ದಾವಣಗೆರೆ: ನಾನೇನು ಬಯಸಿ ಬಯಸಿ ಮುಖ್ಯಮಂತ್ರಿ ಆದವನಲ್ಲ. ಪ್ರಧಾನಿ ಮೋದಿ ಹಾಗೂ ಜನರ ಆಶೀರ್ವಾದದಿಂದ ಸಿಎಂ ಆಗಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹರಿಹರ ತಾಲ್ಲೂಕು ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಹಮ್ಮಿಕೊಂಡಿದ್ದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಾವು ಮುಖ್ಯಮಂತ್ರಿಯಾದ ವಿಚಾರವನ್ನು ಜನರ ಬಳಿ ಬಿಚ್ಚಿಟ್ಟರು. ಆದರೆ ಬಿ.ಎಸ್. ಯಡಿಯೂರಪ್ಪ ಅವರ ಹೆಸರು ಹೇಳಲಿಲ್ಲ.
ವಾಲ್ಮೀಕಿ ಸಮಾಜಕ್ಕೆ ನ್ಯಾಯ ಕೊಡುವುದು ಒಂದೇ ನನ್ನ ಗುರಿ. ನಿಮ್ಮ ಆಶೀರ್ವದ ವ್ಯರ್ಥವಾಗಲು ಬಿಡುವಪುದಿಲ್ಲ ನನ್ನ ಅವಧಿಯಲ್ಲಿಯೇ ಮೀಸಲಾತಿ ಪ್ರಕ್ರಿಯೆ ಮುಗಿದಿದ್ದು ನನ್ನ ಸೌಭಾಗ್ಯ ಎಂದು ಹೇಳಿದರು.
ಮೀಸಲಾತಿಗಾಗಿ ಒತ್ತಾಯಿಸಿ ಪ್ರಸನ್ನಾನಂದ ಶ್ರೀಗಳು 257 ದಿನ ಧರಣಿ ಕುಳಿತಿದ್ದರು. ಈ ಮೂಲಕ ಅವರಿಗೆ ತೊಂದರೆ ಕೊಟ್ಟಿದ್ದಕ್ಕೆ ಕ್ಷಮೆ ಕೋರುತ್ತೇನೆ. ಎಂದ ಸಿಎಂ., ಮುಂಬರುವ ಎಲ್ಲ ನೇಮಕಾತಿ, ಪ್ರಮೋಶನ್ ಹೊಸ ಮೀಸಲಾತಿಯಡಿ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಮಾಜಿ ಸಿ ಸಿದ್ದರಾಮಯ್ಯ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದ ಬೊಮ್ಮಾಯಿ, ನೀವು ಈಗ 9ನೇ ಶೆಡ್ಯೂಲ್ ಬಗ್ಗೆ ಮಾತನಾಡುತ್ತಿದ್ದೀರಿ. ನೀವೇ ಮೊದಲು ಮೀಸಲಾತಿ ಘೋಷಣೆ ಮಾಡಿದ್ರೆ ಇವತ್ತು ನಮಗೆ 9ನೇ ಶೆಡ್ಯೂಲ್ಡ್ ಮಾಡಲು ಅನುಕೂಲವಾಗುತ್ತಿತ್ತು ಎಂದು ತಿರುಗೇಟು ನೀಡಿದರು.
ಈಗಾಗಲೇ ನಾವು ಮೊದಲ ಹೆಜ್ಜೆ ಇಟ್ಟಿದ್ದೆವೆ, 9ನೇ ಶೆಡ್ಯೂಲ್ ಎರಡನೇ ಹೆಜ್ಜೆ ಇಡುತ್ತೇವೆ ಎಂದು ಬಸವ ರಾಜ ಬೊಮ್ಮಾಯಿ ಹೇಳಿದರು.
