ಮೋದಿ ಮತ ಬೇಕಾದಾಗ ದಲಿತರ ಕಾಲು ತೊಳಿತಾರೆ, ಬಿಜೆಪಿ ಶಾಸಕರು ದಲಿತ ಸಭಾಧ್ಯಕ್ಷರ ಮೇಲೆ ಪೇಪರ್ ತೂರಿ ಅಗೌರವ ತೋರುತ್ತಾರೆ : ಡಿ.ಬಸವರಾಜ್ ಆಕ್ರೋಶ 

ಮೋದಿ ಮತ ಬೇಕಾದಾಗ ದಲಿತರ ಕಾಲು ತೊಳಿತಾರೆ, ಬಿಜೆಪಿ ಶಾಸಕರು ದಲಿತ ಸಭಾಧ್ಯಕ್ಷರ ಮೇಲೆ ಪೇಪರ್ ತೂರಿ ಅಗೌರವ ತೋರುತ್ತಾರೆ : ಡಿ.ಬಸವರಾಜ್ ಆಕ್ರೋಶ 

ಬೆಂಗಳೂರು: ಪ್ರಜಾಪ್ರಭುತ್ವದ ದೇಗುಲ ಎಂದೆನಿಸಿಕೊಂಡಿರುವ ವಿಧಾನ ಸಭೆಯಲ್ಲಿ ಬಿಜೆಪಿ ಶಾಸಕರು ಸಭಾಧ್ಯಕ್ಷರ ಪೀಠದಲ್ಲಿ ಕುಳಿತಿದ್ದ ಉಪಸಭಾಪತಿ ರುದ್ರಪ್ಪ ಲಮಾಣಿ ಅವರ ತಲೆಯ ಮೇಲೆ ಸದನದ ಕಾಗದ ಪತ್ರಗಳನ್ನು ಹರಿದು ತೂರುವ ಮೂಲಕ ಅತ್ಯಂತ ಹೀನಾಯವಾಗಿ ನಡೆದುಕೊಂಡಿದ್ದಾರೆ ಇವರು ಉಪ ಸಭಾಪತಿ ದಲಿತರಾದ ಕಾರಣ ಈ ರೀತಿ ಅತ್ಯಂತ ಕೀಳುಮಟ್ಟದಲ್ಲಿ ನಡೆದುಕೊಂಡಿದ್ದಾರೆಂದು ಕೆಪಿಸಿಸಿ ರಾಜ್ಯ ವಕ್ತಾರಾದ ಡಿ ಬಸವರಾಜ್ ಬಿಜೆಪಿ ಶಾಸಕರ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ೧೦ ಶಾಸಕರನ್ನು ಸದನದಿಂದ ಅಮಾನತ್ತು ಮಾಡಿ ಹೊರ ಹಾಕಿರುವುದನ್ನು ಡಿ ಬಸವರಾಜ್ ಸ್ವಾಗತಿಸಿದ್ದಾರೆ. ಇವರ ವಿಶ್ವಗುರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಚುನಾವಣೆಗಳು ಸಮೀಪದಲ್ಲಿದ್ದಾಗ ದಲಿತರನ್ನು ಕರೆದು ಅವರ ಕಾಲು ತೊಳೆದು ಪಾದಪೂಜೆ ಮಾಡುತ್ತಾರೆ. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಟ್ರೆಂಬಲ್ ಬಾಲಕನ ಮೇಲೆ ಬಿಜೆಪಿಯ ಮುಖಂಡನೊಬ್ಬನು ಮೂತ್ರ ವಿಸರ್ಜನೆ ಮಾಡಿದ್ದಾನೆ.

ಅಲ್ಲಿಯೂ ಚುನಾವಣೆಗಳು ಸಮೀಪವಿರುವುದರಿಂದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಆ ದಲಿತ ಯುವಕನ ಪಾದಪೂಜೆ ಮಾಡಿದರು. ಇಲ್ಲಿ ನೋಡಿದರೆ ದಲಿತ ಶಾಸಕರು ಒಬ್ಬರು ಉಪಸಭಾಪತಿ ಸ್ಥಾನದಲ್ಲಿ ಕಲಾಪ ನಡೆಸುತ್ತಿರುವಾಗ ಅವರ ವಿರುದ್ಧ ಗದ್ದಲ ಎಬ್ಬಿಸಿ ಅವರಿಗೆ ಅಗೌರವ ತೋರಿ ಅವಮಾನಿಸುತ್ತಾರೆ. ಇದು ಬಿಜೆಪಿಯ ಮನು ಸಂಸ್ಕೃತಿ  ವಿಧಾನಸಭೆಯಲ್ಲೂ ವಿಜ್ರಂಬಿಸುತ್ತಿದೆ.

ನಿನ್ನೆ ದಿನ ಪ್ರಧಾನಮಂತ್ರಿ ನರೇಂದ್ರ ಮೋದಿಯ ವಿರುದ್ಧ  ದೇಶದ ವಿರೋಧ ಪಕ್ಷಗಳು ಒಟ್ಟಾಗಿ ಸಭೆ ನಡೆಸಿ ಒಗ್ಗಟ್ಟಾಗಿರುವುದು ಬಿಜೆಪಿಗೆ ಇರಿಸು ಮುರಿಸು ತಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನತೆಗೆ ಭರವಸೆ ನೀಡಿದ ಐದು ಗ್ಯಾರಂಟಿಗಳನ್ನು ಈಡೇರಿಸುತ್ತಿರುವುದು ಬಿಜೆಪಿಗೆ ಹತಾಶ ಮನೋಭಾವ ತಂದಿದೆ. ಆದುದ್ದರಿಂದ ಸರ್ಕಾರದ ಜನಪ್ರಿಯತೆ ಸಹಿಸಲಾರದೆ ಈ ರೀತಿ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಡಿ. ಬಸವರಾಜ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!