ಅಮಾನತು ಆಗದಂತೆ ಸ್ಟೇ ತಂದಿದ್ದ ದಾವಣಗೆರೆ ಅಬಕಾರಿ ಅಧಿಕಾರಿಗಳ ಅರ್ಜಿ ವಜಾಗೊಳಿಸಿದ ಕೋರ್ಟ್

ದಾವಣಗೆರೆ: ಅಬಕಾರಿ ಲೈಸೆನ್ಸ್‌ ನೀಡಲು ಲಂಚ ಪಡೆಯುವಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದು ಅಮಾನತು ಆಗದಂತೆ ಕೆಎಟಿಗೆ ಹೋಗಿ ಸ್ಟೇ ತಂದಿದ್ದ ಅಬಕಾರಿ ಅಧಿಕಾರಿಗಳಿಗೆ ಸೋಲಾಗಿದೆ. ಆದರೆ ಅಬಕಾರಿ ಕಮಿಷನರ್ ಇವರನ್ನು ಅಮಾನತು ಮಾಡದೆ ಇರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕೋರ್ಟ್ ನೀಡಿದ ದಾಖಲೆಗಳು ಸಿಕ್ಕಿದ್ದು, ಏ.5 ಕ್ಕೆ ಅಬಕಾರಿ ಅಧಿಕಾರಿಗಳು ನೀಡಿದ್ದ ಅರ್ಜಿಯನ್ನು ವಜಾ ಮಾಡಿದೆ. ಈ ಮೂಲಕ ಲೋಕಾಯುಕ್ತಕ್ಕೆ ಗೆಲುವು ಆಗಿದೆ.

ದಾವಣಗೆರೆ ಅಬಕಾರಿ ಡಿಸಿಯಾಗಿದ್ದ ಸ್ವಪ್ನ ಹಾಗೂ ದಾವಣಗೆರೆ ಡೆಪ್ಯೂಟಿ ಸೂಪರಿಟೆಂಡೆಂಟ್ ರವಿಕುಮಾರ್ ಮರಿಗೌಡರ್ ಹಾಗೂ ಹರಿಹರ ಅಬಕಾರಿ ಇನ್ಸ್‌ಪೆಕ್ಟರ್ ಶೀಲಾ, ಎಫ್ ಡಿಎ ಅಶೋಕ್‌ ಕೆಎಟಿಗೆ ಹೋಗಿದ್ದರು. ಆದರೆ
ಲೋಕಾಯುಕ್ತ ಸರಕಾರಕ್ಕೆ ನೀಡಿದ ಎಲ್ಲ ದಾಖಲೆಗಳು ಲಂಚಕ್ಕೆ ಬೇಡಿಕೆ ಇಟ್ಟಿರುವುದು ಸಾಬೀತಾಗಿದೆ. ಆದ್ದರಿಂದ ಜಸ್ಟೀಸ್, ಕೆಎಟಿ ಚೇರ್ ಮನ್ ಆರ್.ಬಿ.ಬೂದಿಹಾಳ್ ಈ ಅಧಿಕಾರಿಗಳಿಗೆ ನೀಡಿದ್ದ ಸ್ಟೇ ಅನ್ನು ವಾಪಸ್ ಪಡೆದುಕೊಂಡಿದೆ.

ಸ್ಟೇ ಹಿಂದಕ್ಕೆ ತೆಗೆದುಕೊಳ್ಳಲು ಕಾರಣ ಏನಿದೆ

ಈ ನಾಲ್ಕು ಅಧಿಕಾರಿಗಳು ಪೋನ್ ನಲ್ಲಿ ಮಾತನಾಡಿದ ಸಂಭಾಷಣೆ, ಹಣಕ್ಕೆ ಬೇಡಿಕೆ ಇಟ್ಟಿರುವುದು, ಪೋನ್ ಪೇ ಮಾಡಿರುವುದು ದಾಖಲೆ ಇದ್ದ ಕಾರಣ ಕೋರ್ಟ್ ಈ ಭ್ರಷ್ಟ ಅಧಿಕಾರಿಗಳಿಗೆ ನೀಡಿದ್ದ ಸ್ಟೇ ಅರ್ಜಿಯನ್ನು ಹಿಂತೆಗೆದುಕೊಂಡಿದೆ.

ಕೋರ್ಟ್ ಏನು ಹೇಳಿದೆ

ಸರಕಾರ ಅಮಾನತಿಗೆ ನೀಡಿರುವ ಆದೇಶ ಸರಿ ಇದೆ. ಎಲ್ಲ ದಾಖಲೆಗಳು ನಿಮ್ಮ ವಿರುದ್ದ ಇದೆ. ಆದ್ದರಿಂದ ಕೋರ್ಟ್ ಈ ವಿಷಯದಲ್ಲಿ ಮಧ್ಯ ಪ್ರವೇಶಿಸೋದಿಲ್ಲ‌. ಈ ಬಗ್ಗೆ ಅಬಕಾರಿ ಅಧಿಕಾರಿಗಳು ಇಲಾಖಾ ತನಿಖೆ ಹಾಜರಾಗಬೇಕು. ಅಮಾನತು ವಿಷಯದಲ್ಲಿ ನಾವು ಎಂಟ್ರಿ ಆಗೋದಿಲ್ಲ. ಆದ್ದರಿಂದ ನೀವು ನೀಡಿದ ಅರ್ಜಿ ವಜಾ ಮಾಡಿದ್ದೇವೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.


ಸದ್ಯ ಯಾರು ಎಲ್ಲಿ ಕೆಲಸ ಮಾಡುತ್ತಿದ್ದಾರೆ‌

ಅಬಕಾರಿ ಡಿಸಿಯಾಗಿದ್ದ ಸ್ವಪ್ನ ಸದ್ಯ ಹಾವೇರಿ ಅಬಕಾರಿ ಡಿಸಿಯಾಗಿದ್ದಾರೆ. ದಾವಣಗೆರೆ ಡೆಪ್ಯೂಟಿ ಸೂಪರಿಟೆಂಡೆಂಟ್ ರವಿಕುಮಾರ್ ಮರಿಗೌಡರ್ ದಾವಣಗೆರೆಯಲ್ಲಿ ಇದ್ದಾರೆ. ಹರಿಹರ ಅಬಕಾರಿ ಇನ್ಸೆಪೆಕ್ಟರ್ ಶೀಲಾ ರಾಣೆಬೆನ್ನೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಎಫ್ ಡಿಎ ಅಶೋಕ್ ಸಾಗರದ ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಆದೇಶ ಏನು ಹೇಳುತ್ತೇ

ಸರ್ಕಾರದ ಅಧಿಸೂಚನೆಯಂತೆ ಯಾವುದೇ ಅಧಿಕಾರಿಗಳು, ಸಿಬ್ಬಂದಿ ಲೋಕಾಯುಕ್ತರ ದಾಳಿಗೆ ಒಳಾಗಾಗಿ ಪ್ರಾಥಮಿಕ ತನಿಖೆಯ ನಂತರ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿ ಆರೋಪಿತರಾಗಿ ಅಮಾನತಿನಲ್ಲಿ ಇಟ್ಟ ನಂತರ ಅವರನ್ನು ಪುನರ್ ಸ್ಥಾಪಿಸುವ ಮುನ್ನ ಲೋಕಾಯುಕ್ತ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಬೇಕೆಂದು ಆದೇಶವಿದೆ. ಅಂತಹ ಅಧಿಕಾರಿಗಳು, ನೌಕರರನ್ನು ಈ ಹಿಂದೆ ಸೇವೆ ಸಲ್ಲಿಸಿದ ಹುದ್ದೆಗೆ ನೇಮಿಸತಕ್ಕದ್ದಲ್ಲ. ಅವರನ್ನು ಬೇರೆ ಯಾವುದಾದರೂ ನಾನ್ ಎಕ್ಸಿಕ್ಯುಟಿವ್ ಹುದ್ದೆಗೆ ನೇಮಿಸಬೇಕೆಂದು ಹೇಳಿದೆ. ಆದರೆ ಈ ಅಧಿಕಾರಿಗಳು ಸ್ಟೇ ತಂದು ಪುನಃ ಇದ್ದ ಜಾಗಕ್ಕೆ ಬಂದಿದ್ದರು. ಬೇರೆಡೆ ವರ್ಗಾವಣೆಯೂ ಆಗಿರಲಿಲ್ಲ.

ಅಮಾನತಿಗೆ ಆದೇಶ ಬಂದಿದ್ದರೂ, ಕೆಲಸ ಮಾಡುತ್ತಿರುವ ಅಧಿಕಾರಿಗಳು

ಸಾಮಾನ್ಯವಾಗಿ 48 ಗಂಟೆಗಳು ಜೈಲಿನಲ್ಲಿದ್ದ ಅಧಿಕಾರಿಗಳು ಸರಕಾರದ ಆದೇಶದ ಪ್ರಕಾರ ಅಮಾನತು ಗೊಳ್ಳಬೇಕು. ಆದರೆ ಈ ಅಧಿಕಾರಿಗಳು ಅಮಾನತು ಮಾಡದಂತೆ ಸ್ಟೇ ತಂದಿದ್ದರು. ಈಗ ಈ ಅರ್ಜಿ ವಜಾವಾಗಿದ್ದು, ಕನಿಷ್ಠ ಆರು ತಿಂಗಳುಗಳ ಕಾಲ‌ ಅಮಾನತು ಮಾಡಬೇಕು. ಆದರೆ ಈ ಅಧಿಕಾರಿಗಳು ಮತ್ತೆ ಆಯ ಕಟ್ಟಿನ ಹುದ್ದೆಯಲ್ಲಿಯೇ ಮುಂದುವರೆದಿದ್ದು, ಕೋರ್ಟ್ ಆದೇಶಕ್ಕೆ ಅಬಕಾರಿ ಕಮಿಷನರ್ ಬೆಲೆ ನೀಡಿಲ್ಲ ಇದರಿಂದ ಅನುಮಾನಕ್ಕೆ ಎಡೆಮಾಡಿಕೊಟ್ಟದಂತಾಗಿದೆ‌

ಏನಿದು ಘಟನೆ

ನನಗೆ ಮದ್ಯದ ಅಂಗಡಿಗೆ ಪರವಾನಗಿ ನೀಡಲು ದಾವಣಗೆರೆ ಅಬಕಾರಿ ಉಪ ಆಯುಕ್ತರು ಮತ್ತು ಅವರ ಅಧೀನದಲ್ಲಿ ಬರುವ ಇತರೆ ಅಧಿಕಾರಿಗಳು 60 ಲಕ್ಷ ಕೇಳಿದ್ದರು. ಈ ವೇಳೆ ನಾನು ಲೋಕಾಯುಕ್ತಕ್ಕೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತರ ನಿರ್ದೇಶನದಂತೆ‌ ಮುಂಗಡ ಹಣ 3ಲಕ್ಷ ರೂ.,ಗಳನ್ನು ನೀಡುವ ವೇಳೆ ಅಶೋಕ್, ಸ್ವಪ್ನ, ಜೆ.ಕೆ.ಶೀಲಾ, ಶೈಲಶ್ರೀ ಇವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಆದರೆ, ಇದೀಗ ಅವರು ಜಾಮೀನು ಪಡೆದು ಮತ್ತೆ ಅದೇ ಹುದ್ದೆಗೆ ಬಂದು ಅಧಿಕಾರ ಚಲಾವಣೆ ಮಾಡುತ್ತಿದ್ದರು. ಈಗ ಅರ್ಜಿ ವಜಾಗೊಂಡಿದ್ದರೂ ಕರ್ತವ್ಯ ಮಾಡುತ್ತಿದ್ದಾರೆ. ಇದು ಕಾನೂನು ನಿಂದನೆಯಾಗುತ್ತದೆ ಎಂದು ದೂರುದಾರ ರಘುನಾಥ್ ಹೇಳುತ್ತಾರೆ.

60ಲಕ್ಷ ರೂ.ಗೆ ಬೇಡಿಕೆ ಆರೋಪ

ಅಬಕಾರಿ ಇಲಾಖೆಯಲ್ಲಿ ದುಡ್ಡು ಕೊಟ್ಟರೆ ಮಾತ್ರ ಕೆಲಸ, ಹಣ ಕೊಡುವುದಿಲ್ಲ ಅಂತಂದ್ರೆ ನಿಮಗೆ ಯಾವುದೇ ಲೈಸೆನ್ಸ್ ಸಿಗುವುದಿಲ್ಲ. ಬಾರ್ ಲೈಸೆನ್ಸ್ ಪಡೆಯಲು ಹೋದ ವ್ಯಕ್ತಿಯೊಬ್ಬನಿಗೆ ಅಬಕಾರಿ ಡಿಸಿಯೇ 60ಲಕ್ಷಕ್ಕೆ ಈ ರೀತಿ ಬೇಡಿಕೆ ಇಡಲಾಗಿತ್ತು.

ದಾವಣಗೆರೆ ಜಿಲ್ಲೆಯ ಹರಿಹರದ ಅಮ್ಯೂಸ್ಮೆಂಟ್ ಪಾರ್ಕ್ ಮಾಲೀಕ ಡಿ ಜಿ ರಘುನಾಥ್ ಎಂಬುವರು ಬಾರ್ ಲೈಸೆನ್ಸ್ ಪಡೆಯಲು ಹೋಗಿದ್ದು, ಈ ವೇಳೆ ದಾವಣಗೆರೆ ಅಬಕಾರಿ ಡಿಸಿ ಸ್ವಪ್ನ್ ನಿಮಗೆ ಲೈಸೆನ್ಸ್ ಬೇಕಾದರೆ 60 ಲಕ್ಷ ರೂ. ಕೊಡಬೇಕು. ನಾವೇ ಎಲ್ಲವನ್ನು ಮಾಡಿಕೊಡುತ್ತೇವೆ ಎಂದು ಬೇಡಿಕೆ ಇಟ್ಟಿದ್ದಾಗಿ ರಘುನಾಥ್ ಆರೋಪ ಮಾಡಿದ್ದರು. ಆದರೆ, ಇದಕ್ಕೆ ಒಪ್ಪಿಕೊಳ್ಳದ ರಘುನಾಥ್ , ನಾನು ಹಣ ಕೊಡುತ್ತೇನೆ. ಆದ್ರೆ, ನೀವು ಹೇಳಿದಷ್ಟು ಕೊಡುವುದಿಲ್ಲ ಎಂದಿದ್ದಾರೆ. ಅದಕ್ಕೆ ಅಧಿಕಾರಿಗಳು ಒಪ್ಪಿಲ್ಲ. ಹೀಗಾಗಿ, ರಘುನಾಥ್ ಹಣ ನೀಡಲು ಒಪ್ಪಿಕೊಂಡಿದ್ದಾರೆ. ಬಳಿಕ, ಅಬಕಾರಿ ಏಜೆಂಟ್ ವೊಬ್ಬ ತಮ್ಮ ಕಚೇರಿಗೆ ರಘುನಾಥ್ ರನ್ನ ಕರೆದು ಡೀಲ್ ಕುದುರಿಸಲು ಪ್ರಯತ್ನ ಮಾಡಿದ್ಧರು. ಆಗ 40 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದು, ನಾವು ಇದರಲ್ಲಿ ಎಲ್ಲ ಅಧಿಕಾರಿಗಳಿಗೆ ನೀಡಬೇಕು ಎಂದು ಹೇಳಿರುವುದು ಕೂಡ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

ಹಣ ಪಡೆಯಲು ಬಂದಿದ್ದವರೇ ಬೇರೆ

ರಘುನಾಥ್ ಹಣ ನೀಡಲು ಒಪ್ಪಿಕೊಂಡ ಬಳಿಕ ಅಬಕಾರಿ ಇಲಾಖೆಯ ಹರಿಹರ ರೇಂಜ್ ನ ಇನ್ಸಪೆಕ್ಟರ್ ಶೀಲಾ ಮತ್ತು ಅಸಿಸ್ಟಂಟ್ ಬಾರ್ ತೆರೆಯುವ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಎಲ್ಲ ಸರಿ ಇದ್ದು, ಅರ್ಜಿ ಸಲ್ಲಿಸೋಕೆ ಹೇಳಿದ್ದಾರೆ. ಆದರೆ, ನಂತರ ಕೇಳಿದ್ದ ಹಣ ಬಂದಿಲ್ಲ ಎಂದು ತಮಗೆ ಸಮಸ್ಯೆ ಮಾಢಿದರು ಎನ್ನುವುದು ರಘುನಾಥ್ ಅವರ ದೂರಿನ ಪ್ರಮುಖಾಂಶ. ನಂತರ ದಾವಣಗೆರೆ ಡೆಪ್ಯೂಟಿ ಸುಪರಿಟೆಂಡೆಂಟ್ ರವಿಕುಮಾರ್ ಮರಿಗೌಡರ್ ನನಗೆ 7ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಅಧಿಕಾರಿಗಳ ಕಾಟದಿಂದ ಬೇಸತ್ತು ಅಕ್ಟೋಬರ್ 13 ರಂದು ಲೋಕಾಯುಕ್ತರಿಗೆ ದೂರು ನೀಡಿದ್ದೆ. ನಂತರ ಅಕ್ಟೋಬರ್ 14ರ ಮಹಾಲಯ ಅಮಾವಾಸ್ಯೆ ದಿನ ಸರ್ಕಾರಿ ರಜೆ ಇದ್ದರೂ, ಕೂಡ ಎಫ್ ಡಿಎ ಅಶೋಕ್ ಎಂಬುವರು 3 ಲಕ್ಷ ರೂ. ಹಣ ಪಡೆಯುವಾಗ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಈ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದ ಅಶೋಕ್ ನನ್ನ ವಶಕ್ಕೆ ಪಡೆದು ವಿಚಾರಿಸಿದಾಗ ಎಲ್ಲ ಅಧಿಕಾರಿಗಳ ಬಣ್ಣ ಬಯಲಾಗಿದೆ. ಬಳಿಕ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅಲ್ಲದೇ, ಇದರಲ್ಲಿ ಅಬಕಾರಿ ಇಲಾಖೆಯ ಡೆಪ್ಯೂಟಿ ಸುಪರಿಟೆಂಡೆಂಟ್ ರವಿಕುಮಾರ್ ಮರಿಗೌಡರ್, ಎಫ್ ಡಿಎ ಅಶೋಕ್, ಎಸ್ ಡಿಎ ಶೈಲಶ್ರೀ, ಹರಿಹರ ಅಬಕಾರಿ ಇನ್ಸ್‌ಪೆಕ್ಟರ್ ಶೀಲಾ, ಹಾಗೂ ದಾವಣಗೆರೆ ಉಪ ಆಯುಕ್ತೆ ಸ್ವಪ್ನ ಸೇರಿದಂತೆ ಪ್ರಕರಣ ದಾಖಲಾಗಿತ್ತು ಎನ್ನುತ್ತಾರೆ ರಘುನಾಥ್.

ಅಬಕಾರಿ ಡಿಸಿ ಹುದ್ದೆಗೆ ಯಾರನ್ನು ನೇಮಕ ಮಾಡಿರಲಿಲ್ಲ, ಅದೇ ಹುದ್ದೆಗೆ ಬಂದಿದ್ದರು ಸ್ವಪ್ನ

ಈ ಅಬಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿಯಾಗಿ ಅಧಿಕಾರಿಗಳು ಅಮಾನತು ಆದ ದಿನವಾದ 15-10-2023 ರಿಂದ 7-11-2023 ರವರೆಗೆ ದಾವಣಗೆರೆ ಅಬಕಾರಿ ಉಪ ಆಯುಕ್ತರ ಹುದ್ದೆಗೆ ಯಾರನ್ನೂ ನೇಮಕ ಮಾಡಿರಲಿಲ್ಲ. ಬಳಿಕ ಅದೇ ಹುದ್ದೆಗೆ ಡಿಸಿ ಸ್ವಪ್ನ ಬಂದು ಅಧಿಕಾರಿವಹಿಸಿಕೊಂಡಿದ್ದರು. ಇದು ಕೂಡ ನಾನಾ ಅನುಮಾನಕ್ಕೆ ಕಾರಣವಾಗಿತ್ತು.

ಸನ್ನದುದಾರರಿಗೆ ತೊಂದರೆ , ಸ್ವಚ್ಛ ಅಧಿಕಾರಿಗಳನ್ನು ನೇಮಿಸಿ

ಎಲ್ಲಾ ಸನ್ನದುದಾರರು ಇವರ ಕಿರುಕುಳಕ್ಕೆ ಬೇಸತ್ತಿದ್ದಾರೆ.ಹರಿಹರದಲ್ಲಿ ಎಷ್ಟೋ ಸನ್ನದುದಾರರು ಇವರಿಂದ ಸಾಲ ಮಾಡಿಕೊಂಡು ಊರು ಬಿಟ್ಟುಹೊಗಿದ್ದಾರೆ. ಈ ಕೂಡಲೇ ಹರಿಹರದ ಅಬಕಾರಿ ಇಲಾಖೆಗೆ ಸರ್ಕಾರ ಸ್ವಚ್ಚ ಅಧಿಕಾರಿಗಳನ್ನು ಹಾಕಬೇಕು.
ಭ್ರಷ್ಟಾಚಾರ ನಡೆಸುವ ಅಧಿಕಾರಿಗಳನ್ನು ತೆಗೆಯಬೇಕು.ಭ್ರಷ್ಟಾಚಾರ ನಡೆಸಿದವರನ್ನು ಹಾಕಿದರೆ ಸರ್ಕಾರ ಸರಿಯಿಲ್ಲ ಎಂದು ಸಾಬೀತಾಗುತ್ತದೆ. ಈ ಅಧಿಕಾರಿಗಳೇ ನಾವು ದುಡ್ಡು ಖರ್ಚು ಮಾಡಿಕೊಂಡೇ ಇಲ್ಲಿಗೆ ಬಂದಿದ್ದೇವೆ ಎಂದು ಯಾವುದೇ ಭಯವಿಲ್ಲದೇ ಹೇಳುತ್ತಾರೆ. ನಮ್ಮ ಪರಿಸ್ಥಿತಿ ಹೇಗಿದೆ ಎಂದರೆ ಜೈಲಿಗೆ ಹೋಗಿಬಂದವರಿಗೆ ಕೈ ಮುಗಿದು ನಮ್ಮ ಕೆಲಸ ಮಾಡಿಕೊಡಿ ಎನ್ನುವ ಸ್ಥಿತಿ ಬಂದಿದೆ.

ಸರ್ಕಾರ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಇದೆ ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋದ ಅಧಿಕಾರಿಗಳು ಮರಳಿ ತಮ್ಮ ಸ್ಥಾನದಲ್ಲಿ ಮುಂದುವರೆಯುವಂತಿಲ್ಲ ಎಂದು. ಇದು ಸರ್ಕಾರದ ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆ ಭ್ರಷ್ಟಾಚಾರ ಮುಕ್ತ ಸರಕಾರ ಎಂದು ಹೇಳುವ ರಾಜಕಾರಣಿಗಳು ಇಲ್ಲಿ ಎಡವಿದ್ದೇಕೇ ಎಂಬ ಪ್ರಶ್ನೆ ಎದ್ದಿದೆ. ಈಗಾಲಾದರೂ ಈ ಅಧಿಕಾರಿಗಳು ಅಮಾನತುಗೊಳ್ಳುತ್ತಾರೆಯೇ ಎಂದು ಕಾದು ನೋಡಬೇಕು.
….

ಕೋಟ್ 1

ನಾಲ್ಕು ಅಧಿಕಾರಿಗಳು ಅಮಾನತು ಮಾಡದಂತೆ ಸ್ಟೇ ತಂದಿದ್ದರು. ಆದರೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೆಎಟಿ ಅರ್ಜಿಯನ್ನು ತಿರಸ್ಕಾರ ಮಾಡಿದೆ. ಕೋರ್ಟ್ ಆದೇಶ ನೀಡಿದ್ದರೂ, ಈ ಅಧಿಕಾರಿಗಳು ಆಯಕಟ್ಟಿನ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾರೆ.ಈಗಾಗಲೇ ಅವರ ಕೈಯಲ್ಲಿ ಅಮಾನತು ಮಾಡಿರುವ ಕಾಫಿ ಇದೆ. ಕೋರ್ಟ್ ಅರ್ಜಿ ತೆರವು ಮಾಡಿರುವ ಕಾರಣ ಅವರು ಕೆಲಸಕ್ಕೆ ಬರುವಂತಿಲ್ಲ.

-ರಘುನಾಥ್, ಲೋಕಾಯುಕ್ತಕ್ಕೆ ದೂರುಕೊಟ್ಟವರು.
….

ಕೋಟ್ 2

ಈ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸರಕಾರದಿಂದ ಯಾವುದೇ ಆದೇಶ ಬಂದಿಲ್ಲ. ಸರಕಾರ ಮಟ್ಟದಲ್ಲಿ ಇದು ನಡೆಯುತ್ತದೆ. ಕೋರ್ಟ್ ಕಾಫಿ ಕೂಡ ಸಿಕ್ಕಿಲ್ಲ.
-ಅಶ್ವಿನಿ, ಜಾಯಿಂಟ್ ಕಮಿಷನರ್

Leave a Reply

Your email address will not be published. Required fields are marked *

error: Content is protected !!