ಅಖಾಡದಲ್ಲಿ ಮೋದಿ‌ ಮೋಡಿ.. ಬೆಂಗಳೂರು ‘ರೋಡ್ ಷೋ’ನಲ್ಲಿ ಜನೋತ್ಸಾಹ; ಹೂಮಳೆಯ ಸ್ವಾಗತ

ಅಖಾಡದಲ್ಲಿ ಮೋದಿ’ ಮೋದಿ.. ಬೆಂಗಳೂರು ‘ರೋಡ್ ಶೋ’ನಲ್ಲಿ ಜನೋತ್ಸಾಹ; ಹೂಮಳೆಯ ಸ್ವಾಗತ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರೋಡ್ ಷೋ ಇಂದು ಬೆಂಗಳೂರಿನಲ್ಲಿ ಜನಸಾಗರ, ಜನೋತ್ಸಾಹ, ಸಂಭ್ರಮೋಲ್ಲಾಸದೊಂದಿಗೆ ಆರಂಭವಾಯಿತು. ಸಾವಿರಾರು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ‘ಮೋದಿ ಮೋದಿ’ ಎಂದು ಕೂಗುತ್ತ, ಹೂವಿನ ಸುರಿಮಳೆಗೈಯುತ್ತ ನರೇಂದ್ರ ಮೋದಿಯವರ ರೋಡ್ ಷೋವನ್ನು ಸ್ವಾಗತಿಸಿದರು.

ಸೋಮೇಶ್ವರ ಸಭಾಭವನ ಬಳಿಯಿಂದ ಆರಂಭವಾದ ರೋಡ್ ಷೋವು ಸುಮಾರು 26 ಕಿಮೀ ಕ್ರಮಿಸಿದೆ. ಜೆ.ಪಿ. ನಗರ, ಜಯನಗರ, ಸೌತ್ ಎಂಡ್ ಸರ್ಕಲ್, ಮಾಧವರಾವ್ ವೃತ್ತ, ರಾಮಕೃಷ್ಣ ಆಶ್ರಮ, ಉಮಾ ಥಿಯೇಟರ್ ವೃತ್ತ, ಮೈಸೂರು ಸಿಗ್ನಲ್, ಟೋಲ್ ಗೇಟ್ ಸಿಗ್ನಲ್, ಗೋವಿಂದರಾಜನಗರ, ಮಾಗಡಿ ರೋಡ್ ಜಂಕ್ಷನ್, ಶಂಕರ ಮಠ ಸರ್ಕಲ್, ಮಲ್ಲೇಶ್ವರ ಸರ್ಕಲ್, ಸಂಪಿಗೆ ರಸ್ತೆಯ 18ನೇ ಅಡ್ಡರಸ್ತೆ ಜಂಕ್ಷನ್ ಮೂಲಕ ಈ ರೋಡ್ ಷೋ ತೆರಳಿತು.

 

ಮೋದಿಯವರನ್ನು ಹತ್ತಿರದಿಂದ ಕಾಣಲು ಮತ್ತು ಪ್ರಧಾನಿಯವರ ವಾಹನ ಮತ್ತು ಮೋದಿಯವರತ್ತ ಹೂವುಗಳನ್ನು ಎಸೆದು ಅವರನ್ನು ಸ್ವಾಗತಿಸಲು ಈ ರಸ್ತೆಯುದ್ದಕ್ಕೂ ಮಕ್ಕಳು, ಹಿರಿಯರು ಸೇರಿ ಅಭಿಮಾನಿಗಳು, ಸಾರ್ವಜನಿಕರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾಯುತ್ತಿದ್ದರು.

ಇಂದು ಮತ್ತು ನಾಳೆ ಎರಡು ದಿನಗಳ ರೋಡ್ ಷೋ ನಡೆಯಲಿದ್ದು, ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಸಂಸದರಾದ ಪಿ.ಸಿ.ಮೋಹನ್ ಮತ್ತು ತೇಜಸ್ವಿ ಸೂರ್ಯ ಅವರು ರೋಡ್ ಷೋ ಸಂದರ್ಭದಲ್ಲಿ ಜೊತೆಗೆ ಇದ್ದರು.

Leave a Reply

Your email address will not be published. Required fields are marked *

error: Content is protected !!