ಆರೋಗ್ಯ

health; ಆರೋಗ್ಯ ಉಪ ಕೇಂದ್ರಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಿ: ಡಾ. ಮಲ್ಲಪ್ಪ

ದಾವಣಗೆರೆ, ಆ. 25: ಬಡವರ ವೈದ್ಯಕೀಯ ವೆಚ್ಚಗಳನ್ನು ಕಡಿಮೆ ಮಾಡಿದಾಗ ಪ್ರಧಾನ ಮಂತ್ರಿಯವರ ರಾಷ್ಟ್ರೀಯ ಗುಣಮಟ್ಟದ ಭರವಸೆ ಅನುಷ್ಠಾನವು ಸಾರ್ಥಕವಾಗುತ್ತದೆ ಎಂದು ತಿಳಿಸಿದ ಅವರು ಡಾ. ಮಲ್ಲಪ್ಪ, ಆರೋಗ್ಯ (health) ಉಪ ಕೇಂದ್ರಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಿ ಎಂದರು.

ಮಂಗಳವಾರ ದಾವಣಗೆರೆ ತಾಲ್ಲೂಕಿನ ಈಚಘಟ್ಟ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಜರುಗಿದ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಆಯ್ಕೆ ಹಾಗೂ ಮೌಲ್ಯ ಮಾಪನದ 12 ನಾಗರಿಕ ಸೇವೆಗಳ ಅಂಶಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.

dengue; ಸೊಳ್ಳೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಿ: ಡಾ. ದೇವರಾಜ್ ಪಟಗಿ

ಆರೋಗ್ಯ ಉಪಕೇಂದ್ರ ಮಟ್ಟದಲ್ಲಿ ನೀಡುವಂತಹ ಎಲ್ಲಾ ಸೇವೆಗಳನ್ನು ಜನರಿಗೆ ಒದಗಿಸಿ, ಬಡವರು ನಗರ ಪ್ರದೇಶಗಳಿಗೆ ತೆರಳಿ ಆಸ್ಪತ್ರೆೆಗಳಲ್ಲಿ ಮಾಡುವಂತಹ ವೈದ್ಯಕೀಯ ವೆಚ್ಚಗಳನ್ನು ಕಡಿಮೆ ಮಾಡಿದಾದ್ದಲ್ಲಿ ಪ್ರಧಾನ ಮಂತ್ರಿಯವರ ಈ ಯೋಜನೆಯ ಅನುಷ್ಠಾನವು ಸಾರ್ಥಕವಾಗುವುದೆಂದು ತಿಳಿಸಿದರು.

ನೇರ್ಲಿಗಿ ಪ್ರಾ.ಆ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಜ್ಯೋತಿ, ಸಮುದಾಯ ಆರೋಗ್ಯ ಅಧಿಕಾರಿ ಅನಿಲ್, ಪ್ರಮೋದ್, ಕರಿಬಸಪ್ಪ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Most Popular

To Top