sports; ರಾಷ್ಟ್ರೀಯ ಕ್ರೀಡಾ ದಿನ ಯಶಸ್ವಿ

ದಾವಣಗೆರೆ, ಆ.25: ರಾಷ್ಟ್ರೀಯ ಕ್ರೀಡಾ ದಿನಾಚರಣೆ (National Sports Day) ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಶುಕ್ರವಾರ ವಿವಿಧ ಕ್ರೀಡೆಗಳು (sports) ಯಶಸ್ವಿಯಾಗಿ ನಡೆದವು.

ರಸ್ತೆ ಓಟವನ್ನು ಪುರುಷರಿಗಾಗಿ 6 ಕಿ. ಮೀ, ಮಹಿಳೆರಿಗಾಗಿ 3 ಕಿ.ಮೀ ನಡೆಸಲಾಗಿದ್ದು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಹರ್ಷ ಇವರು ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕಬಡ್ಡಿ ತರಬೇತುದರಾದ ಶೈಲ, ಖೋಖೋ ತರಬೇತುದಾರರಾದ ಎಂ. ರಾಮಲಿಂಗಪ್ಪ, ಮಹಿಳಾ ತರಬೇತುದಾರರಾದ ಎಂ ಸಿ ಸುನೀತ, ಕುಸ್ತಿ ತರಬೇತುದಾರರಾದ ಕೆ.ವಿನೋದ್ ಕುಮಾರ್, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎನ್. ಕೆ. ಕೊಟ್ರೇಶ್, ಕಚೇರಿ ಸಿಬ್ಬಂದಿಗಳಾದ ಸೈಯದ್ ಭಾಷಾ, ಅಶೋಕ್, ಪರಶುರಾಮ್ ಮತ್ತು ಹಿರಿಯ ಕ್ರೀಡಾಪಟುಗಳು, ಕ್ರೀಡಾ ಅಭಿಮಾನಿಗಳು ಇನ್ನು ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!