protest; ಗಣಪತಿ ಮೆರವಣಿಗೆಯಲ್ಲಿ ಡಿಜೆ ಬಂದ್ ಗಲಾಟೆ; CPI ಅಮಾನತಿಗೆ ಹಿಂದೂ ಸಂಘಟನೆಗಳ ಪ್ರತಿಭಟನೆ

ದಾವಣಗೆರೆ, ಅ.13: ದಾವಣಗೆರೆಯ ಬಸವರಾಜ ಪೇಟೆಯ ಗಣಪತಿಯ ಮೆರವಣಿಗೆಯಲ್ಲಿ ಗಲಾಟೆ ಸಂಬಂಧ ಬಿಜೆಪಿ ಹಾಗೂ ಹಿಂದೂ ಸಂಘಟನೆ ಮುಖಂಡರು ಸ್ಥಳೀಯ ಆಜಾದ್‌ನಗರ ಸಿಪಿಐ ಇಮ್ರಾನ್‌ರನ್ನು ಅಮಾನತು ಮಾಡಬೇಕು, ಆರೋಪಿಗಳ ಮೇಲೆ ದಾವಣಗೆರೆ ಎಸ್ಪಿ ಉಮಾಪ್ರಶಾಂತ್ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬಡಾವಣೆ ಪೊಲೀಸ್ ಠಾಣೆ ಬಳಿ ಬೃಹತ್ ಪ್ರತಿಭಟನೆ (protest) ನಡೆಸಿದ್ರು.

ಗಣಪತಿ ವಿಸರ್ಜನೆ ವೇಳೆ ಡಿಜೆ ಹಾಕಿದ್ದ ಅನ್ಯ ಕೋಮಿನವರು ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಬಸವರಾಜ ಪೇಟೆಯಲ್ಲಿ ಹಿಂದು ಮತ್ತು ಅನ್ಯ ಕೋಮಿನ ಜನರ ಮಧ್ಯೆ ಗಲಾಟೆ ನಡೆದಿತ್ತು. ಗಲಾಟೆಯಲ್ಲಿ ಹಿಂದು ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿತ್ತು. ಎರಡು ಕೋಮಿನ ನಡುವೆ ಭಾರಿ ಮಾತಿನ ಚಕಮಕಿ ನಡೆದಿತ್ತು. ಪೋಲೀಸ್ ಹಾಗೂ ಎರಡೂ ಸಮುದಾಯದ ಹಿರಿಯ ಮುಖಂಡರಿAದ ಗಲಾಟೆ ತಣ್ಣಗಾಗಿತ್ತು. ಗಣೇಶ ಮೆರವಣಿಗೆಯು ಒಂದು ಕೋಮಿನ ಮೆಡಿಕಲ್ ಶಾಪ್ ಬಳಿ ಹೋಗುವಾಗ ಮೆರವಣಿಗೆಗೆ ಅಡ್ಡಿಪಡಿಸಲಾಗಿತ್ತು. ಆಗ ಕ್ಷಣಾರ್ಧದಲ್ಲಿ ಎರಡೂ ಕೋಮಿನ ನೂರಾರು ಜನರು ಭಾಗಿಯಾಗಿ, ಪರಸ್ಪರ ಘೋಷಣೆ ಕೂಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಹಿರಿಯರ ಮಧ್ಯಸ್ಥಿಕೆಯಿಂದ ಭಾರಿ ಅನಾಹುತ ತಪ್ಪಿತ್ತು.

ಒಂದು ಕೋಮಿನವರಿಂದ ನಮ್ಮ ಭಾಗದಲ್ಲಿ ಡಿಜೆ ಹಾಡುಗಳನ್ನು ಹಾಕುವಂತಿಲ್ಲ, ಮೆರವಣಿಗೆ ಮಾಡುವಂತಿಲ್ಲ ಎಂದು ದೌರ್ಜನ್ಯ  ಮಾಡಿದ್ದರು. ಇದೇ ಸಂದರ್ಭದಲ್ಲಿ ಗಣೇಶ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಕರ ಗುಂಪು ಜಯಘೋಷಣೆಗಳನ್ನು ಕೂಗಿತ್ತು. ಆದ್ದರಿಂದ ಹಿಂದೂ ನಾಯಕರು ಪೋಲಿಸರು ದೌರ್ಜನ್ಯ ಮಾಡಿದವರನ್ನ ಬಿಟ್ಟು ಅಮಾಯಕ ಹಿಂದೂಗಳಿಗೆ ಹಲ್ಲೆ ಮಾಡಿದ್ದಾರೆ ಎಂದು ಪ್ರತಿಭಟನೆ ನಡೆಸಿದ್ರು. ಈ ಸಂಬಂಧ ಜಯದೇವ ವೃತ್ತದಿಂದ ಬಡಾವಣೆ ಪೊಲೀಸ್ ಠಾಣೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಅಲ್ಲದೇ ಗಲಾಟೆ ಮಾಡಿದವರ ಬಂಧನಕ್ಕೆ ಆಗ್ರಹಿಸಿದ ಪ್ರತಿಭಟನಾಕಾರರು ಬಡಾವಣೆ ಪೊಲೀಸ್ ಠಾಣೆ ಮುಂದೆ ಧರಣಿ ಕುಳಿತರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

drought prone; 161 ತೀವ್ರ ಬರಪೀಡಿತ, 34 ಸಾಧಾರಣ ಬರಪೀಡಿತ ತಾಲ್ಲೂಕು, ಘೋಷಣೆ

ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಮುಸ್ಲಿಂರನ್ನ ಓಲೈಕೆ ಮಾಡುತ್ತಿದೆ. ಮುಸ್ಲಿಂ ಗೂಂಡಾಗಳು ನೈತಿಕ ಪೊಲೀಸ್ ಗಿರಿ ಮಾಡುತ್ತಿದ್ದಾರೆ. ಮೆರವಣಿಗೆ ವೇಳೆ ಡಿಜೆ ಹಾಕದಂತೆ ಅಡ್ಡಿಪಡಿಸಿದ್ದಾರೆ. ಗಣಪತಿ ಮೆರವಣಿಗೆ ವೇಳೆ ಮುಸ್ಲಿಂ ದೌರ್ಜನ್ಯ ಖಂಡಿಸಿದವರ ಮೇಲೆ ಕ್ರಮ ಕೈಗೊಳ್ಳಿ. ಮೊಹರಂ ಹಾಗೂ ಈದ್ ಮಿಲಾದ್ ವೇಳೆ ಮುಸ್ಲಿಂರು ಬಾವುಟಗಳನ್ನ ಕಟ್ಟಿದ್ದರು. ಅವುಗಳಿಗೆ ನಾವು ವಿರೋಧ ಮಾಡಲಿಲ್ಲ. ಆದರೆ, ನಾವು ಗಣಪತಿ ಮೆರವಣಿಗೆ ಮಾಡುತ್ತಿದ್ದರೆ ಅಡ್ಡಿಪಡಿಸಿದ್ದಾರೆ. ಡಿಜೆ ಹಾಕಿದ್ದ ಯುವಕನಿಗೆ ತೊಂದರೆ ಮಾಡಿದ್ದಾರೆ. ದಾವಣಗೆರೆಯಲ್ಲಿ ತಾಲಿಬಾನ್ ಸಂಸ್ಕೃತಿ ಸೃಷ್ಟಿಯಾಗಿದೆ. ಕೂಡಲೇ ಗಲಾಟೆ ನಡೆಸಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಈ ರೀತಿಯಾಗುತ್ತಿದೆ. ಇದಕ್ಕೆ ಸರ್ಕಾರ ಕೂಡ ಕುಮ್ಮಕ್ಕು ನೀಡುತ್ತಿದೆ. ಪೊಲೀಸರು ಮುಸ್ಲಿಂ ಬೆಂಬಲಿಗರAತೆ ವರ್ತನೆ ಮಾಡಿದ್ದಾರೆ ಎಂದರು.

ಎಸ್ಪಿ ಉಮಾಪ್ರಶಾಂತ್ ಮಾತನಾಡಿ, ಘಟನೆ ಸಂಬಂಧ ಹಿಂದೂ ಮುಖಂಡರು ಮನವಿ ಕೊಟ್ಟಿದ್ದಾರೆ. ಘಟನಾವಳಿಗಳ ಬಗ್ಗೆ ಪರಿಶೀಲನೆ ನಡೆಸಿ ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತೇನೆ ಎಂದರು. ಒಟ್ಟಿನಲ್ಲಿ ಡಿಜೆ ಬಂದ್ ಮಾಡಿದ್ದ ಕಾರಣ ಇಷ್ಟೇಲ್ಲಾ ಘಟನೆ ನಡೆದಿದ್ದು, ಪೊಲೀಸರ ಮುಂದಿನ ನಡೆಯೇನು ಎಂದು ಕಾದು ನೋಡಬೇಕಿದೆ.ಈ ಸಂದರ್ಭದಲ್ಲಿ ಹಿಂದೂ ಮುಖಂಡರಾದ ರಾಜನಹಳ್ಳಿ ಶಿವಕುಮಾರ್, ಬಿಜೆ ಅಜೇಯ್‌ಕುಮಾರ್, ಶ್ರೀನಿವಾಸ ದಾಸಕರಿಯಪ್ಪ, ಕೆಎಂ ವೀರೇಶ್ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!