ದಾವಣಗೆರೆ :ಮೇ 7 ಭಾನುವಾರ ಮೈಸೂರು ಜಿಲ್ಲೆಯ ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿಗಳು ಹಾಗೂ ಕುರುಬ ಸಮಾಜದ ರಾಜ್ಯ ನಾಯಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರು ಅತಿ ಹೆಚ್ಚು ಬಹುಮತಗಳಿಂದ ಗೆದ್ದು ಬರಲಿ ಹಾಗೂ ಮತ್ತೊಮ್ಮೆ ಮುಖ್ಯಮಂತ್ರಿಗಳಾಗಲಿ ಎಂದು ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾದ ಸನ್ಮಾನ್ಯ ಶ್ರೀ ಡಾ.ಶಾಮನೂರು ಶಿವಶಂಕರಪ್ಪನವರು ಹಾಗೂ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾದ ಎಸ್ ಎಸ್ ಮಲ್ಲಿಕಾರ್ಜುನ್ ರವರು ಹಾಗೂ ಹರಿಹರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾದ ನಂದಿಗಾವಿ ಶ್ರೀನಿವಾಸ್ ರವರು, ರಾಜ್ಯದ ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳು ಈ ಬಾರಿ ಅತ್ಯಂತ ಬಹುಮತಗಳಿಂದ ಗೆದ್ದು ಕಾಂಗ್ರೆಸ್ ಅಧಿಕಾರ ಬರಲಿ ಎಂದು ಕುರುಬ ಸಮಾಜ ವತಿಯಿಂದ ನಾಳೆ ಬೆಳಗ್ಗೆ 8-30 ಕೆ ದಾವಣಗೆರೆ ನಗರದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ (ಹೈಸ್ಕೂಲ್ ಮೈದಾನ ) ವಿಶೇಷ ಪೂಜೆ, ಅಭಿಷೇಕ, ಹಮ್ಮಿಕೊಳ್ಳಲಾಗಿದೆ ಆದಕಾರಣ , ಪಕ್ಷದ ಮುಖಂಡರು ಕಾರ್ಯಕರ್ತರು, ಮಹಾನಗರ ಪಾಲಿಕೆ ಸದಸ್ಯರು, ಎಸ್ ಎಸ್ ಎಮ್ ಹಾಗೂ ಎಸ್ ಎಸ್ ಅಭಿಮಾನಿಗಳು ಕುರುಬ ಸಮಾಜ ಬಾಂಧವರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮನವಿ ಸಮಾಜದ ಮುಖಂಡರಾದ ಅಡನಿ ಸಿದ್ದಪ್ಪ, ಫುಟ್ಬಾಲ್ ಗಿರೀಶ್, ಕೆ ರೇವಣಸಿದ್ದಪ್ಪ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ. ಮನು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
