ದಾವಣಗೆರೆ: ಜಗಳೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ಎಸ್.ವಿ. ರಾಮಾಚಂದ್ರಪ್ಪ ಅವರಿಗೆ ಪ್ರಚಾರದ ವೇಳೆ ತಾಲೂಕಿನ ಚಿಕ್ಕ ಬನ್ನಿಹಟ್ಟಿ ಗ್ರಾಮದಲ್ಲಿ ಗ್ರಾಮಸ್ಥರು ತರಾಟೆಗೆ ತೆಗೆದು ಕೊಂಡ ಪ್ರಸಂಗ ಜರುಗಿದೆ.
ತಾಲೂಕಿನಲ್ಲಿ ಕರೆಗಳಿಗೆ ನೀರು ತುಂಬಿಸುವ ಯೋಜನೆ , ಮನೆ ಕೊಡುವೆ ಎಂದು ಭರವಸೆ ನೀಡಿದ್ರಿ ಆದರೆ ಗ್ರಾಮಾಗಳಲ್ಲಿ ನೀರು ಕೊಟ್ಟಿಲ್ಲಾ , ಮನೆಗಳು ಕೊಟ್ಟಿಲ್ಲಾ , ಬಸ್ ಸೌಲಭ್ಯಗಳಿಲ್ಲಾ ,ಮೂಲಭೂತ ಸೌಕರ್ಯಗಳಿಲ್ಲ ಚುನಾವಣೆಯಲ್ಲಿ ಗೆದ್ದ ನಂತರ ಒಂದು ಬಾರಿಯು ಕೂಡ ಗ್ರಾಮಗಳಿಗೆ ಬೇಟೆ ನೀಡಿಲ್ಲಾ ಇಲ್ಲಿಯ ಗ್ರಾಮಸ್ಥರ ಸಮಸ್ಯೆಗಳನ್ನು ಕೇಳೊಕ್ಕೆ ಬಂದಿಲ್ಲ, ಈಗ ಯಾಕೆ ಮತ ಕೆಳಲು ಬಂದಿದ್ದಿರಿ ಎಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
