ಹೊನ್ನಾಳಿ ಇನ್ಸಪೆಕ್ಟರ್ ದೇವರಾಜ್ ಪುತ್ರಿಯ ಅರ್ಥಪೂರ್ಣವಾಗಿ ಹೀರೆಮಠದಲ್ಲಿ ಜನ್ಮದಿನಾಚರಣೆ

ಹೊನ್ನಾಳಿ:  ಸ್ಥಳೀಯ ಹಿರೇಕಲ್ಮಠದ ಶ್ರೀಗಳಾದ ಡಾ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಹೊನ್ನಾಳಿಯ ಪೋಲಿಸ್ ಠಾಣೆಯ ದಕ್ಷ ಅಧಿಕಾರಿ ಸಿಪಿಐ ದೇವರಾಜ್ ಕೊರೋನಾ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ಪೋಲಿಸ್ ಇಲಾಖೆಯಲ್ಲಿ ಅತ್ಯುತ್ತಮ ಕೆಲಸವನ್ನು ಮಾಡಿ ಕೊರೋನಾ ಸಂತ್ರಸ್ಥರಿಗೂ ಹಾಗೂ ಸಾರ್ವಜನಿಕರಿಗೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಲಾಕ್ ಡೌನ್ ಕೊರೋನಾ ಸಂದರ್ಭದಲ್ಲಿ ಪ್ರಾರಂಭದ ಹಂತದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ  ಸೋಂಕಿತರು  ಇಲ್ಲದೆ ನರಳಾಡುತ್ತಿರುವ ಸಂದರ್ಭದಲ್ಲಿ ಹಗಲು ರಾತ್ರಿ ಎನ್ನದೆ ಪೊಲೀಸ್ ಅಧಿಕಾರಿಗಳೊಂದಿಗೆ ತಾವು ಸಹ ಆಕ್ಸಿಜನ್ ಘಟಕಕ್ಕೆ ಹೋಗಿ ರೋಗಿಗಳಿಗೆ ಆಕ್ಸಿಜನ್ ತಂದುಕೊಡುವ ಮೂಲಕ ಸೋಂಕಿತರಿಗೆ ಆಕ್ಸಿಜನ್ ಸಮಯಕ್ಕೆ ತಂದು ಒದಗಿಸಿದ್ದಾರೆ ಪೋಲಿಸ್ ಅಧಿಕಾರಿಗಳು ಇಲ್ಲದೇ ಹೋದಲ್ಲಿ ಸೋಂಕಿತರು ಸಾವು ಬದುಕಿನ ಮಧ್ಯೆ ಹೋರಾಡಬೇಕಿತ್ತು ಇಂತಹ ಸಂದರ್ಭದಲ್ಲಿ ಸಿಪಿಐ  ದೇವರಾಜ್ ಮತ್ತು ಅವರ ತಂಡ ಅತ್ಯುತ್ತಮ ಕೆಲಸವನ್ನು ಮಾಡಿದೆ.

ಇದರ ಮಧ್ಯೆ ತಮ್ಮ ಪುತ್ರಿಯ ಪೂರ್ವಿಯ  11ನೇ ವರ್ಷದ ಹುಟ್ಟುಹಬ್ಬವನ್ನು ಕುಟುಂಬದ ಸದಸ್ಯರೊಂದಿಗೆ ವಿಭಿನ್ನ ರೀತಿಯಲ್ಲಿ ಆಚರಿಸಿದರು. ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಯೋಗಕ್ಷೇಮ ಅವರೊಟ್ಟಿಗೆ ಇದ್ದು  ಅಂತ್ಯಸಂಸ್ಕಾರ ದಲ್ಲಿ   ಸಹಕಾರಿಯಾಗಿದ್ದರು.ಈ ವೇಳೆ  ಮಂಜು ಪೈಲ್ವಾನ್. ಚೆನ್ನೇಶ. ಹರೀಶ್. ಮಂಜು ಜೆಸಿಪಿ. ಹನುಮಂತ. ಶ್ರೀಧರ್ ಇಂತಹ ಕೊರೋನಾ ವಾರಿಯರ್ಸ್ ಗಳಿಗೆ ತಮ್ಮ ಪುತ್ರಿಯ ಹುಟ್ಟುಹಬ್ಬದ ನೆನಪಿಗೆ ಆಹಾರ ಕಿಟ್ನ್ನು ನೀಡಿದರು.ಈ ಸಂದರ್ಭದಲ್ಲಿ ಪಿಎಸ್ ಐ ಬಸವರಾಜ್ ಬೀರದರ್.ಪೊಲೀಸ್ ಸಿಬ್ಬಂದಿ  ವೆಂಕಟೇಶ್. ಹರೀಶ್.ಹೊಸಕೇರಿ ಸುರೇಶ್.ಮಠದ ಮೇಲ್ವಿಚಾರಕರಾದ ಎಂಪಿಎಂ ಚನ್ನಬಸಯ್ಯ ಮತ್ತು  ಹಾಲಸ್ವಾಮಿ  ಮುಂತಾದವರಿದ್ದರು.

Leave a Reply

Your email address will not be published. Required fields are marked *

error: Content is protected !!