ಲೋಕಸಭಾ ಚುನಾವಣೆ ನಾಲ್ಕನೇ ದಿನ, 6 ನಾಮಪತ್ರಗಳ ಸಲ್ಲಿಕೆಯೊಂದಿಗೆ 24 ಕ್ಕೆ ಏರಿಕೆ

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಮತದಾನ ನಡೆಯಲಿದ್ದು ನಾಮಪತ್ರ ಸಲ್ಲಿಕೆಗೆ ನಾಲ್ಕನೇ ದಿನವಾದ ಏಪ್ರಿಲ್ 17 ರಂದು 6 ಅಭ್ಯರ್ಥಿಗಳಿಂದ 6 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.


ನಾಮಪತ್ರ ಸಲ್ಲಿಸಿದವರ ವಿವರ; ಕಂಟ್ರಿ ಸಿಟಿಜನ್ ಪಾರ್ಟಿಯಿಂದ ಎ.ಟಿ.ದಾದಾ ಖಲಂದರ್, ನವಭಾರತ ಸೇನಾ ಪಕ್ಷದಿಂದ ಎಂ.ಜಿ.ಶ್ರೀಕಾಂತ್, ಪಕ್ಷೇತರರಾಗಿ ಮೊಹಮದ್ ಅಯಾತ್, ಎಂ.ಟಿ.ಚಂದ್ರಣ್ಣ, ಜಿ.ಬಿ.ವಿನಯ್‍ಕುಮಾರ್ ನಾಮಪತ್ರ ಸಲ್ಲಿದ್ದು ಇದುವರೆಗೆ ಒಟ್ಟು 20 ಅಭ್ಯರ್ಥಿಗಳಿಂದ 24 ನಾಮಪತ್ರಗಳು ಸಲ್ಲಿಕೆಯಾಗಿದೆ.


ಏ.12 ರಂದು ಐದು ಅಭ್ಯರ್ಥಿಗಳಿಂದ 6 ನಾಮಪತ್ರಗಳು, ಏ.15 ರಂದು 8 ಅಭ್ಯರ್ಥಿಗಳಿಂದ 9 ನಾಮಪತ್ರಗಳು ಹಾಗೂ ಏ.16 ರಂದು 3 ಅಭ್ಯರ್ಥಿಗಳಿಂದ 3 ನಾಮಪತ್ರಗಳು, ಏ.17 ರಂದು 6 ಅಭ್ಯರ್ಥಿಗಳಿಂದ 6 ನಾಮಪತ್ರ ಸಲ್ಲಿಕೆಯಾಗಿವೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!