ಜೆ. ಪಿ. ನಡ್ಡಾ ಹೇಳಿಕೆಗೆ ವಿರೋಧ: ಕಾಂಗ್ರೆಸ್ ವಕೀಲ ಜಸ್ಟಿನ್ ಜಯಕುಮಾರ್ ರಿಂದ ಆಯುಕ್ತರಿಗೆ ದೂರು

ಜೆ. ಪಿ. ನಡ್ಡಾ ಹೇಳಿಕೆಗೆ ವಿರೋಧ: ಕಾಂಗ್ರೆಸ್ ವಕೀಲ ಜಸ್ಟಿನ್ ಜಯಕುಮಾರ್ ರಿಂದ ಆಯುಕ್ತರಿಗೆ ದೂರು

ದಾವಣಗೆರೆ: ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ರವರು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿ.ಜೆ.ಪಿ. ಸೋತರೆ ಕೇಂದ್ರದ ಯೋಜನೆಗಳು ಬಂದ್ ಆಗಲಿವೆ ಎಂದು ಬೆದರಿಕೆ ಹೇಳಿಕೆಗೆ ಖಂಡಿಸಿ ಕಾಂಗ್ರೆಸ್ ಮುಖಂಡ ಜಸ್ಟಿನ್ ಜಯಕುಮಾರ್ ಅವರು ಚುನಾವಣಾ ಆಯೋಗಕ್ಕೆ ದೂರು ನೀಡದ್ದಾರೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರವಾಸದಲ್ಲಿದ್ದ ಜೆ.ಪಿ. ನಡ್ಡಾರವರು ಹರಪನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದ ವೃತ್ತದಲ್ಲಿ ಬಿ.ಜೆ.ಪಿ. ಅಭ್ಯರ್ಥಿ ಕರುಣಾಕರ ರೆಡ್ಡಿ ಪರ ರೋಡ್ ಶೋ ನಡೆಸಿದ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಎಂಜಿನ್ ಬಿಜೆಪಿ ಸರ್ಕಾರವನ್ನು ಬೆಂಬಲಿಸಿ ಸಿದ್ದರಾಮಯ್ಯ ಸರ್ಕಾರ ಬಂದರೆ ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆ ಸೇರಿ ಹಲವು ಕೇಂದ್ರದ ಯೋಜನೆಗಳು ಬಂದ್ ಆಗಲಿವೆ ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆಯು ಮತದಾರರನ್ನು ಹೆದರಿಸಿ, ಬೆದರಿಸಿ ಮತವನ್ನು ಪಡೆಯುವ ಹೇಳಿಕೆಯಾಗಿದ್ದು, ಈ ಹೇಳಿಕೆ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಸಂಪೂರ್ಣ ವಿರುದ್ಧವಾದ ಹೇಳಿಕೆಯಾಗಿರುತ್ತದೆ. ಸದರಿ ಹೇಳಿಕೆಯಿಂದ ಕರ್ನಾಟಕದಲ್ಲಿರುವ ಮತದಾರರು ದಿಗ್ಭ್ರಾಂತಿಯಾಗಿದ್ದು ನಾವು ಬಿಜೆಪಿಯನ್ನು ಬೆಂಬಲಿಸದೇ ಹೋದರೆ ಕೇಂದ್ರದ ಯೋಜನೆಗಳು ನಿಂತು ಬಿಡಬಹುದು ಎಂಬಂತಹ ಭಯದ ವಾತಾವರಣದಲ್ಲಿ ಇದ್ದಾರೆ.

ಈ ಹೇಳಿಕೆಯು ರಾಜ್ಯದ ವಿವಿಧ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜನರ ತೆರಿಗೆಯಲ್ಲಿ ಜನರಿಗೆ ಬೇಕಾದ ಯೋಜನೆಗಳ ಮೂಲಕ ವಾಪಸ್ ಆಗುತ್ತದೆ ಹಾಗಿದ್ದಾಗ ಜೆ.ಪಿ. ನಡ್ಡಾರವರ ಹೇಳಿಕೆ ಒಬ್ಬ ದಡ್ಡ ಅಪ್ರಬುದ್ಧ ವ್ಯಕ್ತಿಯ ಹೇಳಿಕೆಯಾಗಿದ್ದು ಕೇಂದ್ರ ಸರ್ಕಾರದ ಯೋಜನೆಗಳು ಅವರ ಜಾಗೀರಲ್ಲ ಅದು ಭಾರತ ದೇಶದ ಪ್ರಜೆಗಳಿಗೆ ಸಲ್ಲಬೇಕಾದ ಯೋಜನೆಗಳಾಗಿವೆ.

ಆದುದರಿಂದ  ಜೆಪಿ ರಾಷ್ಟ್ರೀಯ ಅಧ್ಯಕ್ಷರ ಬೆದರಿಕೆ ಹೇಳಿಕೆಯನ್ನು ಚುನಾವನಾ ಆಯುಕ್ತರು ಗಮನಿಸಿ ಜೆ.ಪಿ. ನಡ್ಡಾ ರವರ ವಿರುದ್ದ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಹಾಗೂ  ರಾಷ್ಟ್ರೀಯ ಅಧ್ಯಕ್ಷರು ಸಂವಿಧಾನಾತ್ಮಕವಾಗಿ ಹೊಂದಿರುವ ರಾಜ್ಯಸಭಾ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ದೂರಿನಲ್ಲಿ ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!