ಹರಿಹರ ನಗರಸಭೆ ವಾರ್ಡ್ ಉಪ ಚುನಾವಣೆ ಶೇ 66.82% ಮತದಾನ
ಹರಿಹರ : ನಗರಸಭೆಯ 14 ನೇ ವಾರ್ಡ್ ಉಪ ಚುನಾವಣೆಯು ಇಂದು ನಡೆದು ಶೇ.66.82 ರಷ್ಟು ಮತದಾನವಾಗಿದ್ದು, ಜಿದ್ದಾಜಿದ್ದಿನ ಖಣವಾಗಿ ಮಾರ್ಪಟ್ಟಿದ್ದು, ವಿಜಯಲಕ್ಷ್ಮಿ ಯಾರಿಗೆ ಒಲಿಯು ವಳೋ ಎಂಬ ಕುತೂಹಲಕಾರಿ ಬೆಳವಣಿಗೆ ಜನರಲ್ಲಿ ಮೂಡಿಸಿ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.
ನಗರಸಭೆಯ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದ ಮಹಬೂಬ್ ಬಾಷಾ ಅವರ ಅಕಾಲಿಕ ಮರಣ ದಿಂದ ತೆರವಾಗಿರುವ 14ನೇ ವಾರ್ಡಿನ ಉಪ ಚುನಾ ವಣೆ ನಗರಸಭೆ ಅಧ್ಯಕ್ಷ ಗಾದಿ ಹಾಗೂ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಸಾಮಾನ್ಯ ಮೀಸಲು ಕ್ಷೇತ್ರ ವಾರ್ಡಿಗೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿ ಸಿದ್ದು, ಪೈಪೋಟಿಯನ್ನು ತೀವ್ರಗೊಳಿಸಿದೆ. ಪಕ್ಷೇತರ ಅಭ್ಯರ್ಥಿ ಕೂಡ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ನಗರಸಭೆಯಲ್ಲಿ ಜೆಡಿಎಸ್ 14, ಕಾಂಗ್ರೆಸ್ 9, ಬಿಜೆಪಿ 5 ಹಾಗೂ 2 ಪಕ್ಷೇತರ ಸದಸ್ಯರನ್ನು ಹೊಂದಿದೆ. ಅಧ್ಯಕ್ಷ ಹಾಗೂ ಉಪಾಧ‍್ಯಕ್ಷ ಸ್ಥಾನವನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟ ಹಂಚಿ ಕೊಂಡಿದೆ. ಮೈತ್ರಿಕೂಟಗಳ ಉಳಿವಿಗೆ ಎರಡು ಪಕ್ಷದ ನಾಯಕರು ತಲೆಕೆಡಿಸಿ ಕೊಂಡಿದ್ದಾರೆ.
ಮತದಾನದ ವೇಳೆ ಮೂರು ಪಕ್ಷದ ಮುಖಂಡರು ಗಳು ತಮ್ಮದೇ ಆದ ಶೈಲಿಯಲ್ಲಿ ಪ್ರಚಾರ ಮಾಡುತ್ತಿದ್ದು ಮತಗಟ್ಟೆ ಸಮೀಪ ಕಂಡುಬಂದಿತು.