ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘ: ದಾವಣಗೆರೆ ಜಿಲ್ಲಾಧ್ಯಕ್ಷರಾಗಿ ವಿನಾಯಕ ಎಂ ಜಿ ಆಯ್ಕೆ
ದಾವಣಗೆರೆ : ಜಿಲ್ಲಾ ಗ್ರಾಮಲೆಕ್ಕಾಧಿಕಾರಿಗಳ ಸಂಘದ ನೂತನ ಜಿಲ್ಲಾಧ್ಯಕ್ಷರ ಆಯ್ಕೆ ಸಂಬಧವಾಗಿ ದಿನಾಂಕ 8-9-2021 ರ ಬುಧವಾರದಂದು
ನಡೆದ ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ ಸಭೆಯಲ್ಲಿ ನೂತನ ಜಿಲ್ಲಾಧ್ಯಕ್ಷರಾಗಿ ಜಗಳೂರು ತಾಲ್ಲೂಕಿನ ವಿನಾಯಕ ಎಂ ಜಿ ಇವರು ಸರ್ವ ಸದಸ್ಯರ ಸರ್ವನೂಮತದಿಂದ ಅವಿರೋಧವಾಗಿ ಆಯ್ಕೆಯಾದರು.
ಸಭೆಯ ಅಧ್ಯಕ್ಷತೆಯನ್ನು ನಿಕಟಪೂರ್ವ ಅಧ್ಯಕ್ಷರಾದ ಲೋಹಿತ್ ಎ ಎಂ ಇವರು ವಹಿಸಿದ್ದರು. ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ವಿನಾಯಕ ಇವರು ಇಲಾಖೆಯ ಸಹೊದ್ಯೋಗಿಗಳ ಹಿತ ಕಾಪಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸದಾ ನೌಕರರ ಧ್ವನಿಯಾಗಿರುತ್ತೇನೆ ಎಂದರು. ಗೌರವಾಧ್ಯಕ್ಷರಾದ ದುರುಗೇಶ್ ಬದ್ದಿ ಇವರು ಸಂಘಟನೆಗಾಗಿ ಹಗಲಿರುಳೆನ್ನದೆ ಶ್ರಮಿಸಬೇಕು ಎಲ್ಲ ನೌಕರರ ಹಿತ ಕಾಪಾಡಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಆರ್ ಪಿ ನಾಗರಾಜ್ ತಾಲ್ಲೂಕು ಅಧ್ಯಕ್ಷರುಗಳು ಕಾರ್ಯದರ್ಶಿಗಳಾದ ದಾವಣಗೆರೆ ತಾಲ್ಲೂಕಿನ ಅಂಜಿನಪ್ಪ, ಜಿ ಬಿ ಬಸವರಾಜ ನ್ಯಾಮತಿ ತಾಲ್ಲೂಕಿನ ರಾಘವೇಂದ್ರ, ಗಣೇಶ್ ಕೆ ಜಿ, ಹೊನ್ನಾಳಿ ತಾಲ್ಲೂಕಿನ ಬಸವರಾಜ ಹಾಗೂ ಅಶೋಕ ನಾಯ್ಕ. ಜಗಳೂರು ತಾಲ್ಲೂಕಿನ ಅನಂತ್ ಕುಮಾರ್, ನವೀನ್ ಜಿ ಯು ಹಾಗೂ ವಿವಿಧ ತಾಲ್ಲೂಕಿನ ಪದಾಧಿಕಾರಿಗಳು ಗ್ರಾಮ ಲೆಕ್ಕಾಧಿಗಳು ಉಪಸ್ಥಿತರಿದ್ದರು.