ಹರಿಹರದಲ್ಲಿ ಬೃಹತ್ ಪಕ್ಷಾಂತರ ಹಾವು ಏಣಿ ಆಟ.! ಶಾಸಕರ ಆಪ್ತರ ಆಟಕ್ಕೆ ಮುನಿಸಿಕೊಂಡ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು
ದಾವಣಗೆರೆ: ಇಂದು ಹರಿಹರದ ಡಿ ಜೆ ಆರ್ ಪಾರ್ಕ್ ನಲ್ಲಿ ನಡೆದ ರಜನಿಕಾಂತ್ ನಗರಸಭೆ ಸದಸ್ಯರು ಮತ್ತು ಎಬಿಎಂ ವಿಜಯ್ ನಗರಸಭೆ ಸದಸ್ಯರು, ಮುಜಾಮಿಲ್ ಬಿಲ್ಲು ಜೆಡಿಎಸ್ ಸದಸ್ಯರು, ಆನಂದ್ ಕುಮಾರ್ ವಕೀಲರು ಬಿಜೆಪಿ ಮುಖಂಡರು, ಕೊಂಡಜ್ಜಿ ರಾಘವೇಂದ್ರ, ಬಿಜೆಪಿ ಮುಖಂಡರು ಜುಬೇರ್ ಜೆಡಿಎಸ್ ಮುಖಂಡರು, ಪ್ರವೀಣ್ ಕುಮಾರ್ ಬಿಜೆಪಿ ಮುಖಂಡರು, ಹನುಮಂತ ಪೈಲ್ವಾನ್ ಜೆಡಿಎಸ್ ಮುಖಂಡರು, ಗರಡಿಮನೆ ಬಸಣ್ಣ ಗುತ್ತೂರು ಬಿಜೆಪಿ ಮುಖಂಡರು, ವರಪುರುಷ ಜೆಡಿಎಸ್ ಮುಖಂಡರು, ರಘು ಜೆಡಿಎಸ್ ಮುಖಂಡರು, ಭರಮಪ್ಪ ಬಿ ಎಂ ಜೆಡಿಎಸ್ ಮುಖಂಡರು, ಅವರು ಸನ್ಮಾನ ಶ್ರೀ ಎಸ್ ಎಸ್ ಮಲ್ಲಿಕಾರ್ಜುನ್ ಹಾಗೂ ನಂದಿಗಾವಿ ಶ್ರೀನಿವಾಸ್ ಅವರ ಸಮ್ಮುಖದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ವಾಗೀಶ್ ಸ್ವಾಮಿ ಕಾಂಗ್ರೆಸ್ ಮುಖಂಡರು ಹಾಗೂ ಹಿರಿಯಗಣ್ಯ ವ್ಯಕ್ತಿಗಳು ಕಾಂಗ್ರೆಸ್ ಮುಖಂಡರು ಮತ್ತು ನಗರಸಭೆ ಮತ್ತು ಪುರಸಭೆ ಸದಸ್ಯರು ಉಪಸ್ಥಿತರಿದ್ದರು.