ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಆಸ್ತಿ ಎಷ್ಟಿದೆ ಗೊತ್ತು!?
ದಾವಣಗೆರೆ : ಕಾಂಗ್ರೆಸ್ ಅಭ್ಯರ್ಥಿ ಹೆಸರಿನಲ್ಲಿ ಯಾವುದೇ ಆಸ್ತಿ ಇಲ್ಲಿದೆ ಇದ್ದರೂ ಅವರು ಸಲ್ಲಿಸಿರುವ ಅಫಿಡೆವಿಟ್ ನಲ್ಲಿ 44.43 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.
ಪ್ರಭಾ ಮಲ್ಲಿಕಾರ್ಜುನ್ ಗಣಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪತ್ನಿ ಆಗಿದ್ದು, ತಮ್ಮ ಬಳಿ ಒಟ್ಟು 97.28 ಲಕ್ಷ ಸಾಲ ಇರುವುದಾಗಿ ಹೇಳಿದ್ದಾರೆ.
ಅವರ ಬಳಿ 67,566 ರೂಪಾಯಿ ನಗದು, ವಿವಿಧ ಬ್ಯಾಂಕ್‌ಗಳಲ್ಲಿ 13,76,105 ಠೇವಣಿ ಹೊಂದಿದ್ದಾರೆ. ಷೇರು, ಡಿಬೆಂಚರ್ ಇತರೆಡೆ 2,65,20,500 ರೂಪಾಯಿ ಬಂಡವಾಳ ಹೂಡಿದ್ದಾರೆ.
1.80 ಕೋಟಿ ರೂಪಾಯಿ ಬೆಲೆಬಾಳುವ 3.189.528 ಗ್ರಾಂ ಚಿನ್ನ, ಇತರೆ 5.976 ಇತರೆ ಗ್ರಾಂ ಆಭರಣಗಳಿವೆ. ಬೆಳ್ಳಿಯ ಆಭರಣ ಇಲ್ಲ. 10,23,009 ರೂಪಾಯಿ ಮೌಲ್ಯದ ಇತರೆ ಆಸ್ತಿಗಳು ಇವರ ಹೆಸರಲ್ಲಿವೆ. 1.54 ಕೋಟಿ ಮೌಲ್ಯದ 47.11 ಎಕರೆ ಕೃಷಿ ಭೂಮಿ ಇದೆ. 16.1 ಲಕ್ಷ ಮೌಲ್ಯದ 11,050 ಚದರ ಅಡಿಯಷ್ಟು ಕೃಷಿಯೇತರ ಭೂಮಿ ಇದೆ. 21.4 ಲಕ್ಷ ಮೌಲ್ಯದ 34,483 ಚದರ ಅಡಿ ಮನೆಯ ಜತೆಗೆ 2500 ಚದರಡಿ ಬಿಲ್ಡ್ ಏರಿಯಾ ಇದೆ. ವೈಯಕ್ತಿಕವಾಗಿ ಯಾವುದೇ ಆಸ್ತಿ ಇಲ್ಲ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
ಇನ್ನು ಪತಿ ಎಸ್.ಎಸ್. ಮಲ್ಲಿಕಾರ್ಜುನ್ ಬಳಿ 194.88 ಕೋಟಿ ರೂ. ಮೌಲ್ಯದ ಆಸ್ತಿಗೆ ಮಾಲೀಕರಾಗಿದ್ದಾರೆ. ಪುತ್ರ ಸಮರ್ಥ ಮಲ್ಲಿಕಾರ್ಜುನ್ 34.70 ಲಕ್ಷ ರೂ.ಗಳ ಚರಾಸ್ತಿ ಹೊಂದಿದ್ದಾರೆ.
2019-20 ರಲ್ಲಿ 6,48,080, 2020-21ರಲ್ಲಿ 7,18,300, 2021-22 ರಲ್ಲಿ7,18,300, 2021-22 ರಲ್ಲಿ8,40,600 ರೂಪಾಯಿ ಆದಾಯ ತೆರಿಗೆ ಘೋಷಣೆ ಮಾಡಿದ್ದಾರೆ. ಒಟ್ಟು 44,53,14,286 ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರಾಸ್ತಿಯ ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ಬಂಡಾಯದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಆಸ್ತಿ ವಿವರ:ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜಿ.ಬಿ.ವಿನಯ್ ಕುಮಾರ್ ಆಸ್ತಿ ಮೌಲ್ಯ 56.21 ಕೋಟಿ ರೂ. ಎಂದು ನಾಮಪತ್ರದ ವೇಳೆ ನೀಡಿರುವ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
2022-23ರ ಸಾಲಿನಲ್ಲಿ ಪಡೆದ ಒಟ್ಟು ಆದಾಯ 4.14 ಕೋಟಿ ರೂ ಇತ್ತು. ಒಟ್ಟು ಚರಾಸ್ತಿ ಮೌಲ್ಯ 9.07 ಕೋಟಿ ರೂ. ಇದ್ದು, ಸ್ಥಿರಾಸ್ತಿ ಮೌಲ್ಯ 47.14 ಕೋಟಿ ರೂ. ಇದೆ. 1.75 ಲಕ್ಷ ರೂಪಾಯಿ ನಗದು ಕೈಯಲ್ಲಿದೆ. 4.20 ಕೋಟಿ ರೂಪಾಯಿ ಬ್ಯಾಂಕ್ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಠೇವಣಿ ಇರಿಸಲಾಗಿದೆ.
ಬಾಂಡ್‌ಗಳ ಮೇಲಿನ ಹೂಡಿಕೆ 40.97 ಲಕ್ಷ ರೂಪಾಯಿ ಇದ್ದು, ಹೂಡಿಕೆಗಳು 4.43 ಕೋಟಿ ರೂ ಇವೆ. 92.50 ಎಕರೆ ಜಮೀನಿದೆ. ಇದರ ಪ್ರಸಕ್ತ ಮಾರುಕಟ್ಟೆ ಮೌಲ್ಯ 14.41 ಕೋಟಿ ರೂ.ಬ್ಯಾಂಕ್ ಮತ್ತಿತರೆ ಸಂಸ್ಥೆಗಳಿಂದ 9.58 ಕೋಟಿ ರೂ.ಗಳ ಸಾಲ ಹೊಂದಿದ್ದಾರೆ. ಜಿ.ಎಸ್.ಟಿ, ಪಾಲಿಕೆ ತೆರಿಗೆ ಸೇರಿದಂತೆ ಒಟ್ಟಾರೆ ಸರ್ಕಾರಕ್ಕೆ 1.31 ಕೋಟಿ ರೂ.ಗಳ ಪಾವತಿ ಬಾಕಿ ಇದೆ.
ಜಿ.ಬಿ.ವಿನಯ್ ಕುಮಾರ್ ಬೆಂಗಳೂರಿನ ಗಾರ್ಡನ್ ಸಿಟಿ ಕಾಲೇಜಿನಲ್ಲಿ ಬಿ.ಎಸ್.ಸಿ ಪದವಿ ಪೂರೈಸಿದ್ದಾರೆ. ಪತ್ನಿ ಎಸ್.ಎಸ್.ಸ್ವಾತಿ ಕೈಯಲ್ಲಿ 5 ಸಾವಿರ ರೂ. ನಗದು, 13.48 ಲಕ್ಷ ರೂ.ಗಳ ಠೇವಣಿ ಹಾಗೂ 59.61 ಲಕ್ಷ ರೂ. ಗಳ ಹೂಡಿಕೆ ಹೊಂದಿದ್ದಾರೆ