ಲಿಂ. ಶಿವಬಸವ ಸ್ವಾಮೀಜಿಗಳ ಹಾಗೂ ಲಿಂ.ಶಿವಲಿಂಗ ಸ್ವಾಮೀಜಿಗಳ ಪುಣ್ಯ ಸ್ಮರಣೆ: ಉಭಯ ಶ್ರೀಗಳ ಭಾವಚಿತ್ರದ ಮೆರವಣಿಗೆ ಮೂರು ಸಾವಿರ ಮಠದ ಜಗದ್ಗುರು ಚಾಲನೆ

ಹಾವೇರಿ: ನಗರದ ಹುಕ್ಕೇರಿಮಠ ದಲ್ಲಿ ಲಿಂ. ಶಿವಬಸವ ಸ್ವಾಮೀಜಿಗಳ ಹಾಗೂಲಿಂ.ಶಿವಲಿಂಗ ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವ ಅಂಗವಾಗಿ ಉಭಯ ಶ್ರೀಗಳ ಭಾವಚಿತ್ರದ ಮೆರವಣಿಗೆಗೆ ಹುಬ್ಬಳ್ಳಿಯ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧ ಮಹಾಸ್ವಾಮಿಗಳು ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಹುಕ್ಕೇರಿಮಠದ ಮಠಾಧೀಶರಾದ ಸದಾಶಿವ ಸ್ವಾಮೀಜಿ,ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಸ್ವಾಮೀಜಿ ಹಾಗೂ ಕೂಡಲದ ಗುರು ಮಹೇಶ್ವರ ಸ್ವಾಮೀಜಿ, ಹಾಗೂ ಉತ್ಸವ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಹಂದ್ರಾಳ ಹಾಗೂ ಕಾರ್ಯದರ್ಶಿ ಕನವಳ್ಳಿ, ತಮ್ಮಣ್ಣ ಮುದ್ದಿ, ಸಿ. ಜಿ. ತೋಟಣ್ಣನವರ, ಸೇರಿದಂತೆ ಸದಭಕ್ತರು ಉಪಸ್ಥಿತರಿದ್ದರು. ಕೋವಿಡ್ ಹಿನ್ನಲೆಯಲ್ಲಿ ಭಾವಚಿತ್ರದ ಮೆರವಣಿಗೆಯನ್ನು ಮಠದ ಆವರಣದಲ್ಲಿ ಮಾತ್ರ ನಡೆಸಲಾಯಿತು. ಶ್ರೀ ಮಠದಲ್ಲಿ ದಾಸೋಹ ಏರ್ಪಡಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!