ಸಂವಿಧಾನದ ಆಶಯದಂತೆ ಪತ್ರಕರ್ತರು ಕಾರ್ಯನಿರ್ವಹಿಸಿ

ಸಂವಿಧಾನದ ಆಶಯದಂತೆ ಪತ್ರಕರ್ತರು ಕಾರ್ಯನಿರ್ವಹಿಸಿ

ದಾವಣಗೆರೆ; ಸಂವಿಧಾನದ ಮೂರು ಅಂಗಗಳ ಜೊತೆ ನಾಲ್ಕನೇ ಅಂಗವಾದ ಪತ್ರಿಕಾ ರಂಗವು ಜೊತೆಗೂಡಿ ಪರಸ್ಪರ ಅರಿತು ಕೆಲಸ ಮಾಡಿದಾಗ ಸಂವಿಧಾನದ ಮೂಲ ಆಶಯ ಈಡೇರಲು ಸಾಧ್ಯ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.

ಮಹಾನಗರ ಪಾಲಿಕೆಯ ಅವರಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ಹಲವು ವರ್ಷಗಳ ಸಂಘದ ಬೇಡಿಕೆಯಂತೆ ಈ ದಿನ ನಿಮಗೆ ನಿಮ್ಮ ಕಾರ್ಯಚಟುವಟಿಕೆ ಮಾಡಿಕೊಳ್ಳಲು ಪತ್ರಕರ್ತರ ಮಧ್ಯೆ ವಿಚಾರ ವಿನಯಮ ಮಾಡಿಕೊಳ್ಳಲು ಈ ಕಾರ್ಯಾಲಯ ಸದ್ಬಳಕೆ ಮಾಡಿಕೊಳ್ಳಿ. ಸರಕಾರದ ಸೌಕರ್ಯಗಳನ್ನು ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಪತ್ರಕರ್ತರು ಮಾಡಬೇಕು ಎಂದು ಸಲಹೆ ನೀಡಿದರು.

ಪಾಲಿಕೆ ಆಯುಕ್ತರಾದ ರೇಣುಕಾ ಮಾತನಾಡಿ, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದವರು ಭೇಟಿ ಮಾಡಿ ಮನವಿ ಸಲ್ಲಿಸಿದ್ದರಿಂದ ಅದರಂತೆ ಪಾಲಿಕೆ ಅವರಣದಲ್ಲಿ ಕಾರ್ಯಾಲಯ ನೀಡಲಾಗಿದೆ.

ನಾನು ಬೇರೆ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪತ್ರಕರ್ತ ಭವನಕ್ಕೆ ಹಣ ಮಂಜೂರು ಮಾಡಿದ್ದು ವ್ಯವಸ್ಥಿತ ಪತ್ರಿಕಾ ಭವನವಿದೆ. ಅದರಂತೆ ಇಲ್ಲಿ ಒಂದು ನಿವೇಶನ ಪಡೆದು
ಪತ್ರಿಕಾ ಭವನ ಮಾಡಿ. ನನ್ನ ಕೈಲಾದ ಮಟ್ಟಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ನಿಮ್ಮ ಸಂಘಕ್ಕೆ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಮೇಯರ್ ವಿನಾಯಕ ಪೈಲ್ವಾನ್ ಮಾತನಾಡಿ, ಪಾಲಿಕೆಯಿಂದ ಸಂಘದ ಕಾರ್ಯಾಲಯಕ್ಕೆ ವಿನ್ಯಾಸ ಮಾಡಿಕೊಡುವ ಭರವಸೆ ನೀಡಿದರು.

ಸಂಘದ ಜಿಲ್ಲಾಧ್ಯಕ್ಷ ಇ.ಎಂ ಮಂಜುನಾಥ್ ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪತ್ರಿಕಾ ಭವನಗಳಿವೆ ಆದರೆ ದಾವಣಗೆರೆ ಹೊರತು ಪಡಿಸಿ. ನಮ್ಮ ಸಂಘಟನೆಗೆ ೧೯೯೬ ರಲ್ಲಿ ಆಗಿನ ನಗರಸಭೆ ಆಡಳಿತವಿದ್ದಾಗ ಭವನ ನಿರ್ಮಾಣ ಮಾಡಲಾಗಿತ್ತು ನಂತರ ಕಾರಣಾಂತರದಿಂದ ಕೈತಪ್ಪಿ ಹೋಗಿತ್ತು. ಈಗ ನಮ್ಮ ಸಂಘಟನೆಯ ಚಟುವಟಿಕೆಗಳಿಗೆ ಒಂದು ಕಚೇರಿಗಾಗಿ ಪಾಲಿಕೆ ಆಯುಕ್ತರಲ್ಲಿ ಕೇಳಿಕೊಂಡಿದ್ದೇವೆ ಅದರಂತೆ ನಮಗೆ ಪತ್ರಿಕಾಭವನ ನೀಡಲಾಗಿದೆ ಎಂದರು.

ಇದೇ ವೇಳೆ ಸಂಘದ ಚಟುವಟಿಕೆ ನಡೆಸಲು ಪತ್ರಿಕಾ ಭವನ ನಿರ್ಮಿಸಲು ನಿವೇಶನ ಒದಗಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.

ಉಪ ಮಹಾಪೌರರಾದ ಯಶೋಧ ಯಗ್ಗಪ್ಪ, ವಾರ್ತಾಧಿಕಾರಿ ಧನಂಜಯಪ್ಪ, ವರದಿಗಾರರ ಕೂಟದ ಅಧ್ಯಕ್ಷ ಕೆ ಏಕಾಂತಪ್ಪ,ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್, ಖಜಾಂಚಿ ಬದ್ರಿನಾಥ್, ರಾಜ್ಯ ಸಮಿತಿ ಸದಸ್ಯ ಕೆ. ಚಂದ್ರಣ್ಣ,ರಾಷ್ಟ್ರೀಯ ಸಮಿತಿ ಸದಸ್ಯರಾದ ಎಸ್.ಕೆ. ಒಡೆಯರ್, ಉಪಾಧ್ಯಕ್ಷರಾದ ಆರ್.ಎಸ್.ತಿಪ್ಪೇಸ್ವಾಮಿ, ಪ್ರಕಾಶ್ ಎಚ್.ಎನ್, ಕಾರ್ಯದರ್ಶಿಗಳಾದ ನಿಂಗೋಜಿರಾವ್ ,ಜೆ.ಎಸ್,ವೀರೇಶ್, ಚನ್ನವೀರಯ್ಯ, ನಿರ್ದೇಶಕರಾದ ವೇದಮೂರ್ತಿ, ಕೃಷ್ಣೋಜಿರಾವ್, ಹೆಚ್,ಚಂದ್ರಶೇಖರ್, ಎನ್.ಆರ್.ರವಿ, ನಂದನಕುಮಾರ್, ಅನಿಲ್ ಬಿ.ವಿ, ಗುರುಮೂರ್ತಿ, ಮಾಯಾಕೊಂಡ ಮಂಜುನಾಥ, ಕೆ.ಸಿ. ಮಂಜುನಾಥ, ಇಂದೂಶೇಖರ ನಿಶಾನಿ ಮಠ, ಬಿ.ಎಸ್. ಮುದ್ದಯ್ಯ ಪತ್ರಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!