lingayat; ಲಿಂಗಾಯತರ ಕಡೆಗಣನೆ ಶಾಮನೂರು ಹೇಳಿಕೆ ತಳ್ಳಿ ಹಾಕಿದ ಶಾಸಕ ಶಿವಗಂಗಾ ಬಸವರಾಜ್

ದಾವಣಗೆರೆ, ಅ.13: ಲಿಂಗಾಯತರ (lingayat) ಕಡೆಗಣನೆ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯನ್ನು ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ತಳ್ಳಿ ಹಾಕಿದ್ದಾರೆ.

ದಾವಣಗೆರೆಯಲ್ಲಿ ಹೇಳಿಕೆ ನೀಡಿದ ಅವರು, ಹಿರಿಯರು ಇದ್ದಾರೆ ಯಾವ ಅರ್ಥದಲ್ಲಿ ಹೇಳಿಕೆ‌ ನೀಡಿದ್ದಾರೆ ಎಂದು ಗೊತ್ತಿಲ್ಲ. ಎಲ್ಲಾ ಅಧಿಕಾರಿಗಳಿಗೆ ಸೂಕ್ತ ಸ್ಥಳದಲ್ಲಿ ನೇಮಕವಾಗಿದ್ದಾರೆ. ಎಲ್ಲಾ ಕಡೆ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಶಾಮನೂರು ಶಿವಶಂಕರಪ್ಪನವರಿಗೆ ನಮ್ಮ ನಾಯಕರು ಈಗಾಗಲೇ ಸರಿಯಾಗಿ ಉತ್ತರಿಸಿದ್ದಾರೆ, ಖುಷಿ ಆಯ್ತು ನಾನು ಕೂಡ ವೀರಶೈವ ಸಮಾಜದವರು ಇರಬಹುದು, ಜಾತಿ ಆಧಾರದ ಮೀಸಲಾತಿ ಮೇಲೆ ಕೇವಲ ನೇಮಕಾತಿಗಳು ಆಗುತ್ತವೆ. ವರ್ಗಾವಣೆಗಳನ್ನು ಜಾತಿ ಆಧಾರದ ಮೇಲೆ ಮಾಡಲು ಸಾಧ್ಯವಿಲ್ಲ ಎಂದರು.

Valmiki Jayanti; ವಾಲ್ಮೀಕಿ ಜಯಂತಿಗೆ ಅನುದಾನ ಹೆಚ್ಚಳ; ಜಿಲ್ಲಾ, ತಾಲ್ಲೂಕಿಗೆ 1.5 ಲಕ್ಷ, 35 ಸಾವಿರ

24ನೇ ಮಹಾ ಅಧಿವೇಶನ ಲಿಂಗಾಯತ ಸಮುದಾಯದ ಶಕ್ತಿ ಪ್ರದರ್ಶನವಲ್ಲ. ಕಾಗೆ ಕೂರುವುದಕ್ಕೂ ಟೆಂಗೆ ಮುರಿಯುವುದಕ್ಕೂ ಸರಿಯಾಗಿದೆ. ಕಳೆದ ವರ್ಷ ಮಾಡಬೇಕಿದ್ದ ಕಾರ್ಯಕ್ರಮ ಚುನಾವಣೆ ಹಿನ್ನೆಲೆ ಮುಂದೂಡಿದ್ದರು. ಈಗ ಅದೇ ಗ್ರೌಂಡ್ ನಲ್ಲಿ ಸಮಾವೇಶ ನಡೆಸಲು‌ ಮುಂದಾಗಿದ್ದೇವೆ. ಆದರೆ ಈಗ ಶಾಮನೂರು ಶಿವಶಂಕರಪ್ಪರವರ ಹೇಳಿಕೆಯಿಂದ ಇದಕ್ಕೆ ಮಹತ್ವ ಪಡೆದಿದೆ ಎಂದುಕೊಳ್ಳುತ್ತಿದ್ದಾರೆ ಅದಕ್ಕೂ ಇದಕ್ಕೆ ಯಾವುದೇ ಸಂಬಂಧ ಇಲ್ಲ ಯಥಾವತ್ತಾಗಿ ಸಮಾವೇಶ ಮಾಡಬೇಕಿತ್ತು ಮಾಡುತ್ತೇವೆ ಎಂದು ಹೇಳಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!