ಹರಿಯಮ್ಮನಹಳ್ಳಿ: ಶ್ರೀ ನೂಲಿ ಚಂದಯ್ಯನವರ ಅದ್ದೂರಿ ಜಯಂತೋತ್ಸವ

ಹರಪನಹಳ್ಳಿ: ಹರಿಯಮ್ಮನಹಳ್ಳಿ ಗ್ರಾಮದಲ್ಲಿ ಅಖಿಲ ಕರ್ನಾಟಕ ಕೊರಮ ಸಂಘದ ವತಿಯಿಂದ 12ನೇ  ಶತಮಾನದ ಶ್ರೀ ಶಿವಶರಣ ನೂಲಿಯ ಚಂದಯ್ಯ ನವರ 916 ನೇ ಜಯಂತೋತ್ಸವದ ಅಂಗವಾಗಿ ಸಕಲ ವಾದ್ಯಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಈ ಜಯಂತಿಯಲ್ಲಿ ಊರಿನ ಕೊರಮ ಸಂಘದ ಅಧ್ಯಕ್ಷ ಎ ಮಾರುತಿ, ಉಪಾಧ್ಯಕ್ಷ  ಪಕೀರಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ ದೇವೇಂದ್ರಪ್ಪ, ಡಿ ಪ್ರಭಾಕರ್, ಅಲ್ಲದೆ ಊರಿನ ಯುವಕರು, ಮಹಿಳೆಯರು, ಹಿರಿಯರು, ಮಕ್ಕಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!