೆ ಮತ್ತೊಮ್ಮೆ ಸ್ಪರ್ಧಿಸಿದ್ದಾರೆ. ಸತತ ಗೆಲ್ಲುತ್ತಲೇ ಬಂದಿರುವ ಶಾಮನೂರುಗೆ ಇದೀಗ ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಭಾರೀ ಫೈಟ್ ನೀಡುವ ನಿರೀಕ್ಷೆ ಇದೆ.
ಅತ್ತ ಅಜಯ್ ಕುಮಾರ್ ನಿತ್ಯವೂ ಅಬ್ಬರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತ ಶಿವಶಂಕರಪ್ಪ ನವರೂ ಸಹ ದಣಿವರಿಯದೆ ಪ್ರಚಾರಕ್ಕಿಳಿದಿದ್ದಾರೆ.
ಇನ್ನು ಶಿವಶಂಕರಪ್ಪ ಅವರ ಮಕ್ಕಳಾದ ಬಕ್ಕೇಶ್ ಹಾಗೂ ಗಣೇಶ್ ಸಹ ತಂದೆಯ ಪರ ಪರ ಮತ ಯಾಚಿಸಿದರೆ, ಸೊಂಸೆಯಂದಿರೂ ಸಹ ಮಾವನ ಪರ ಪ್ರಚಾರಕ್ಕಿಳಿದಿದ್ದಾರೆ.
ಇದೀಗ ಹೊಸ ತಲೆಮಾರು ಅಂದರೆ ಶಿವಶಂಕರಪ್ಪ ಅವರ ಮೊಮ್ಮಗ ಸಮಸ್ಥ್ ಸಹ ತನ್ನ ತಾತನ ಗೆಲುವಿಗಾಗಿ ನಿತ್ಯ ಶ್ರಮ ಪಡುತ್ತಿದ್ದಾನೆ. ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್, ವಾರ್ಡ ನಂಬರ್ 19ರಲ್ಲಿ ಒಂಟೆ ಮೇಲೆ ಏರಿಸಿ ಎಂಜಾಯ್ ಮಾಡುತ್ತಲೇ ಮತ ಚಾಯಿಸಿದ್ದಾರೆ.
