narendra modi; ಕನ್ನಡದಲ್ಲೇ ಬಂತು ಪ್ರಧಾನ ಮಂತ್ರಿಗಳ ಕಾರ್ಯಾಲಯದಿಂದ ಪ್ರಶಂಸೆ ಪತ್ರ

ದಾವಣಗೆರೆ, ಅ.13: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರ ಕಾರ್ಯಾಲಯದಿಂದ ನಗರದ ಶ್ರೀ ಸೋಮೇಶ್ವರ ವಿದ್ಯಾಲಯಕ್ಕೆ ಪ್ರಶಂಸೆ ಪತ್ರವನ್ನು ನೀಡಲಾಗಿದೆ.

ಇತ್ತೀಚೆಗೆ ನಡೆದ ಪರೀಕ್ಷಾ ಪೇ ಚರ್ಚಾ ಸಂವಾದವನ್ನು ಶಾಲೆಯಲ್ಲಿ ನಡೆಸಲಾಗಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಾಲಯದಿಂದ ನಡೆದ ಈ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಭಾಗವಹಿಸಿದ್ದರು.

lingayat; ಲಿಂಗಾಯತರ ಕಡೆಗಣನೆ ಶಾಮನೂರು ಹೇಳಿಕೆ ತಳ್ಳಿ ಹಾಕಿದ ಶಾಸಕ ಶಿವಗಂಗಾ ಬಸವರಾಜ್

ಹಲವು ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳಿಗೆ ಪ್ರಧಾನ ಮಂತ್ರಿಗಳ ಕಾರ್ಯಲಯದಿಂದ ಪ್ರಶಂಸೆ ಪತ್ರ ಬಂದಿದೆ. ವಿಶೇಷ ಎಂದರೆ ಪ್ರಶಂಸೆ ಪತ್ರ ಕನ್ನಡದಲ್ಲಿ ಇದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಹಿ ಮಾಡಿದ್ದಾರೆ.

ಈ ಪ್ರಶಂಸೆ ಪತ್ರ ಬಂದ ಹಿನ್ನೆಲೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರಧಾನ ಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿ ಸಂತೋಷ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!