ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಜಾಹ್ನವಿಗೆ ಪ್ರಥಮ ಸ್ಥಾನ

ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಜಾಹ್ನವಿಗೆ ಪ್ರಥಮ ಸ್ಥಾನ

ದಾವಣಗೆರೆ: ಬೆಂಗಳೂರಿನ ಸೆಂಟ್ರಲ್ ಸ್ಕೂಲ್ ನಲ್ಲಿ ಆಯೋಜಿಸಿದ್ದ ಕರಾಟೆ ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಕರ್ನಾಟಕದಿಂದ ಸ್ಪರ್ಧಿಸಿದ್ದ ಜಾಹ್ನವಿ ತನ್ನ ಮೊದಲ ಪ್ರಯತ್ನದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾಳೆ. ಈ ಮೂಲಕ ಮಲೇಶಿಯಾದಲ್ಲಿ ಮುಂಬರುವ ಟೂರ್ನಮೆಂಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾಳೆ.


ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸವಳಂಗ ಗ್ರಾಮದ ದಿವಂಗತ ಲಕ್ಕವಳ್ಳಿ ಈಶ್ವರಪ್ಪರವರ ಮೊಮ್ಮಗಳಾದ ಜಾಹ್ನವಿ (15) ಇವರು ಅಜ್ಜನ ಆಸರೆಯಲ್ಲಿ ಹಾಗೂ ಮಾವನ ಆರೈಕೆಯಲ್ಲಿ ಬೆಳೆದು, ಅಮ್ಮನ ಮಾರ್ಗದರ್ಶನದಲ್ಲಿ ಅಜ್ಜಿಯ ಕನಸು ಪೂರೈಸುತ್ತಿದ್ದಾಳೆ.


ದೇವನಹಳ್ಳಿ ತಾಲ್ಲೂಕು ಕಿತ್ತೂರು ರಾಣಿ ಚೆನ್ನಮ್ಮ ಬಾಲೆಪುರ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಜಾಹ್ನವಿ ಚಿಕ್ಕ ವಯಸ್ಸಿನಿಂದಲೇ ಕರಾಟೆ ಅಭ್ಯಾಸ ಮಾಡಿಕೊಂಡು ಬಂದಿದ್ದು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾಳೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!