kabaddi; ಸರ್ಕಾರಿ ಕಾಲೇಜು ಕಬಡ್ಡಿ ತಂಡಕ್ಕೆ ತೃತೀಯ ಸ್ಥಾನ
![kabaddi](https://garudavoice.com/wp-content/uploads/2023/10/kabaddi.jpg)
ದಾವಣಗೆರೆ, ಅ.28: 2023-24ನೇ ಸಾಲಿನ ದಾವಣಗೆರೆ ವಿಶ್ವವಿದ್ಯಾಲಯ ಕಬಡ್ಡಿ (kabaddi) ಅಂತರ ಕಾಲೇಜು ಕ್ರೀಡಾಕೂಟದಲ್ಲಿ ಸರ್ಕಾರಿ ಕಾಲೇಜಿನ ಪುರುಷರ ಕಬ್ಬಡ್ಡಿ ತಂಡ ತೃತೀಯ ಸ್ಥಾನ ಗಳಿಸಿದೆ.
ಅ.26 ಮತ್ತು 27 ಎರಡು ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾವಣಗೆರೆ ಪುರುಷ ಭಾಗವಹಿಸಿ ಪ್ರಶಸ್ತಿ ಗೆದ್ದುಕೊಂಡಿದೆ.
Ph.d; ಐ.ಎಂ ನಂದೀಶಗೆ ಪಿ.ಹೆಚ್.ಡಿ ಪದವಿ
ತಂಡದಲ್ಲಿ ಸೂರಜ್ ಎಸ್ ಇರಾನಿ ತಂಡದ ನಾಯಕ ಮನೋಜ್ ಕುಮಾರ ಬೆಸ್ಟ್ ರೈಡರ ಪ್ರಶಸ್ತಿ, ಸಂತೋಷ ಎಚ್, ಗೋಪಿ ಆರ್ ಮಜಮುಲ್ಲಾ, ಚಂದ್ರನಾಯಕ್, ದರ್ಶನ್, ಗೋಣಿಬಸಪ್ಪ, ನಾಗರಾಜ್, ಮಾರುತಿ, ನಂದೀಶ, ಸಲ್ಮಾನ್ ಖಾನ್ ಭಾಗವಹಿಸಿ ಕಾಲೇಜಿಗೆ ದೈಹಿಕ ಶಿಕ್ಷಣ ವಿಭಾಗಕ್ಕೆ ಕೀರ್ತಿಯನ್ನು ತಂದಿದ್ದಾರೆ.
ವಿಜೇತ ತಂಡಕ್ಕೆ ಪ್ರಾಂಶುಪಾಲರಾದ ಡಾ. ದಾದಾಪೀರ್, ದೈಹಿಕ ಶಿಕ್ಷಣ ನಿರ್ದೇಶಕ ಡಾ. ರೇಖಾ ಎಂ ಆರ್, ತ್ರಾಂತಿಕತ ವ್ಯವಸ್ಥಾಪಕಿ ಗೀತಾದೇವಿ ಹಾಗೂ ಕಾಲೇಜಿನ ಕ್ರೀಡಾ ವಿಭಾಗದ ಸದಸ್ಯರಾದ ವೆಂಕಟೇಶ್ ಬಾಬು, ಮಂಜುನಾಥ ಜೇ ಎಂ ಹಾಗೂ ಎಲ್ಲಾ ಸದಸ್ಯರು ಅಭಿನಂದನೆಯನ್ನು ಸಲ್ಲಿಸಿದ್ದಾರೆ