ಹುಕ್ಕೇರಿಮಠದ ಉಭಯ ಶ್ರೀಗಳ ಪುಣ್ಯ ಮಹೋತ್ಸವ: ಪಂಚಾಕ್ಷರಿ ಸೇವಾ ಸಮಿತಿಯಿಂದ ಪಂಚಾಕ್ಷರಿ ಸಂಗೀತ ಪರಂಪರಾಗೆ ಚಾಲನೆ

ಹಾವೇರಿ : ನಗರದ ಹುಕ್ಕೇರಿಮಠದ ಉಭಯ ಶ್ರೀಗಳ ಪುಣ್ಯ ಮಹೋತ್ಸವದ ಅಂಗವಾಗಿ ಶ್ರೀ ಗುರು ಪಂಚಾಕ್ಷರಿ ಸೇವಾ ಸಮಿತಿ ಗದಗ ಇವರಿಂದ ಪಂಚಾಕ್ಷರಿ ಸಂಗೀತ ಪರಂಪರಾ ಉತ್ಸವ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ಜಗಿ ಗೌರಿ ಮಠದ ಶಿವಾಚಾರ್ಯ ಸ್ವಾಮೀಜಿ, ಪಂಚಾಕ್ಷರಿ ಗವಾಯಿಗಳು ಹಾಗೂ ಪಂ. ಪುಟ್ಟರಾಜ ಗವಾಯಿಗಳು ಸಂಗೀತದ ಮೇರು ನಕ್ಷತ್ರಗಲಾಗಿದ್ದು, ಅವರು ಸಂಗೀತ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ ಮತ್ತು ಅನನ್ಯ ವಾಗಿದೆ. ಈ ಪರಂಪರೆಯನ್ನು ಉಳಿಸಿಕೊಂಡು ಹೋಗುತ್ತಿರುವ ಗದಗಿನ ಗಾನಯೋಗಿ ಗುರು ಪಂಚಾಕ್ಷರಿ ಸೇವಾ ಸಮಿತಿಯ ಕಾರ್ಯ ನಿಜವಾಗಿಯೂ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಸಮ್ಮುಖ ವಹಿಸಿದ್ದ ಹರಸೂರು ಬಣ್ಣಬಣ್ಣದ ಮಠದ ಅಭಿನವ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಸಂಗೀತವು ನಮ್ಮೆಲ್ಲರ ದುಃಖ-ದುಮ್ಮಾನಗಳನ್ನು ದೂರಮಾಡುವ ದಿವ್ಯೌಷಧಿಯಾಗಿದೆ, ಎಂದು ಹೇಳಿದರು.

ಸಮಾರಂಭದಲ್ಲಿ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಕೂಡಲದ ಗುರು ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಠಾಧ್ಯಕ್ಷ ರಾದ ಸದಾಶಿವ ಸ್ವಾಮೀಜಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಪಂ. ಬಿ. ಎಸ್ ಮಠ, ಅಕ್ಕಮಹಾದೇವಿ ಮಠ, ಹಾಗೂ ಹೊನ್ನಾವರದ ಅಶೋಕ ಹುಗ್ಗಣ್ಣನವರ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಉತ್ಸವ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಹಂದ್ರಾಳ, ತಮ್ಮಣ್ಣ ಮುದ್ದಿ, ದಯಾನಂದ ಕನವಳ್ಳಿ, ಮತ್ತಿತರರು ಉಪಸ್ಥಿತರಿದ್ದರು. ಪ್ರಾಚಾರ್ಯ ಬಿ. ಬಸವರಾಜ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!